ETV Bharat / state

ರಾಜ್ಯದಲ್ಲಿ ಇಂದಿನಿಂದ ಕೋವಿಡ್​ ಹೊಸ ಮಾರ್ಗಸೂಚಿ ಜಾರಿ: ಯಾವುದಕ್ಕೆಲ್ಲಾ ನಿರ್ಬಂಧ? - ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ

COVID guidelines in Karnataka: ಇಂದಿನಿಂದ ಜ.19ರವರೆಗೆ ರಾಜ್ಯದಲ್ಲಿ ಹೊಸ ಕೋವಿಡ್​ ಮಾರ್ಗಸೂಚಿ ಜಾರಿಗೆ ಬರಲಿದೆ. ಇಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ಅಲ್ಲದೇ ಮದುವೆ ಸಮಾರಂಭಕ್ಕೂ ಇಂದಿನಿಂದ ಕೋವಿಟ್ ನಿರ್ಬಂಧ ಅನ್ವಯವಾಗಲಿದೆ.

ಹೊಸ ಮಾರ್ಗಸೂಚಿ ಜಾರಿ
ಹೊಸ ಮಾರ್ಗಸೂಚಿ ಜಾರಿ
author img

By

Published : Jan 6, 2022, 4:41 PM IST

Updated : Jan 6, 2022, 5:16 PM IST

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜನವರಿ 19 ರವರೆಗೆ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ. ಶೇ.50ರ ನಿಯಮ, ವೀಕೆಂಡ್ ಕರ್ಫ್ಯೂ, ಬೆಂಗಳೂರಿಗೆ ಸೀಮಿತವಾಗಿ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಎಲ್ಲಾ ರೀತಿಯ ಪ್ರತಿಭಟನೆ, ಧರಣಿ, ಱಲಿಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಮೂರನೇ ಅಲೆ ಶುರುವಾಗಿದೆ. ಪರಿಸ್ಥಿತಿ ಕೈ ಜಾರುವ ಮುನ್ನವೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಿ ನೂತನ ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿದೆ. ಹೊಸ ಗೈಡ್ ಲೈನ್ಸ್​ನಲ್ಲಿ ಏನಿದೆ, ಯಾವುದಕ್ಕೆಲ್ಲಾ ಅನುಮತಿ, ಯಾವುದಕ್ಕೆ ನಿರ್ಬಂಧ ಎನ್ನುವ ಫುಲ್ ಡೀಟೇಲ್ಸ್ ಇಲ್ಲಿದೆ.

ನಿಯಮಗಳು:

ಇಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದ್ದು, ಇದು ಜನವರಿ 19 ರವರೆಗೆ ವಿಸ್ತರಣೆಯಾಗಲಿದೆ. ಎಲ್ಲಾ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಮಾತ್ರ ತೆರೆಯಲಿವೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಚೇರಿಗಳನ್ನು ತೆರೆಯಬೇಕು, ಬೆಂಗಳೂರು ಹೊರತುಪಡಿಸಿ ಇತರೆಡೆಯ ಶಾಲಾ-ಕಾಲೇಜುಗಳಿಗೂ ಇದೇ ನಿಯಮ ಅನ್ವಯವಾಗಲಿದೆ.

ವಿಧಾನಸೌಧ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ದರ್ಜೆಯ ಕೆಳಗಿನ ಎಲ್ಲಾ ಸಿಬ್ಬಂದಿ ಶೇ.50ರ ನಿಯಮದಂತೆ ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಕಚೇರಿಗಳಿಗೂ ಶೇ. 50ರ ನಿಯಮ ಅನ್ವಯವಾಗಲಿದೆ.

ವಾರಾಂತ್ಯದ ಕರ್ಫ್ಯೂ: ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ.

*ಸಾರಿಗೆ ಸೇವೆ ವಿಚಾರದಲ್ಲಿ ಬಿಎಂಆರ್ಸಿಎಲ್, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ನಿಗಮಗಳ ವ್ಯವಸ್ಥಾಪಕರು ಬೇಡಿಕೆಗೆ ಅನುಗುಣವಾಗಿ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಆನ್​ಲೈನ್ ಟಿಕೆಟ್ ಕಾಯ್ದಿರಿಸುವಿಕೆ ಆಧಾರದಲ್ಲಿ ಬಸ್​ಗಳ ಸೇವೆ ನೀಡಲು ಕ್ರಮ.

*ಬೆಂಗಳೂರಿನಲ್ಲಿ ಎಸ್ಎಸ್ಎಲ್​​ಸಿಯಿಂದ ದ್ವಿತೀಯ ಪಿಯುಸಿ ಮತ್ತು ಎಲ್ಲಾ ವೈದ್ಯಕೀಯ, ನರ್ಸಿಂಗ್ ಕೋರ್ಸ್ ಹೊರತುಪಡಿಸಿ ಇತರ ಎಲ್ಲಾ ಶಾಲಾ-ಕಾಲೇಜುಗಳ ಭೌತಿಕ ತರಗತಿ ಇಂದಿನಿಂದ ಎರಡು ವಾರಗಳ ಕಾಲ ರದ್ದು.

*ಪಬ್, ಕ್ಲಬ್, ರೆಸ್ಟೊರೆಂಟ್, ಬಾರ್, ಹೋಟೆಲ್ ಇತರೆ ಫುಡ್ ಕೋರ್ಟ್​ಗಳಲ್ಲಿ ಇಂದಿನಿಂದ ಆಸನ ಸಾಮರ್ಥ್ಯದ ಶೇ. 50ರಷ್ಟು ಮಾತ್ರ ಭರ್ತಿಗೆ ಅವಕಾಶ ಮತ್ತು ಎರಡೂ ಡೋಸ್ ವ್ಯಾಕ್ಸಿನ್ ಆಗದ ವ್ಯಕ್ತಿಗಳಿಗೆ ಈ ಜಾಗಗಳ ಪ್ರವೇಶಕ್ಕೆ ನಿರ್ಬಂಧವಿರಲಿದೆ.

*ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್ ಥಿಯೇಟರ್​ಗಳು, ರಂಗ ಮಂದಿರಗಳು, ಆಡಿಟೋರಿಯಂಗಳು ಮತ್ತು ಇದೇ ಮಾದರಿಯ ಸ್ಥಳಗಳಗಳಲ್ಲಿಯೂ ಆಸನ ಸಾಮರ್ಥ್ಯದ ಶೇ.50 ರಷ್ಟು ಭರ್ತಿಗೆ ಅವಕಾಶ ನೀಡಿದ್ದು, ವ್ಯಾಕ್ಸಿನ್ ಆಗಿರುವ ವ್ಯಕ್ತಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ.

*ಮದುವೆ ಸಮಾರಂಭಕ್ಕೂ ಇಂದಿನಿಂದ ಕೋವಿಟ್ ನಿರ್ಬಂಧ ಅನ್ವಯವಾಗಲಿದ್ದು, ಹೊರ ಆವರಣದಲ್ಲಿ ನಡೆಯುವ ಮದುವೆಗೆ 200 ಜನರಿಗೆ ಅವಕಾಶ ಹಾಗು ಒಳಾಂಗಣ ಅಥವಾ ಕಲ್ಯಾಣ ಮಂಟಪದ ಒಳಗಡೆ ನಡೆಯುವ ಮದುವೆಗೆ 100 ಜನರು ಭಾಗಿಯಾಗುವಂತೆ ಗರಿಷ್ಠ ಮಿತಿ ವಿಧಿಸಲಾಗಿದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಒಂದೇ ಠಾಣೆಯ 14 ಪೊಲೀಸರಿಗೆ ಕೋವಿಡ್‌

*ಧಾರ್ಮಿಕ ಸ್ಥಳಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿರಲಿದ್ದು, ಯಾವುದೇ ರೀತಿಯ ಸೇವೆಗಳಿಗೆ ಅವಕಾಶವಿಲ್ಲ. ಒಂದು ಬಾರಿಗೆ 50 ಜನರು ಮಾತ್ರ ದರ್ಶನಕ್ಕೆ ತೆರಳಬಹುದಾಗಿದೆ. ಇಲ್ಲಿಯೂ ಕೋವಿಡ್ ಎರಡೂ ಡೋಸ್ ವ್ಯಾಕ್ಸಿನೇಷನ್​ ಆಗಿರುವುದು ಕಡ್ಡಾಯವಾಗಿದೆ.

*ಮಾಲ್​ಗಳು, ಶಾಪಿಂಗ್ ತಾಣಗಳು ಇತರೆ ಎಲ್ಲಾ ವಾಣಿಜ್ಯ ಅಂಗಡಿ, ಮುಂಗಟ್ಟುಗಳು ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ ವಾರದ ಇತರ ಐದು ದಿನಗಳಲ್ಲಿ ತೆರೆಯಬಹುದಾಗಿದೆ.

*ಈಜುಕೊಳ, ಜಿಮ್​ಗಳಿಗೆ ಶೇ.50 ರ ನಿಯಮ ಅನ್ವಯವಾಗಲಿದ್ದು, ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಜಿಮ್, ಈಜುಕೊಳ ಪ್ರವೇಶಕ್ಕೆ ಅವಕಾಶವಿರಲಿದೆ. ವ್ಯಾಕ್ಸಿನೇಷನ್​ ಆಗದ ಅಥವಾ ಒಂದು ಡೋಸ್ ಪಡೆದಿದ್ದವರಿಗೆ ಇಲ್ಲಿ ನಿರ್ಬಂಧವಿರಲಿದೆ.

*ರಾಜ್ಯದ ಎಲ್ಲಾ ಕ್ರೀಡಾ ಸಮುಚ್ಚಯಗಳು, ಕ್ರೀಡಾಂಗಣಗಳಲ್ಲಿಯೂ ಶೇ. 50 ರ ನಿಯಮ ಪಾಲಿಸಿ ಚಟುವಟಿಕೆ ನಡೆಸಬಹುದಾಗಿದೆ. ಇಂದಿನಿಂದ ರಾಜ್ಯಾದ್ಯಂತ ಅನ್ವಯವಾಗುವಂತೆ ಎಲ್ಲಾ ರೀತಿಯ ಮೆರವಣಿಗೆಗಳು, ಧರಣಿಗಳು, ಪ್ರತಿಭಟನೆಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ. ಮಹಾರಾಷ್ಟ್ರ, ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ವಿಧಿಸಿರುವ ಕಠಿಣ ನಿರ್ಬಂಧಗಳನ್ನು ಗೋವಾ ರಾಜ್ಯಕ್ಕೂ ಅನ್ವಯಿಸಲಾಗಿದೆ.

Last Updated : Jan 6, 2022, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.