ಬೆಂಗಳೂರು: ತಿಗಳರಪೇಟೆಯ ಐತಿಹಾಸಿಕ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತರ ಹಿತದೃಷ್ಟಿಯಿಂದ ಈ ಭಾಗದಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 2 ಗಂಟೆವರೆಗೆ ದೇವಸ್ತಾನ ಸುತ್ತಮುತ್ತ ವಾಹನ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಪರ್ಯಾಯ ಮಾರ್ಗ ಬಳಸಲು ಸಾರ್ವಜನಿಕರಲ್ಲಿ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ರಸ್ತೆ ಬದಲಾವಣೆ ವ್ಯವಸ್ಥೆ ಹೀಗಿದೆ:
ಎಸ್.ಜೆ.ಪಿ.ರಸ್ತೆಯಲ್ಲಿ ಸಿಟಿ ಮಾರ್ಕೆಟ್ ಕಡೆಯಿಂದ ಬಂದು ಎಸ್.ಜೆ.ಪಿ. ಜಂಕ್ಷನ್ ಬಳಿ ಪೈಲ್ವಾನ್ ಕೃಷ್ಣಪ್ಪ ರಸ್ತೆಗೆ ಎಡ ತಿರುವು ಪಡೆಯುತ್ತಿದ್ದ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಈ ವಾಹನಗಳು ಟೌನ್‍ಹಾಲ್ ವೃತ್ತ- ಜೆ.ಸಿ.ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ. ಈ ಭಾಗದ ಪೈಲ್ವಾನ್ ಕೃಷ್ಣಪ್ಪ ಲೇನ್, ಒ.ಟಿ.ಸಿ.ರಸ್ತೆ, ನಗರ್ತಪೇಟೆ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ.