ETV Bharat / state

ಪ್ರವಾಹ ಸಂತ್ರಸ್ತರಿಗೆ ಎಸ್​​ಸಿಪಿ‌-ಟಿಎಸ್‌ಪಿ ಯೋಜನೆ ಹಣ; ಮನೆ ನಿರ್ಮಾಣಕ್ಕೆ ಬಳಸಲು ಸೂಚನೆ - Instructions to use the SCP-TSP project

ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಭಾರಿ ಪ್ರವಾಹ ಲಕ್ಷಾಂತರ ಜನರ ಬದುಕನ್ನು ಬೀದಿಗೆ ತಳ್ಳಿದೆ. ಹೀಗಾಗಿ ನೆರೆ‌ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಎಸ್​​ಸಿಪಿ‌- ಟಿಎಸ್‌ಪಿ ಯೋಜನೆ ಹಣವನ್ನು ಬಳಸುವಂತೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ
author img

By

Published : Sep 13, 2019, 9:03 PM IST

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನದಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಶೇ. 50 ರಷ್ಟು ಅನುದಾನವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸುವಂತೆ ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ‌ ಕೊಟ್ಟರು.

ಎಸ್‌ಟಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಈ ಯೋಜನೆಯ ಅನುದಾನವನ್ನು ನೆರೆಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿಗೆ ಬಳಕೆ ಮಾಡಬೇಕು. ಸಹಕಾರ ಇಲಾಖೆಯು ಪರಿಶಿಷ್ಟರನ್ನು ಪಿಕೆಪಿಎಸ್ ಸಂಘಗಳ ಸದಸ್ಯರನ್ನಾಗಿಸಬೇಕು. ಕಂದಾಯ ಇಲಾಖೆಯಿಂದ ದಾಖಲಾತಿ ಪಡೆದು ಎಲ್ಲರನ್ನೂ ಸದಸ್ಯರನ್ನಾಗಿಸಿ, ಹಮಾಲಿಗಳಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ನಿರ್ದೇಶನ ನೀಡಿದ್ರು.

ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ

ಪ್ರವಾಹ ಸಂತ್ರಸ್ತರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳೂ ಎಸ್‌ಟಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಕ್ರಿಯಾಯೋಜನೆ ಮಾರ್ಪಡಿಸಿ ಆದ್ಯತೆಯ ಮೇರೆಗೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ 32ಸಾವಿರ ಕೋಟಿ ರೂ ನಷ್ಟ ಸಂಭವಿಸಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆ ಹಾನಿ, ತಗ್ಗು ಪ್ರದೇಶದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಕಳೆದುಕೊಂಡಿದ್ದಾರೆ. ಸುಮಾರು 2.35 ಲಕ್ಷ ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ‌ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಪುನರ್ವಸತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಆರ್‌ಡಿಸಿಎಲ್ ಮೂಲಕ ಕೈಗೊಳ್ಳುತ್ತಿರುವ ಇಎಲ್‌ಸಿ ಯೋಜನೆಯಲ್ಲಿ ಅಕ್ರಮವಾಗಿದ್ದರೆ, ತನಿಖೆಯಾಗಲಿ. ಈಗಾಗಲೇ ದೂರು ಕೊಟ್ಟಿದ್ದರೆ ಒಳ್ಳೆಯದು. ನನಗೆ ಮಾಹಿತಿ ಇಲ್ಲ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_04_KARAJOLASCPTSP_BYTE_SCRIPT_7201951

ಎಸ್ ಸಿಪಿ‌ಟಿಎಸ್ ಪಿ ಯೋಜನೆ ಹಣವನ್ನು ನೆರೆ‌ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಬಳಸಲು ಸೂಚನೆ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಶೇ. 50 ರಷ್ಟು ಅನುದಾನವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಮೂತ ಸೌಕರ್ಯ ಅಭಿವೃದ್ಧಿಗೆ ಬಳಸುವಂತೆ ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ‌ ನೀಡಿದ್ದಾರೆ.

ಇಂದು ದಿನಪೂರ್ತಿ ಎಸ್‌ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಸ್ ಟಿಪಿ ಟಿಎಸ್ ಪಿ ಯೋಜನೆಯ ಅನುದಾನವನ್ನು ನೆರೆ ಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿ ಗೆ ಬಳಕೆ ಮಾಡಬೇಕು. ಸಹಕಾರ ಇಲಾಖೆಯು ಪರಿಶಿಷ್ಟರನ್ನು ಪಿಕೆಪಿಎಸ್ ಸಂಘಗಳ ಸದಸ್ಯರನ್ನಾಗಿಸಬೇಕು. ಕಂದಾಯ ಇಲಾಖೆಯಿಂದ ದಾಖಲಾತಿ ಪಡೆದು ಎಲ್ಲರಿಗೂ ಸದಸ್ಯರನ್ನಾಗಿಸಿ, ಹಮಾಲಿಗಳಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಸಂತ್ರಸ್ತರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳೂ ಎಸ್ ಟಿ ಪಿ ಮತ್ತು ಟಿಎಸ್ ಪಿ ಕಾರ್ಯ ಕ್ರಮಗಳ ಕ್ರಿಯಾಯೋಜನೆ ಮಾರ್ಪಡಿಸಿ ಆದ್ಯತೆಯ ಮೇರೆಗೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ 32ಸಾವಿರ ಕೋಟಿ ರೂ ನಷ್ಟವಾಗಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆ ಹಾನಿ, ತಗ್ಗು ಪ್ರದೇಶದಲ್ಲಿ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಕಳೆದುಕೊಂಡಿದ್ದಾರೆ. ಸುಮಾರು 2.35 ಲಕ್ಷ ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪುನರ್ವಸತಿ ಕಲ್ಪಿಸಬೇಕಾಗಿದೆ.ಪ್ರವಾಹ ಪೀಡಿತ ಪ್ರದೇಶಗಳಲ್ಲಿ‌ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಪುನರ್ವಸತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಎಲ್ಲಾ ಇಲಾಖೆಗಳು ಎಸ್ ಟಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮಗಳ ಕ್ರಿಯಾಯೋಜನೆಯನ್ನು ಮಾರ್ಪಡಿಸಿಕೊಂಡು ಅನುಷ್ಟಾನಗೊಳಿಸಬೇಕು‌ ಎಂದು ಸೂಚಿಸಿದ್ದಾರೆ.

ಜತೆಗೆ ಕೆಲ ಇಲಾಖೆಗಳು ಎಸ್ ಟಿಪಿ ಮತ್ತು ಟಿಎಸ್ ಪಿ ಅನುದಾನ ಬಳಸುವಲ್ಲಿ ಹಿಂದೇಟು ಹಾಕುತ್ತಿವೆ. ಅಂಥ ಇಲಾಖೆಯ ಅನುದಾನವನ್ನು ಹೆಚ್ಚಿಗೆ ಬೇಡಿಕೆ ಇರುವ ಇಲಾಖೆಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಸೆ.16 ರಂದು ಸಿಎಂ ಅಧ್ಯಕ್ಷತೆಯಲ್ಲಿ‌ ನಡೆಯಲಿರುವ ಪರಿಷತ್ ಸಭೆಗೆ ಕ್ರಿಯಾ ಯೋಜನೆಯೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದರು.

ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಆರ್ ಡಿಸಿಎಲ್ ಮೂಲಕ ಕೈಗೊಳ್ಳುತ್ತಿರು ಇಎಲ್‌ಸಿ ಯೋಜನೆಯಲ್ಲಿ ಅಕ್ರಮವಾಗಿದ್ದರೆ, ತನಿಖೆಯಾಗಲಿ. ಈಗಾಗಲೇ ದೂರು ಕೊಟ್ಟಿದ್ದರೆ ಒಳ್ಳೆಯದು. ನನಗೆ ಮಾಹಿತಿ ಇಲ್ಲ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.