ETV Bharat / state

ಅಧಿಕಾರ ಇರಲಿ‌, ಇಲ್ಲದೆ‌ ಇರಲಿ ಸಿದ್ದರಾಮಯ್ಯ ನಮ್ಮ ನಾಯಕರು.. ಡಿ ಕೆ ಶಿವಕುಮಾರ್‌ - ಸಿದ್ದರಾಮ್ಯ ಮನೆಗೆ ಡಿ.ಕೆ ಶಿವಕುಮಾರ್ ಭೇಟಿ

ನಾನು ಯಾವುದೇ ಹುದ್ದೆ ಕೇಳಲ್ಲ, ಕೇಳಿ ಪಡೆಯೋ ಕಾಲ ಹೋಗಿದೆ. ಯಾರು ಬೇಕಾದ್ರೂ ಯಾವ ಹುದ್ದೆ ಬೇಕಾದ್ರೂ ಕೇಳಲಿ. ನಾನು ಯಾವುದೇ ಸ್ಥಾನಕ್ಕೆ ಸ್ಪರ್ಧಿ ಅಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಪಕ್ಷದ ಹೈಕಮಾಂಡ್, ನಮ್ಮ ಅಧ್ಯಕ್ಷರು ಏನು ಹೇಳ್ತಾರೋ ಆ ಕೆಲಸ ಮಾಡ್ತೀನಿ. ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ.

I am not a contender for any position: DK S
ಡಿ.ಕೆ ಶಿವಕುಮಾರ್, ಮಾಜಿ ಸಚಿವ
author img

By

Published : Jan 5, 2020, 8:04 PM IST

ಬೆಂಗಳೂರು: ನಾನು ಯಾವುದೇ ಸ್ಥಾನಕ್ಕೆ ಸ್ಪರ್ಧಿ ಅಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಎಷ್ಟು ಪ್ರೀತಿ ಕೊಡಬೇಕೋ ಅಷ್ಟು ‌ಪ್ರೀತಿ ಕೊಟ್ಟಿದೆ. ಸಿದ್ದರಾಮಯ್ಯ ನಮ್ಮ ವಿಪಕ್ಷ ನಾಯಕರು. ಹೀಗಾಗಿ ಅವರ ಮನೆಗೆ ಬಂದಿದ್ದೇನೆ. ಇದರಲ್ಲೇನೂ ವಿಶೇಷತೆ ಇಲ್ಲ ಅಂತಾ ಮಾಜಿ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ ಶಿವಕುಮಾರ್, ಮಾಜಿ ಸಚಿವ

ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಸಿದ್ದರಾಮಯ್ಯ ವಿಪಕ್ಷ ಹಾಗೂ ಸಿಎಲ್​ಪಿ ನಾಯಕರು. ಅವರ ಕೈಕೆಳಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಭೇಟಿ ಮಾಡಿ ಮಾತಾಡಿದ್ದೇನೆ. ಇದರಲ್ಲಿ ನನಗೆ ವಿಶೇಷತೆ ಏನೂ ಇಲ್ಲ. ಈ ಭೇಟಿಯಲ್ಲಿ ಯಾವುದೇ ವಿಶೇಷ ಉದ್ದೇಶವಿಲ್ಲ. ನಾನು ಒಬ್ಬರ ಕೆಳಗೆ ಕೆಲಸ ಮಾಡಿದರೆ ನಿಷ್ಠೆಯಿಂದ ಮಾಡುತ್ತೇನೆ ಎಂದರು.

ಕುಮಾರಸ್ವಾಮಿ ಜೊತೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಹೈಕಮಾಂಡ್ ಹೇಳಿದ್ದಕ್ಕೆ ಅವರ ಕೆಲಸ ಮಾಡಿದೆ. ಈಗ ಅವರೊಂದಿಗೆ ಕೆಲಸ ಮಾಡುತ್ತಿಲ್ಲ ಎಂದು ಅವರ ಬಗ್ಗೆ ಕೀಳಾಗಿ ಮಾತನಾಡಲು ಆಗುತ್ತಾ.. ಎಸ್ ಎಂ ಕೃಷ್ಣ ಸೇರಿದಂತೆ ನಾನು ಯಾರ ಬಳಿ ಕೆಲಸ ಮಾಡಿದ್ದೇನೋ ಅವರೆಲ್ಲರ ಮೇಲೆ ಗೌರವ ಇದೆ. ಸಿದ್ದರಾಮಯ್ಯ ನಮ್ಮ ‌ಲೀಡರ್, ಅಧಿಕಾರ ಇರಲಿ‌ ಇಲ್ಲದೆ‌ ಇರಲಿ ಅವರು ನಮ್ಮ ನಾಯಕರು. ವಿರೋಧ ಮಾಡೋದು ನನ್ನ ರಕ್ತದಲ್ಲಿ ಇಲ್ಲ. ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇನೆ.

ನಾನು ಯಾವುದೇ ಹುದ್ದೆ ಕೇಳಲ್ಲ, ಕೇಳಿ ಪಡೆಯೋ ಕಾಲ ಹೋಗಿದೆ. ಯಾರು ಬೇಕಾದ್ರೂ ಯಾವ ಹುದ್ದೆ ಬೇಕಾದ್ರೂ ಕೇಳಲಿ. ನಾನು ಯಾವುದೇ ಸ್ಥಾನಕ್ಕೆ ಸ್ಪರ್ಧಿ ಅಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಪಕ್ಷದ ಹೈಕಮಾಂಡ್, ನಮ್ಮ ಅಧ್ಯಕ್ಷರು ಏನು ಹೇಳ್ತಾರೋ ಆ ಕೆಲಸ ಮಾಡ್ತೀನಿ. ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ.

ಇಲ್ಲಿ ಯಾರು ಏನೋ ಮಾತಾಡಿದ್ರು ಅದು ಗೌಣ. ಹೈಕಮಾಂಡ್, ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಹೇಳೋದು ಮಾತ್ರ ಫೈನಲ್. ನಮ್ಮ ‌ಪಕ್ಷದಲ್ಲಿ ಒಗ್ಗಟ್ಟು ಇದೆ, ಪಕ್ಷ ಅನ್ನೋದು ಮದುವೆ ಮಾಡಿಕೊಂಡ ಹಾಗೆ. ನಾವೇನು ಶತ್ರುಗಳು ಅಲ್ಲ. ನಮ್ಮ ಪಕ್ಷದಲ್ಲಿ ಯಾರು ಕಿತ್ತಾಡಿಕೊಂಡಿಲ್ಲ. ನಾವು ಎಲ್ಲರೂ ಒಟ್ಟಾಗಿಯೇ ಇದ್ದೇವೆ. ನಮ್ಮನ್ನು ನಂಬಿ ಸಾವಿರಾರು ಕಾರ್ಯಕರ್ತರು ಇದ್ದಾರೆ. ಅವರಿಗಾಗಿ ನಾವು ಕೆಲಸ ಮಾಡಬೇಕಿದೆ ಎಂದು ಡಿಕೆಶಿ ಹೇಳಿದರು.

Intro:newsBody:ನಾನು ಯಾವುದೇ ಸ್ಥಾನಕ್ಕೆ ಸ್ಪರ್ಧಿ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ನಾನು ಯಾವುದೇ ಸ್ಥಾನಕ್ಕೆ ಕಾಂಪಿಟೇಟರ್ ಅಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಎಷ್ಟು ಪ್ರೀತಿ ಕೊಡಬೇಕೋ ಅಷ್ಟು ‌ಪ್ರೀತಿ ಕೊಟ್ಟಿದೆ. ಸಿದ್ದರಾಮಯ್ಯ ನಮ್ಮ ವಿಪಕ್ಷ ನಾಯಕರು ಹೀಗಾಗಿ ಅವರ ಮನೆ ಬಂದಿದ್ದೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು, ಸಿಎಲ್ಪಿ ನಾಯಕರು ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಭೇಟಿ ಮಾಡಿ ಮಾತಾಡಿದ್ದೇನೆ. ಇದ್ರಲ್ಲಿ ನನಗೆ ಏನು ವಿಶೇಷ ಇಲ್ಲ. ಈ ಭೇಟಿಯಲ್ಲಿ ಯಾವುದೇ ವಿಶೇಷ ಉದ್ದೇಶವಿಲ್ಲ. ನಾನು ಒಬ್ಬರ ಕೆಳಗೆ ಕೆಸಲ ಮಾಡಿದರೆ ನಿಷ್ಠೆಯಿಂದ ಮಾಡುತ್ತೇನೆ.
ಕುಮಾರಸ್ವಾಮಿ ಜೊತೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರು ಹೈಕಮಾಂಡ್ ಹೇಳಿದ್ದಕ್ಕೆ ಅವರ ಕೆಲಸ ಮಾಡಿದೆ. ಈಗ ಅವರೊಂದಿಗೆ ಕೆಲಸ ಮಾಡುತ್ತಿಲ್ಲ ಎಂದು ಅವರ ಬಗ್ಗೆ ಕೀಳಾಗಿ ಮಾತನಾಡಲು ಆಗುತ್ತಾ? ನಾನು ಅಷ್ಟು ಗೌರವ ಇಟ್ಟುಕೊಂಡಿದ್ದೇನೆ. ಎಸ್ ಎಂ ಕೃಷ್ಣ ಸೇರಿದಂತೆ ನಾನು ಯಾರ ಬಳಿ ಕೆಲಸ ಮಾಡಿದ್ದೇನೋ ಅವರೆಲ್ಲರ ಮೇಲೆ ಗೌರವ ಇದೆ.
ಸಿದ್ದರಾಮಯ್ಯ ನಮ್ಮ ‌ಲೀಡರ್, ಅಧಿಕಾರ ಇರಲಿ‌ ಇಲ್ಲದೆ‌ ಇರಲಿ ಅವ್ರು ನಮ್ಮ ನಾಯಕರು. ವಿರೋಧ ಮಾಡೋದು ನನ್ನ ರಕ್ತದಲ್ಲಿ ಇಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು ಅದಕ್ಕೆ ನಾನು ಅವರ ಜೊತೆ ಮಾತಾಡಿದ್ದೇನೆ. ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಬಗ್ಗೆ ಚರ್ಚೆ ಮಾಡಿದ್ದೇನೆ.
ನಾನು ಯಾವುದೇ ಹುದ್ದೆ ಕೇಳೊಲ್ಲ. ಕೇಳಿ ಪಡೆಯೋ ಕಾಲ ಹೋಗಿದೆ. ಯಾರು ಬೇಕಾದ್ರು ಯಾವ ಹುದ್ದೆ ಬೇಕಾದ್ರು ಕೇಳಲಿ. ನಾನು ಯಾವುದೇ ಸ್ಥಾನಕ್ಕೆ ಕಾಂಪಿಟೇಟರ್ ಅಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ, ಪಕ್ಷದ ಹೈಕಮಾಂಡ್, ನಮ್ಮ ಅಧ್ಯಕ್ಷರು ಏನು ಹೇಳ್ತಾರೋ ಆ ಕೆಲಸ ಮಾಡ್ತೀನಿ. ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಇಲ್ಲಿ ಯಾರು ಏನೋ ಮಾತಾಡಿದ್ರು ಅದು ಗೌಣ. ಹೈಕಮಾಂಡ್, ಪಕ್ಷದ ಅಧ್ಯಕ್ಷರು, ವಿಪಕ್ಷ ನಾಯಕರು ಹೇಳೋದು ಮಾತ್ರ ಫೈನಲ್. ನನ್ನ ಮಾತು ಕೂಡಾ ಗೌಣ.
ನಮ್ಮ ‌ಪಕ್ಷದಲ್ಲಿ ಒಗ್ಗಟ್ಟು ಇದೆ. ಪಕ್ಷ ಅನ್ನೋದು ಮದುವೆ ಮಾಡಿಕೊಂಡ ಹಾಗೆ. ನಾವೇನು ಎನಿಮಿಗಳು ಅಲ್ಲ. ನಮ್ಮ‌ ಪಕ್ಷದಲ್ಲಿ ನಾವು ಯಾರು ಕಿತ್ತಾಡಿಕೊಂಡಿಲ್ಲ. ನಾವು ಎಲ್ಲರೂ ಒಟ್ಟಾಗಿಯೇ ಇದ್ದೇವೆ. ನಮ್ಮನ್ನ‌ ನಂಬಿಕೆ ಸಾವಿರಾರು ಕಾರ್ಯಕರ್ತರು ಇದ್ದಾರೆ. ಅವರಿಗಾಗಿ ನಾವು ಕೆಲಸ ಮಾಡಬೇಕಿದೆ. ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ಕೊಟ್ಟಿದೆ. ಎಷ್ಟು ಪ್ರೀತಿ ಕೊಡಬೇಕೋ ಅಷ್ಟು ‌ಪ್ರೀತಿ ಕೊಟ್ಟಿದೆ. ಸಿದ್ದರಾಮಯ್ಯ ನಮ್ಮ ವಿಪಕ್ಷ ನಾಯಕರು ಅವ್ರ ಮನೆ ನಾನು ಬಂದಿದ್ದೇನೆ ಅಷ್ಟೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಹೈಕಮಾಂಡ್ ಆಯ್ಕೆ ಮಾಡಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ‘ಅ ಬಗ್ಗೆ ನನಗೇನು‌ ಗೊತ್ತಿಲ್ಲ’ ಎಂದರು.Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.