ETV Bharat / state

ಹಿಂದೂ ಯುವಕನ ಮತಾಂತರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - ಮತಾಂತರ ಪ್ರಕರಣ ಆರೋಪಿಗಳ ಬಂಧನ

ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿ ಕತ್ನಾ ಮಾಡಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Two accused arrested in Bengaluru
ಶಬ್ಬೀರ್ ಹಾಗೂ ಅತ್ತಾವರ್ ರೆಹಮಾನ್ ಬಂಧಿತ ಆರೋಪಿಗಳು
author img

By

Published : Oct 5, 2022, 1:06 PM IST

ಬೆಂಗಳೂರು: ಹಿಂದೂ ಯುವಕನಿಗೆ ಕತ್ನಾ ಮಾಡಿಸಿ ಬಲವಂತವಾಗಿ ಮತಾಂತರ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್ ಹಾಗೂ ಅತ್ತಾವರ್ ರೆಹಮಾನ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ನಯಾಜ್ ಪಾಶಾ ಎಂಬಾತ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಏನಿದು ಪ್ರಕರಣ: ಬಲವಂತವಾಗಿ ಇಸ್ಲಾಂ ಧರ್ಮದಂತೆ ಮರ್ಮಾಂಗದ 'ಕತ್ನಾ'‌ ಮಾಡಿಸಿ, ಇಸ್ಲಾಂ ಧರ್ಮದ ಭೋದನೆ ಮಾಡಿ, ದನದ ಮಾಂಸವನ್ನ ಬಲವಂತವಾಗಿ ತಿನ್ನಿಸಿದ್ದಲ್ಲದೇ ತನಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಖಾಲಿ ಬಾಂಡ್ ಪೇಪರ್ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ ಮೂಲದ ಶ್ರೀಧರ್ ಎಂಬ ಯುವಕ 12 ಜನರ ವಿರುದ್ಧ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೃತ್ಯ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿತ್ತು.

ಹಣಕಾಸಿನ ತೊಂದರೆ ಕುರಿತು ಅತ್ತಾವರ್ ಬಳಿ ಹೇಳಿಕೊಂಡಾಗ ಬನಶಂಕರಿಯ ಮಸೀದಿಗೆ ಕರೆ ತಂದು ಅಕ್ರಮವಾಗಿ ಗೃಹ ಬಂಧನದಲ್ಲಿರಿಸಿದ್ದ ಆರೋಪಿಗಳು ತಾನು ಪ್ರತಿಭಟಿಸಿದಾಗ ಗನ್ ಇಟ್ಟು ಭಯೋತ್ಪಾದಕನಂತೆ ಬಿಂಬಿಸಿ ವಿಡಿಯೋ ಮಾಡಿಕೊಂಡಿದ್ದರು. ಹೊರಗಡೆ ತಿಳಿಸಿದರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ವರ್ಷಕ್ಕೆ ಮೂರು ಜನರನ್ನು ಕರೆ ತಂದು ಮತಾಂತರ ಮಾಡಿಸಬೇಕೆಂದು ಒತ್ತಾಯಿಸಿದ್ದರು ಎಂದು ಶ್ರೀಧರ್ ದೂರು ನೀಡಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ ಬನಶಂಕರಿ ಠಾಣಾ ಪೊಲೀಸರು ಶ್ರೀಧರ್​ನನ್ನು ಮಸೀದಿಗೆ ಕರೆತಂದಿದ್ದ ಅತ್ತಾವರ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿದ್ದ ಮಸೀದಿಯೊಂದರ ಅಧ್ಯಕ್ಷ ನಯಾಜ್ ಪಾಶಾನ ಸಹಚರ ಶಬ್ಬೀರ್​​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದ ವ್ಯಕ್ತಿಗೆ ಬಲವಂತವಾಗಿ ಮತಾಂತರ ಯತ್ನ: ಹುಬ್ಬಳ್ಳಿಯಲ್ಲಿ 12 ಮಂದಿ ವಿರುದ್ಧ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.