ETV Bharat / state

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಚೆನ್ನಾಗಿದೆ : ಗೃಹ ಸಚಿವ ಬೊಮ್ಮಾಯಿ ವಿಶ್ವಾಸದ ನುಡಿ

ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ವರದಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Nov 9, 2019, 1:54 PM IST

ಬೆಂಗಳೂರು: ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ವರದಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ‌ನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸುವ್ಯವಸ್ಥೆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ರಾಜ್ಯದಲ್ಲಿ ಸ್ಥಿತಿ ಗತಿ ಬಗ್ಗೆ ಪ್ರಾಥಮಿಕ ವರದಿಯನ್ನು ಸಿಎಂಗೆ ಸಲ್ಲಿಕೆ ಮಾಡಿದ್ದೇನೆ. ಬೆಂಗಳೂರಿನಲ್ಲಿಯೇ ಇದ್ದು ಎಲ್ಲವನ್ನೂ ಗಮನಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿಲು ಸಿಎಂ ಸೂಚನೆ ನೀಡಿದ್ದರು. ಅದರಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್​ ಕ್ರೈಂ ಇಲಾಖೆ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆ ವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಿದೆ. ಎಲ್ಲರಿಗೂ ಒಪ್ಪಿತ ತೀರ್ಪನ್ನು ಸುಪ್ರೀಂ ಪ್ರಕಟಿಸಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಚೆನ್ನಾಗಿದೆ. ಇದೇ ರೀತಿ ಶಾಂತಿ ಸೌಹಾರ್ದತೆಯನ್ನು ಜನ ಕಾಪಾಡಿಕೊಂಡು ಬರಬೇಕು. ಕೇಂದ್ರ ಸರ್ಕಾರದ ಸೂಚನೆಯಂತೆ ಯಾರೂ ವಿಜಯೋತ್ಸವ ಆಚರಣೆ ಮಾಡಬಾರದು ಎಂದು ಮನವಿ ಮಾಡಿದರು.

Intro:

ಬೆಂಗಳೂರು: ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ
ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಕ್ಕಿನ ಕಾನೂನು ಸುವ್ಯವಸ್ಥೆ ಸಂಬಂಧ ವರದಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡಿದ್ದಾರೆ.

ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತ‌ನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸುವ್ಯವಸ್ಥೆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗು ರಾಜ್ಯದಲ್ಲಿ ಸ್ಥಿತಿ ಗತಿ ಬಗ್ಗೆ ಪ್ರಾಥಮಿಕ ವರದಿಯನ್ನು ಸಿಎಂಗೆ ಸಲ್ಲಿಕೆ ಮಾಡಿದ್ದೇನೆ, ಬೆಂಗಳೂರಿನಲ್ಲಿಯೇ ಇದ್ದು ಎಲ್ಲವನ್ನೂ ಗಮನಿಸಬೇಕು,ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿಲು ಸಿಎಂ ಸೂಚನೆ ನೀಡಿದ್ದು ಅದರಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ಅಯೋಧ್ಯೆ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದೆ.ಎಲ್ಲರಿಗೂ ಒಪ್ಪಿತ ತೀರ್ಪನ್ನು ಸುಪ್ರೀಂ ಪ್ರಕಟಿಸಿದೆ.ಇದೊಂದು ಐತಿಹಾಸಿಕ ತೀರ್ಪು.ಎಲ್ಲ ಧರ್ಮದವರು ಸಹ ತೀರ್ಪು ಒಪ್ಪಿಕೊಂಡಿದ್ದಾರೆ.ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಚೆನ್ನಾಗಿದೆ, ಇದೇ ರೀತಿ ಶಾಂತಿ ಸೌಹಾರ್ದತೆ ಜನ ಕಾಪಾಡಿಕೊಂಡು ಬರಬೇಕು ಅಂತ ಮನವಿ ಮಾಡುತ್ತಿದ್ದೇನೆ ಎಂದರು.

ಯಾವುದೇ ಸಮಸ್ಯೆ ಇದ್ದರೂ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡಿ .ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರಿಂದಲೂ ಆಗಬಾರದು.ಕೇಂದ್ರ ಸರ್ಕಾರದ ಸೂಚನೆಯಂತೆ ಯಾರು ವಿಜಯೋತ್ಸವ ಆಚರಣೆ ಮಾಡಬಾರದು ಅಂತ ಹೇಳಿದ್ದಾರೆ.ಹೀಗಾಗಿ ನಮ್ಮ ರಾಜ್ಯದಲ್ಲೂ ಕೇಂದ್ರದ ಸೂಚನೆ ಪಾಲನೆ ಮಾಡಬೇಕು ಅಂತ ಹೇಳಿದ್ದೇವೆ.144 ಸೆಕ್ಷನ್ ವಾಪಸ್ ತೆಗೆಯುವ ಬಗ್ಗೆ ಇಂದು ಸಂಜೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

ಸೋಶಿಯಲ್ ಮೀಡಿಯಾ ಮೇಲೆ ಇಲಾಖೆ ನಿಗಾ ಇಟ್ಟಿದೆ.
ತೀರ್ಪಿನ ಹಿನ್ನೆಲೆ ಕೆಲ ಸಂಘಟನೆ ಗಳು ಪ್ರಚೋದನೆ ಮಾಡುವ ಸಾಧ್ಯತೆ ಇದೆ.ಹೀಗಾಗಿ ಕಟ್ಟೇಚ್ಚರ ವಹಿಸಿದ್ದೇವೆ.ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಕೆಲವರು ಆಚರಣೆ ಮಾಡುವ ಸಾಧ್ಯತೆ ಇದೆ ಹಾಗು ಈದ್ ಮಿಲಾದ್ ಇರುವುದರಿಂದ ಎರಡು ಮೂರು ದಿನ ಕಟ್ಟೆಚ್ಚರದಿಂದ ಇರುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಮುಂದಿನ ಮೂರ್ನಾಲ್ಕು ದಿನ ನಮಗೆ ಸವಾಲು ಅದನ್ನು ಸಮರ್ಥವಾಗಿ ಇಭಾಯಿಸುತ್ತೇವೆ ಎಂದರು.

Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.