ಬೆಂಗಳೂರು: ಮಹಾನಗರದ ರಸ್ತೆ ಗುಂಡಿಗೆ ಜೀವ ಬಲಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು. ರಸ್ತೆ ಗುಂಡಿಗೆ ಸಂಸದರು, ಶಾಸಕರ ಪೋಸ್ಟರ್ ಇಟ್ಟು ವ್ಯಂಗ್ಯದ ಜತೆ ಅದರ ಮೇಲೆ ಸಾರ್ವಜನಿಕರು ವಾಹನ ಚಲಾಯಿಸುವಂತೆಯೂ ಮನವಿ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಾಜಿನಗರ, ಮಲ್ಲೇಶ್ವರಂಗಳಲ್ಲಿ ಈ ಅಭಿಯಾನ ನಡೆಯಿತು. ಆಯಾಯ ಕ್ಷೇತ್ರದ ಶಾಸಕರ ಬಿತ್ತಿ ಚಿತ್ರವನ್ನು ರಸ್ತೆ ಗುಂಡಿಗಳಿಗೆ ಹಾಕಿ ಕೈ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ನಾಳೆ ಮತ್ತೊಂದು ಪ್ರತಿಭಟನೆ: ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಬಿಜೆಪಿ ಸರ್ಕಾರದ ವಿರುದ್ಧ ನಾಳೆ (ಶುಕ್ರವಾರ) ಬೆಳಗ್ಗೆ 11.30 ಕ್ಕೆ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮಹಾತ್ಮಗಾಂಧಿ ಪ್ರತಿಮೆಯಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ರಸ್ತೆ ಗುಂಡಿಗೆ ಮತ್ತೊಂದು ಬಲಿ.. ಸ್ಕೂಟರ್ನಿಂದ ಬಿದ್ದಾಗ ಬಸ್ ಹರಿದು ಗಾಯಗೊಂಡಿದ್ದ ಮಹಿಳೆ ಸಾವು!