ETV Bharat / state

ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ - Lungs cancer

ಭಾರತೀಯರು ಕ್ಯಾನ್ಸರ್‌ ಭೀತಿಯನ್ನು ಎದುರಿಸುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ 2,400 ಆರೋಗ್ಯವಂತ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ರೋಗಗಳ ತಪಾಸಣೆ ನಡೆಸಿದಾಗ ಶೇ 24 ರಷ್ಟು ಗರ್ಭಕಂಠ ಕ್ಯಾನ್ಸರ್, ಶೇ 20 ರಷ್ಟು ಸ್ತನ ಕ್ಯಾನ್ಸರ್, ಶೇ 5 ರಿಂದ 6 ರಷ್ಟು ಶ್ವಾಸಕೋಶ ಕ್ಯಾನ್ಸರ್ ಮತ್ತು ಶೇ 2 ರಿಂದ 3 ರಷ್ಟು ಕರುಳು ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಇರುವುದು ಪತ್ತೆಯಾಗಿದೆ.

ಕ್ಯಾನ್ಸರ್‌
ಕ್ಯಾನ್ಸರ್‌
author img

By

Published : Feb 4, 2022, 7:13 AM IST

ಬೆಂಗಳೂರು: ಭಾರತದಲ್ಲಿ ಪ್ರತಿ ನಾಲ್ಕು ಆರೋಗ್ಯವಂತ ಮಹಿಳೆಯರ ಪೈಕಿ ಒಬ್ಬರು ಗರ್ಭಕಂಠದ ಕ್ಯಾನ್ಸರ್ ಸಮಸ್ಯೆ ಹೊಂದಿದ್ದಾರೆ. ಪ್ರತಿ ಐವರು ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ ಎಂದು ಡಾ.ಕೌಸಿಫ್ ಅಹ್ಮದ್ ಹೇಳಿದ್ದಾರೆ.

ಈಟಿವಿ ಭಾರತದೊಂದಿಗೆ ಕ್ಯಾನ್ಸರ್ ದಿನದ ನಿಮಿತ್ತ ಮಾತನಾಡಿದ ಅವರು, ಸಿಲಿಕಾನ್ ಸಿಟಿಯಲ್ಲಿ ಕಳೆದ 10 ತಿಂಗಳಲ್ಲಿ 2,400 ಆರೋಗ್ಯವಂತ ಮಹಿಳೆಯರಿಗೆ ನಡೆಸಿದ ಕ್ಯಾನ್ಸರ್ ತಪಾಸಣೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಪ್ರತಿ 20 ಆರೋಗ್ಯವಂತರಲ್ಲಿ ಒಬ್ಬರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಕಂಡು ಬಂದಿದ್ದು, ಇದು ಕಾಲಕ್ರಮೇಣ ಶ್ವಾಸಕೋಶದ ಕ್ಯಾನ್ಸರ್ ಆಗಿ ಬೆಳವಣಿಗೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಪ್ರತಿ 50 ಮಹಿಳೆಯರ ಪೈಕಿ ಒಬ್ಬರಲ್ಲಿ ಕರುಳು ಮತ್ತು ಪ್ಲಾಸ್ಟೇಟ್ ಕ್ಯಾನ್ಸರ್‌ನ ಗುಣ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಕ್ಯಾನ್ಸರ್ ಸಮಸ್ಯೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಬಯಾಪ್ಸಿ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯ ಡಾ.ಕೌಸಿಫ್ ಅಹ್ಮದ್ ಸಲಹೆ ನೀಡಿದ್ದಾರೆ.

ಡಾ.ಕೌಸಿಫ್ ಅಹ್ಮದ್
ಡಾ.ಕೌಸಿಫ್ ಅಹ್ಮದ್

ಕಳೆದ 10 ತಿಂಗಳಲ್ಲಿ 2,400 ಆರೋಗ್ಯವಂತ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ರೋಗಗಳ ತಪಾಸಣೆ ನಡೆಸಿದ ನಂತರ ನಾವು ಶೇ 24 ರಷ್ಟು ಗರ್ಭಕಂಠ ಕ್ಯಾನ್ಸರ್, ಶೇ 20 ರಷ್ಟು ಸ್ತನ ಕ್ಯಾನ್ಸರ್, ಶೇ 5 ರಿಂದ 6 ರಷ್ಟು ಶ್ವಾಸಕೋಶ ಕ್ಯಾನ್ಸರ್ ಮತ್ತು ಶೇ 2 ರಿಂದ 3 ರಷ್ಟು ಕರುಳು ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಇರುವುದನ್ನು ಪತ್ತೆ ಮಾಡಿದ್ದೇವೆ ಎಂದಿದ್ದಾರೆ.

ಓದಿ: ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕಟ್ಟಡ ಕುಸಿದು ದುರಂತ: 5 ಜನ ದುರ್ಮರಣ

ಕ್ಯಾನ್ಸರ್‌ ಭೀತಿ: ಭಾರತೀಯರು ಕ್ಯಾನ್ಸರ್‌ ಭೀತಿಯನ್ನು ಎದುರಿಸುತ್ತಿದ್ದಾರೆ. ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ದೊಡ್ಡ ಮಟ್ಟಿದ ಆಧುನಿಕತೆ ಬಂದಿದ್ದಾಗ್ಯೂ ಸಾರ್ವಜನಿಕರಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡಲಾಗದು ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಆದರೆ, ವಾಸ್ತವಾಂಶದಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಿದರೆ ಅದನ್ನು ಸುಲಭವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು: ಸ್ಟೇಜ್ 1 ರಲ್ಲಿ ಪತ್ತೆ ಮಾಡಿದರೆ ಕ್ಯಾನ್ಸರ್ ರೋಗಿಗಳು ಬದುಕುಳಿಯುವ ಪ್ರಮಾಣ ಶೇ 93 ರಷ್ಟಿದೆ. ಸ್ಟೇಜ್ 4 ರ ಹಂತದಲ್ಲಿ ಪತ್ತೆಯಾದರೆ ಪ್ರಮಾಣ ಕೇವಲ ಶೇ 24 ರಷ್ಟಿದೆ. ಆರೋಗ್ಯಕರ ಲಕ್ಷಣ ರಹಿತ ವ್ಯಕ್ತಿಗಳು ಪ್ರತಿ ವರ್ಷ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು ಮತ್ತು ರೋಗದ ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯಬಾರದು.

ಕಾಲಕಾಲಕ್ಕೆ ತಪಾಸಣೆ: ಜನರು ಆರೋಗ್ಯವಂತರಾಗಿದ್ದಾಗಲೇ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಒತ್ತಡದ ಜೀವನ ಸಾಗಿಸುತ್ತಿರುವವರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದೇ ರೀತಿ, ಆಗಾಗ ವ್ಯವಹಾರ ಸಂಬಂಧಿತ ಪ್ರಯಾಣಗಳನ್ನು ನಡೆಸುವವರು, ನಿದ್ದೆ ಮತ್ತು ವ್ಯಾಯಾಮದ ಕೊರತೆ ಇರುವವರು ಸಹ ತಪಾಸಣೆ ಮಾಡಿಸಿಕೊಳ್ಳಬೇಕು.

ಕ್ಯಾನ್ಸರ್ ಇರುವ ಕುಟುಂಬದಲ್ಲಿನ ಸದಸ್ಯರು ಮತ್ತು ಬೊಜ್ಜು, ಧೂಮಪಾನ ಅಥವಾ ಅತಿಯಾದ ಮದ್ಯಪಾನ ಮಾಡುವವರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ. ಆರೋಗ್ಯವಂತರ ತಪಾಸಣೆಯ ವೇಳೆ ಪ್ರಮುಖವಾಗಿ ಸ್ತನ ಕ್ಯಾನ್ಸರ್, ಗರ್ಭಕಂಡ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ಲಕ್ಷಣಗಳು ಇರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಓದಿ:ಭಾರತ ಜೊತೆ ಅಮೆರಿಕ ಸಂಬಂಧ ತನ್ನದೇ ಅರ್ಹತೆ ಮೇಲೆ ನಿಂತಿದೆ; ರಷ್ಯಾ ಜತೆಗಿನ ಉದ್ವಿಗ್ನತೆ ಪರಿಣಾಮ ಬೀರಲ್ಲ ಎಂದ ಯುಎಸ್‌

ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿಕೊಂಡರೆ ಉತ್ತಮ: ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಜೀವನಶೈಲಿಯನ್ನು ಮಾರ್ಪಾಡು ಮಾಡಿಕೊಳ್ಳಲು ಮತ್ತು ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ.

ಇದಕ್ಕೆ ಜಪಾನ್ ಒಂದು ಉತ್ತಮ ಉದಾಹರಣೆಯಾಗಿದೆ. ಏಕೆಂದರೆ, ಅಲ್ಲಿ ಆರಂಭಿಕ ಹಂತದಲ್ಲಿ ರೋಗ ಲಕ್ಷಣಗಳನ್ನು ತಪಾಸಣೆ ಮಾಡಿ ಪತ್ತೆ ಮಾಡಲಾಗುತ್ತದೆ. ಹೀಗಾಗಿ ಜಪಾನ್‌ನಲ್ಲಿ ಜನರ ಜೀವಿತಾವಧಿ ವಿಶ್ವದಲ್ಲಿಯೇ ಅತ್ಯಧಿಕವಾಗಿದೆ. ಜಪಾನ್‌ನಲ್ಲಿ ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಂಡು ರೋಗಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆದುಕೊಳ್ಳುತ್ತಾರೆ ಎಂದು ಕೌಸಿಫ್ ಅಹ್ಮದ್ ಹೇಳಿದ್ದಾರೆ.

ಪ್ರತಿ 10 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್: ಭಾರತದಲ್ಲಿ ಟಾಪ್ 10 ಕ್ಯಾನ್ಸರ್‌ಗಳಿಂದ ಸಾವಿನ ಪ್ರಮಾಣ ಶೇ 70 ರಷ್ಟಿದೆ. ಭಾರತದಲ್ಲಿ ಹೃದಯಾಘಾತದ ನಂತರ ಅಂದರೆ ಎರಡನೇ ಸ್ಥಾನದಲ್ಲಿ ಕ್ಯಾನ್ಸರ್ ಆಗಿದೆ. ಪ್ರತಿ 10 ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ.

ಕ್ಯಾನ್ಸರ್ ಪತ್ತೆ ಹಚ್ಚಲು ಟೆಕ್ನಾಲಜಿಗಳು: ಈಗಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸಾಫ್ಟ್‌ವೇರ್‌ ಬೆಂಬಲದೊಂದಿಗೆ ರೇಡಿಯಾಲಜಿ ಅಥವಾ ಇಮೇಜ್ ಆಧಾರಿತ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಮಾಡಲಾಗುತ್ತದೆ. ಕ್ಯಾನ್ಸರ್ ಸ್ಕ್ರೀನಿಂಗ್ ಬಳಸಲಾಗುವ ಉಪಕರಣಗಗಳಲ್ಲಿ ಎಕ್ಸ್‌ರೇ ಬದಲಿಗೆ ಶ್ವಾಸಕೋಶದ ಕ್ಯಾನ್ಸರ್ ಪತ್ತೆಗಾಗಿ ಆಲ್ಟಾ ಲೋ ಡೋಸ್ ಸಿಟಿ ಸ್ಕ್ಯಾನ್ ಒಳಗೊಂಡಿರುತ್ತದೆ.

ಕೊಲೊರೆಕ್ಟಲ್‌ ಕ್ಯಾನ್ಸರ್‌ಗಾಗಿ ಫೇಕಲ್ ಇಮ್ಯುನೋಕೆಮಿಕಲ್ ಪರೀಕ್ಷೆ (ಎಫ್‌ಐಟಿ) ಮತ್ತು ಸ್ತನ ಕ್ಯಾನ್ಸರ್‌ಗಾಗಿ ಡಿಜಿಟಲ್ ಟೊಮೊಸಿಂಪ್ಲೆಸಿಸ್ ಮ್ಯಾಮೊಗ್ರಫಿಯನ್ನು ಬಳಸಲಾಗುತ್ತದೆ. ಉಪಕರಣದ ಮೂಲಕ ತೆಗೆದ ಎಲ್ಲಾ ಚಿತ್ರಗಳನ್ನು ಎಐ ಸಾಫ್ಟ್‌ವೇರ್ ಮೂಲಕ ಸಂಸ್ಕರಿಸಲಾಗುತ್ತದೆ ಹಾಗೂ ಯಾವುದೇ ಅಸಹಜತೆಗಳನ್ನು ಚಿತ್ರದಲ್ಲಿ ಹೈಲೈಟ್ ಮಾಡಲಾಗುತ್ತದೆ ಎಂದು ಕ್ಯಾನ್ಸರ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.