ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ಐಟಿ ಎದುರುಡಿಸಿಪಿ ಅಜಯ್ ಹಿಲೋರಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ನಿನ್ನೆಯಷ್ಟೆ ವಿಚಾರಣೆಗೆ ಹಾಜರಾಗಿದ್ದ ಅಜಯ್ ಹಿಲೋರಿ, ಇಂದೂ ಕೂಡ ಮತ್ತೆ ಎಸ್ಐಟಿ ಅಧಿಕಾರಿ ರವಿಕಾಂತೇಗೌಡ ಹಾಗೂ ಡಿಸಿಪಿ ಗಿರೀಶ್ ಎದುರು ಹಾಜರಾಗಿದ್ದಾರೆ. ಐಎಂಎ ವಂಚನೆ ಪ್ರಕರಣವನ್ನ 2018ರಲ್ಲಿ ಆರ್ಬಿಐ ಸರ್ಕಾರಕ್ಕೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಡಿಸಿಪಿ ಅಜಯ್ ಹಿಲೋರಿ ಐಎಂಎ ಅಕ್ರಮ ಕುರಿತು ತನಿಖೆ ನಡೆಸದೆ ಆರೋಪಿ ಮನ್ಸೂರ್ನಿಂದ ಹಣ ಪಡೆದಿರುವ ಆರೋಪ ಇದೆ.
ನಿನ್ನೆ ಎರಡು ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆಸಿ, ಇಂದು ಕೆಲ ದಾಖಲೆ ತರುವಂತೆ ಎಸ್ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಹೀಗಾಗಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.