ETV Bharat / state

ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ: ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ - MLA R V Deshapande

9 ಬಾರಿ ಶಾಸಕರಾಗಿ ಗೆದ್ದಿರುವ ಆರ್​ ವಿ ದೇಶಪಾಂಡೆ ಅವರು ಅತ್ಯಂತ ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದಾರೆ.

Acting Speaker RV Deshpande
ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ
author img

By

Published : May 22, 2023, 12:19 PM IST

Updated : May 22, 2023, 2:37 PM IST

ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ

ಬೆಂಗಳೂರು: ಶಾಸಕರಿಗೆ ಪ್ರಮಾಣವಚನ ನೀಡುವ ಮಹತ್ವದ ಕಾರ್ಯ ನನಗೆ ನೀಡಲಾಗಿದೆ. ಅದರಂತೆ ನನ್ನ ಕಾರ್ಯ ನಿರ್ವಹಣೆ ಮಾಡುತ್ತೇನೆ. ಉಳಿದಂತೆ ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನೀಡುವ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯಪಾಲರು ಪ್ರಮಾಣವಚನ ಕೊಟ್ಟಿದಾರೆ. 22, 23, 24 ಮೂರು ದಿನ ಅಧಿವೇಶನ ಇದೆ. ನನ್ನ ಬಿಟ್ಟು 223 ಶಾಸಕರಿಗೆ ನಾನು ಪ್ರಮಾಣವಚನ ಕೊಡುತ್ತೇನೆ. ಇದು ಬಹಳ‌ ದೊಡ್ಡ ಹಾಗೂ ಮಹತ್ವದ ಕಾರ್ಯವಾಗಿದೆ. ಪ್ರಮಾಣ ವಚನದ ಬಳಿಕ ಸಂವಿಧಾನದ ಪ್ರಕಾರ ಎಲ್ಲರೂ ಶಾಸಕರಾಗಲಿದ್ದಾರೆ. 24ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ. ನಾನು ಪ್ರೊಸೀಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಲಿದ್ದೇನೆ ಎಂದರು.

ನೀವೇ ಸ್ಪೀಕರ್ ಆಗಿ ಮುಂದುವರೀತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಆಸೆ ಇಲ್ಲ. ಎಂಟು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿದ್ದೇನೆ. ವೀರಪ್ಪ ಮೊಯ್ಲಿ, ಬಂಗಾರಪ್ಪ ಕಾಲದಲ್ಲಿ ಕೆಲಸ ಮಾಡಿದ್ದೇನೆ. ನಾಡಿನ ಜನರ ಮನಸ್ಸಿನಲ್ಲಿ ನಾನಿದ್ದೇನೆ. ಅವರು ನನ್ನಿಂದ ಸೇವೆ ಬಯಸಿದ್ದಾರೆ, ಅದನ್ನು ಮಾಡುತ್ತೇನೆ ಎಂದರು.

ಸಚಿವಾಕಾಂಕ್ಷಿಗಳಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇಶಪಾಂಡೆ, ಪಕ್ಷ ಕೊಟ್ಟರೆ ಮಾಡುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸ್ಪೀಕರ್ ಆಗಿ ಮುಂದುವರೆಯುವ ಬಗ್ಗೆ ನಾನ್ಯಾಕೆ ಹೇಳಲಿ ಎಂದು ಸ್ಪೀಕರ್ ಸ್ಥಾನದ ಬದಲು, ಸಚಿವ ಸ್ಥಾನದ ಅಪೇಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಮಳೆ ಹಾನಿ ಸಮಸ್ಯೆ ಸರಿ ಮಾಡ್ತೀವಿ: ವಿಧಾನಸೌಧಕ್ಕೆ ಬರುತ್ತಿದ್ದಂತೆ ಮಾಧ್ಯಮಕ್ಕೆ ಕೈ ಮುಗಿದ ಡಿಸಿಎಂ ಡಿ. ಕೆ ಶಿವಕುಮಾರ್, ಮಳೆ ಹಾನಿ‌ಯಿಂದಾದ ಸಮಸ್ಯೆಗಳೆಲ್ಲವನ್ನು ಸರಿ ಮಾಡುತ್ತೇವೆ, ನಿಮ್ಮ ಸಹಕಾರ ಇರಲಿ ಎಂದಷ್ಟೇ ಮಾಧ್ಯಮದವರಿಗೆ ಹೇಳಿ ತೆರಳಿದರು.

ಶಾಸಕ ಹಾಗೂ ಹಂಗಾಮಿ ಸ್ಪೀಕರ್​ ಆಗಿರುವ ಆರ್​ ವಿ ದೇಶಪಾಂಡೆ ಅವರು ಈ ಬಾರಿ ಚುನಾವಣೆಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಸುನೀಲ್​ ಹೆಗಡೆ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದ್ದಾರೆ. 9 ನೇ ಬಾರಿ ಶಾಸಕರಾಗಿ ಗೆದ್ದಿರುವ ಆರ್​ ವಿ ದೇಶಪಾಂಡೆ ಅವರು ಅತೀ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವವರಲ್ಲಿ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ನೇರವಾಗಿ ಅಲ್ಲವಾದರೂ ಪರೋಕ್ಷವಾಗಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಆರ್​ ವಿ ದೇಶಪಾಂಡೆ ಅವರನ್ನು ಹೊಸ ಸಭಾಧ್ಯಕ್ಷರ ಆಯ್ಕೆ ಆಗುವವರೆಗೆ ಹಂಗಾವಿ ವಿಧಾನಸಭಾಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ.

ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದೆ. ನೂತನ ಶಾಸಕರೆಲ್ಲರೂ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದೇ ಅಧಿವೇಶನದಲ್ಲಿ ಪೂರ್ಣಾವಧಿ ಸ್ಪೀಕರ್​ ಅನ್ನು ಕೂಡ ನೇಮಕ ಮಾಡಲಾಗುವುದು. ಆರ್​ ವಿ ದೇಶಪಾಂಡೆ ಈಗಾಗಲೇ ತಾವು ಪೂರ್ಣಾವಧಿ ಸ್ಪೀಕರ್​ ಸ್ಥಾನ ಆಕಾಂಕ್ಷಿಯಲ್ಲ. ಒಂದುವೇಳೆ ಪಕ್ಷ ಜವಾಬ್ದಾರಿ ವಹಿಸಿದರೆ ಮಾಡಲು ಸಿದ್ಧ ಎನ್ನುವುದನ್ನು ಹೇಳಿದ್ದಾರೆ. ಪಕ್ಷ ಯಾರನ್ನು ಸ್ಪೀಕರ್​ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹಿಂದೆ ಸ್ಪೀಕರ್​ ಆಗಿದ್ದವರಿಗೆಲ್ಲ ಸೋಲು.. ಇಲ್ಲಿದೆ ವಿಧಾನಸಭಾಧ್ಯಕ್ಷರಾಗಿ ಬಳಿಕ ಸೋತವರ ಮಾಹಿತಿ

Last Updated : May 22, 2023, 2:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.