ETV Bharat / state

ಉ.ಕ. ಪ್ರವಾಹಪೀಡಿತ ಪ್ರದೇಶಗಳಿಗೆ ಇನ್ಫೋಸಿಸ್‍ನಿಂದ 10 ಕೋಟಿ ರೂ. ಸಹಾಯ - ನೈಸರ್ಗಿಕ ವಿಕೋಪ

ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲೆಲ್ಲಾ ಇನ್ಫೋಸಿಸ್​ ಫೌಂಡೇಶನ್‍ ತನ್ನ ಸಹಾಯ ಹಸ್ತ ಚಾಚುತ್ತಲೇ ಬಂದಿದೆ. ಅದೇ ರಿತಿ ಈಗ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಪರಿಹಾರ ಕಾರ್ಯಕ್ಕಾಗಿ ₹10 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದೆ.

ಪ್ರವಾಹಪೀಡಿತ ಪ್ರದೇಶಗಳಿಗೆ ಇನ್‍ಫೋಸಿಸ್‍ನಿಂದ 10 ಕೋಟಿ ರೂ. ಸಹಾಯ
author img

By

Published : Aug 8, 2019, 8:33 PM IST

ಬೆಂಗಳೂರು: ಮಹಾಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಪರಿಹಾರ ಕಾರ್ಯಕ್ಕೆ ಇನ್ಫೋಸಿಸ್‍ ಸಂಸ್ಥೆಯ ಲೋಕೋಪಕಾರಿ ಹಾಗೂ ಸಿಎಸ್‍ಆರ್ ಸೇವೆಯ ಅಡಿ ₹10 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದೆ.

ಪ್ರವಾಹಪೀಡಿತ ಪ್ರದೇಶಗಳಿಗೆ ಇನ್‍ಫೋಸಿಸ್‍ನಿಂದ 10 ಕೋಟಿ ರೂ. ಸಹಾಯ

ಹಂತ ಹಂತವಾಗಿ ಪರಿಹಾರ ಕಾರ್ಯ ಸಂಸ್ಥೆಯಡಿ ಇದು ನಡೆಯಲಿದೆ. ಇನ್ಫೋಸಿಸ್​ ಸಂಸ್ಥೆಯ ಸಂಪರ್ಕ ಜಾಲ ಹಾಗೂ ಸ್ವಯಂ ಸೇವಕರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ರಾಯಚೂರು, ಬಾಗಲಕೋಟೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪರಿಹಾರ ಕಾರ್ಯ ಆರಂಭವಾಗಿದೆ. ಫೌಂಡೇಶನ್ ಜೀವರಕ್ಷಕ ಕಿಟ್‍ ಸಿದ್ಧಪಡಿಸಿದ್ದು ಇದರಲ್ಲಿ ತುರ್ತು ಹಾಗೂ ಅಗತ್ಯ ವಸ್ತುಗಳಾದ ನೀರು, ಆಹಾರ, ಬಟ್ಟೆ, ವೈದ್ಯಕೀಯ ಸರಕುಗಳನ್ನ ಜನರ ಸಹಾಯಕ್ಕಾಗಿ ನೀಡಲಾಗುತ್ತಿದೆ.

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಸಾವು-ನೋವು ಸಂಭವಿಸುತ್ತಿದ್ದು, ರಸ್ತೆ ಮತ್ತು ರೈಲು ಸಂಪರ್ಕ ಕೂಡ ಕಡಿತಗೊಂಡಿದೆ. ಹೀಗಾಗಿ ತೊಂದರೆಗೀಡಾಗಿರುವ ಪ್ರದೇಶಗಳ ಬಗೆಗೂ ಗಮನ ಹರಿಸುತ್ತಿದ್ದು, ಪರಿಹಾರ ಕಾರ್ಯ ಅಗತ್ಯವಿರುವ ಕಡೆಗಳಲ್ಲಿ ಸಹಾಯ ಹಸ್ತ ಚಾಚಲಿದೆ.

ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲೆಲ್ಲಾ ಇನ್ಫೋಸಿಸ್​ ಫೌಂಡೇಶನ್‍ ತನ್ನ ಸಹಾಯ ಹಸ್ತ ಚಾಚುತ್ತಲೇ ಬಂದಿದೆ. ಇತ್ತೀಚೆಗೆ ಒಡಿಶಾದಲ್ಲಿ ಎದುರಾಗಿದ್ದ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳ ನಾಗರಿಕರ ಸಹಾಯಕ್ಕೂ ಸಹ ಧಾವಿಸಿತ್ತು. ಕೇರಳದ ನೆರೆ ಪೀಡಿತ ಪ್ರದೇಶ, ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಎದುರಾಗಿದ್ದ ಜಲಪ್ರಳಯ ಸಂದರ್ಭ ಮತ್ತು ಅಸ್ಸೋಂ ನೆರೆ ಸಂದರ್ಭ ಸೇರಿದಂತೆ ಹಲವು ಸಮಯಗಳಲ್ಲಿ ಈ ಸಂಸ್ಥೆ ಸಹಾಯಹಸ್ತ ಚಾಚಿದ್ದನ್ನು ಇಲ್ಲಿ ಸ್ಮರಿಸಬಹುದು.

Intro:newsBody:ಪ್ರವಾಹಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ಇನ್‍ಫೋಸಿಸ್‍ನಿಂದ 10 ಕೋಟಿ ರೂ. ಸಹಾಯ

ಬೆಂಗಳೂರು: ಮಳೆಯಿಂದ ಉಂಟಾದ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಪರಿಹಾರ ಕಾರ್ಯಕ್ಕೆ ಇನ್‍ಫೋಸಿಸ್‍ ಸಂಸ್ಥೆಯ ಲೋಕೋಪಕಾರಿ ಹಾಗೂ ಸಿಎಸ್‍ಆರ್ ಸೇವೆಯ ಅಡಿ 10 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡುವ ಬದ್ಧತೆ ಪ್ರದರ್ಶಿಸಿದೆ.
ಹಂತ ಹಂತವಾಗಿ ಪರಿಹಾರ ಕಾರ್ಯ ಸಂಸ್ಥೆಯ ಅಡಿ ನಡೆಯಲಿದೆ. ಇನ್‍ಫೋಸಿಸ್‍ ಸಂಸ್ಥೆಯ ಸಂಪರ್ಕ ಜಾಲ ಹಾಗೂ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ರಾಯಚೂರು, ಬಾಗಲಕೋಟೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪರಿಹಾರ ಕಾರ್ಯ ಆರಂಭವಾಗಿದೆ. ಫೌಂಡೇಶನ್ ಜೀವರಕ್ಷಕ ಕಿಟ್‍ ಸಿದ್ಧಪಡಿಸಿದ್ದು ಇದರಲ್ಲಿ ತುರ್ತು ಮೂಲಭೂತ ಅಗತ್ಯ ವಸ್ತುಗಳಾದ ನೀರು, ಆಹಾರ, ಬಟ್ಟೆ, ವೈದ್ಯಕೀಯ ಸರಕುಗಳು ಬಳಲಿರುವ ನಾಗರಿಕರ ಸಹಾಯಕ್ಕೆ ನೀಡಲಾಗುತ್ತಿದೆ.
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಸಾವುನೋವು ಸಂಭವಿಸುತ್ತಿದ್ದು, ರಸ್ತೆ ಮತ್ತು ರೈಲು ಸಂಪರ್ಕ ಕೂಡ ಕಡಿತಗೊಂಡಿದೆ. ಇದರ ಜತೆ ಫೌಂಡೇಶನ್‍ ಇತರೆ ತೊಂದರೆಗೀಡಾಗಿರುವ ಪ್ರದೇಶಗಳ ಬಗೆಗೂ ಗಮನ ಹರಿಸುತ್ತಿದ್ದು, ಪರಿಹಾರ ಕಾರ್ಯ ಅಗತ್ಯವಿರುವತ್ತ ಸಹಾಯ ಹಸ್ತ ಚಾಚಲಿದೆ.
ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲೆಲ್ಲಾ ಇನ್‍ಫೋಸಿಸ್‍ ಫೌಂಡೇಶನ್‍ ತನ್ನ ಸಹಾಯ ಹಸ್ತ ಚಾಚುತ್ತಲೇ ಬಂದಿದೆ. ಇತ್ತೀಚೆಗೆ ಒಡಿಶಾದಲ್ಲಿ ಎದುರಾಗಿದ್ದ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳ ನಾಗರಿಕರ ಸಹಾಯಕ್ಕೆ ಧಾವಿಸಿತ್ತು. ಕೇರಳದ ನೆರೆ ಪೀಡಿತ ಪ್ರದೇಶ, ಕರ್ನಾಟಕದ ಕೊಡುಗು ಜಿಲ್ಲೆಯಲ್ಲಿ ಕಳೆದ ವರ್ಷ ಎದುರಾದ ಸಮಸ್ಯೆ ಸಂದರ್ಭ ಮತ್ತು ಆಸ್ಸಾಂನ ನೆರೆ ಸಂದರ್ಭ ಸೇರಿದಂತೆ ಹಲವು ಸಮಯಗಳಲ್ಲಿ ಕೂಡ ಸಹಾಯಹಸ್ತ ಚಾಚಿತ್ತು.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.