ETV Bharat / state

ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹತೆ ನಿರ್ಧರಿಸುವ ಅಧಿಕಾರ ವೈದ್ಯಕೀಯ ಮಂಡಳಿಗೆ ಇಲ್ಲ: ಹೈಕೋರ್ಟ್ - ವಿಶೇಷಚೇತನ ಅಭ್ಯರ್ಥಿಯ ವೈದ್ಯಕೀಯ ಪದವಿ ಪ್ರವೇಶ

ವಿಶೇಷಚೇತನ ಅಭ್ಯರ್ಥಿಯು ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ವೈದ್ಯಕೀಯ ಮಂಡಳಿ ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್,highcourt
ಹೈಕೋರ್ಟ್
author img

By ETV Bharat Karnataka Team

Published : Aug 24, 2023, 9:57 PM IST

ಬೆಂಗಳೂರು: ವೈದ್ಯಕೀಯ ಮಂಡಳಿ ವಿಶೇಷಚೇತನ ಅಭ್ಯರ್ಥಿಯ ಅಂಗವೈಕಲ್ಯ ಪ್ರಮಾಣವನ್ನು ನಿರ್ಧರಿಸಬೇಕೇ ವಿನಾ ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ದೈಹಿಕವಾಗಿ ಶೇ.50ರಷ್ಟು ಅಂಗವೈಕಲ್ಯ ಹೊಂದಿರುವ ನೀಟ್ ಅಭ್ಯರ್ಥಿಯೊಬ್ಬರಿಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹರಾಗಿಲ್ಲ ಎಂಬುದಾಗಿ ನಿರ್ಧರಿಸಿ ಪ್ರಮಾಣ ಪತ್ರ ನೀಡಿದ್ದ ವೈದ್ಯಕೀಯ ಮಂಡಳಿಯ ಕ್ರಮವನ್ನು ವಜಾಗೊಳಿಸಿತು.

ಚಿಕ್ಕಮಗಳೂರಿನ ಸಾದರಹಳ್ಳಿಯ ಡಾ.ಎಸ್.ಎನ್.ಪೂಜಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ವೈದ್ಯಕೀಯ ಮಂಡಳಿಯು ಆಯ್ಕೆ ಪ್ರಾಧಿಕಾರವಲ್ಲ. ಹೀಗಾಗಿ, ಅಭ್ಯರ್ಥಿಯ ಪ್ರವೇಶಾತಿಯ ಅರ್ಹತೆಯ ಬಗ್ಗೆ ಪ್ರಮಾಣ ಪತ್ರ ನೀಡುವಂತಿಲ್ಲ. ಪ್ರವೇಶದ ಅರ್ಹತೆಯ ಬಗ್ಗೆ ಸಕ್ಷಮ ಪ್ರಾಧಿಕಾರ ಅಂದರೆ ಆಯ್ಕೆ ಪ್ರಾಧಿಕಾರ ನಿರ್ಧರಿಸುವ ಅಗತ್ಯವಿದೆ. ವೈದ್ಯಕೀಯ ಮಂಡಳಿ ತನ್ನ ವ್ಯಾಪ್ತಿ ಮೀರಿ ನಡೆದುಕೊಂಡಿದೆ. ಈ ರೀತಿ ನಡೆದುಕೊಳ್ಳಲು ಅವಕಾಶ ಇಲ್ಲ. ಅಂಗವೈಕಲ್ಯದ ಪ್ರಮಾಣ ಆಧರಿಸಿ ವಿಶೇಷಚೇತನರು ಕಾನೂನು ಪ್ರಕಾರ ಪಡೆಯಬೇಕಾದ ಸೌಲಭ್ಯ ಪಡೆದುಕೊಳ್ಳಲು ಅರ್ಹರಿರುತ್ತಾರೆ ಎಂದು ನ್ಯಾಯಪೀಠ ಕಟುವಾಗಿ ನುಡಿದಿದೆ.

ತಜ್ಞ ಸಂಸ್ಥೆಯಾದ ಮಂಡಳಿಯು ಕೇವಲ ಅಂಗವೈಕಲ್ಯ ಪ್ರಮಾಣ ಪರಿಶೀಲಿಸಿ ನಿರ್ಣಯಿಸಬಹುದಷ್ಟೇ. ಅದನ್ನು ಹೊರತುಪಡಿಸಿ ಅಭ್ಯರ್ಥಿಯು ವೈದ್ಯಕೀಯ ಪದವಿ ಅಧ್ಯಯನ ಮಾಡಲು, ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದರಂತೆ ಪ್ರಕರಣದಲ್ಲಿ ವೈದ್ಯಕೀಯ ಮಂಡಳಿಯು ವಿದ್ಯಾರ್ಥಿನಿ ವೈದ್ಯಕೀಯ ಪದವಿ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂದು ನಿರ್ಧಾರ ಮಾಡಿರುವುದು ಸಂಪೂರ್ಣವಾಗಿ ಅಸಮರ್ಥನೀಯ ಮತ್ತು ಅಕ್ರಮವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಂತಿಮವಾಗಿ, ಅರ್ಜಿದಾರರು ಶೇ.50ರಷ್ಟು ಅಂಗವೈಕಲ್ಯ ಹೊಂದಿರುವುದರಿಂದ ಸಹಜ ಮತ್ತು ಕಾನೂನುಬದ್ಧವಾಗಿ ವೈದ್ಯಕೀಯ ಪದವಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲ್ಪಡಲು ಅರ್ಹರಿದ್ದಾರೆ. ಅದರಂತೆ ಪೂಜಾ ಅವರು ವೈದ್ಯಕೀಯ ಕೋರ್ಸ್‌ಗೆ ವಿಶೇಷಚೇತನ ಕೋಟಾದಡಿ ಪ್ರವೇಶ ಪಡೆಯುವ ಅರ್ಹತೆ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ನವದೆಹಲಿಯ ವೈದ್ಯಕೀಯ ಪರಿಷತ್ತು ಸಮಿತಿ ಪರಿಶೀಲಿಸಬೇಕು ಹಾಗೂ ಪರಿಗಣಿಸಬೇಕು. ವಿಶೇಷಚೇತನ ಕೋಟಾದಡಿ ಪ್ರವೇಶ ಪಡೆಯಲು ಅರ್ಜಿದಾರರು ಅರ್ಹರಾಗಿದ್ದರೆ, ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ವಿಶೇಷಚೇತನರಾದ ಪೂಜಾ ಅವರು ನೀಟ್ ಮೂಲಕ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ವಿಶೇಷಚೇತನ ಕೋಟಾದಡಿ ಅರ್ಜಿ ಸಲ್ಲಿಸಿದ್ದರು. ವೈದ್ಯಕೀಯ ಪರಿಷತ್ತು ಸಮಿತಿ (ಎನ್‌ಎಂಸಿ) ಸೂಚನೆ ಮೇರೆಗ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯಕೀಯ ಮಂಡಳಿ ಅಭ್ಯರ್ಥಿಯು ಶೇ.50ರಷ್ಟು ಅಂಗವೈಕಲ್ಯ ಹೊಂದಿದ್ದು, ಎನ್‌ಎಂಸಿ ನಿಯಮಗಳ ಪ್ರಕಾರ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಅರ್ಹರಾಗಿಲ್ಲ ಎಂದು ನಿರ್ಧರಿಸಿ ಪ್ರಮಾಣ ಪತ್ರ ನೀಡಿತ್ತು. ಅದನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಪೂಜಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್​ಗೆ ಕರ್ನಾಟಕ ಸರ್ಕಾರದ ಅಫಿಡವಿಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.