ETV Bharat / state

ಬಿಜೆಪಿಗೆ ಕೊಳ್ಳೆ ಹೊಡೆಯಲು ಬೆಂಗಳೂರು ಎಟಿಎಂ: ಹೆಚ್.ಡಿ.ಕುಮಾರಸ್ವಾಮಿ

ಹೆಬ್ಬಾಳ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

HD Kumaraswamy Pancharatna Yatra in Bengaluru
ಬೆಂಗಳೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ
author img

By

Published : Mar 22, 2023, 7:19 AM IST

ಬೆಂಗಳೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ

ಬೆಂಗಳೂರು: "ಐಟಿ-ಬಿಟಿ ಮೂಲಕ ಜಗದ್ವಿಖ್ಯಾತಿಯಾಗಿರುವ ಬೆಂಗಳೂರು ಮಹಾನಗರವನ್ನು ಬಿಜೆಪಿ ಸರ್ಕಾರ ಕೊಳ್ಳೆ ಹೊಡೆಯುವ ಎಟಿಎಂ ಮಾಡಿಕೊಂಡಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು. ಹೆಬ್ಬಾಳ ಕ್ಷೇತ್ರದಲ್ಲಿ ನಿನ್ನೆ(ಮಂಗಳವಾರ) ರಾತ್ರಿ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ, "ಸರ್ಕಾರ ಕಸ ವಿಲೇವಾರಿಯಲ್ಲಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದೆ" ಎಂದು ದೂರಿದರು.

"ಬೆಂಗಳೂರು ನಗರ ನೋಡಿದರೆ ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಡ್ಡು ಮಾಡುವ ಎಟಿಎಂ ಆಗಿದೆ. ಇವರಿಗೆಲ್ಲ ಇಲ್ಲಿ ಒಳ್ಳೆಯ ಆದಾಯ ಬರ್ತಿದೆ. ಜನರನ್ನು ಲೂಟಿ ಮಾಡುತ್ತಿದ್ದಾರೆ. ವಿಧಾನಸೌಧ ಇವರ ಕೈಯಲ್ಲಿ ಇದೆ. ಬಿಬಿಎಂಪಿ ಕೂಡ ಇವರ ಕೈಯಲ್ಲೇ ಇದೆ. ಹೀಗಾಗಿ ಲೂಟಿ ಮಾಡಲು ಪೊಗದಸ್ತಾದ ಎಟಿಎಂ ಇವರಿಗೆ ಸಿಕ್ಕಿದೆ. ಪಂಚರತ್ನ ಯಾತ್ರೆ ಮಾಡುತ್ತಾ ಹೆಬ್ಬಾಳ ಕ್ಷೇತ್ರದಲ್ಲಿ ನೋಡಿಕೊಂಡು ಬಂದೆ. ರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಬಿಬಿಎಂಪಿ ಏನು ಮಾಡುತ್ತಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ" ಎಂದು ಕಿಡಿಕಾರಿದರು.

ಪ್ರತಿಮೆ ರಾಜಕಾರಣಕ್ಕೆ ಆಕ್ರೋಶ: "ಬಿಜೆಪಿ ಸರ್ಕಾರ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕೆಲವು ವಿಚಾರಗಳು ತಿರುಗುಬಾಣವಾದ ಮೇಲೆ ಪುತ್ಥಳಿ ಅನಾವರಣದಲ್ಲಿ ರಾಜಕಾರಣ ಮಾಡುತ್ತಿದೆ. ಮಾಡಲಿ ಸಂತೋಷ. ಈಗ ಉರಿಗೌಡ ಮತ್ತು ನಂಜೇಗೌಡ ಅಂತಾ ಹೇಳುತ್ತಿದ್ದಾರೆ. ಹೀಗೆ ಮಾಡಿದರೆ ಜನ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈ ಬಾರಿ ಬಿಜೆಪಿ ಸೋಲುವುದು ಖಚಿತ" ಎಂದು ಭವಿಷ್ಯ ನುಡಿದರು.

"ಯುಗಾದಿ ಬಂದಿದೆ. ಕಳೆದ ಯುಗಾದಿಯಲ್ಲಿ ಬಿಜೆಪಿ ನಾಯಕರಿಗೆ ಅಪ್ಯಾಯಮಾನ ಆಗಿದ್ದ ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಮತ್ತೆ ಪ್ರೀತಿ ಹುಟ್ಟಿದೆ. ಮತ್ತೆ ವಿವಾದವನ್ನು ಶುರು ಮಾಡಿಕೊಂಡಿದ್ದಾರೆ. ಆಹಾರ, ವ್ಯಾಪಾರದಲ್ಲಿ ಕೂಡ ಅವರು ಧರ್ಮ ಹುಡುಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಯುಗಾದಿ ಮುಗಿದ ಮೇಲೆ ಇವರು ಯಾಕೆ ಸುಮ್ಮನಿದ್ದರು. ಈಗ ಯಾಕೆ ಮಾಡ್ತಾ ಇದಾರೆ. ಇವರಿಗೆ ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿ ಹೋಗಲು ವಿಷಯಗಳಿಲ್ಲ. ಈ ಬಾರಿ ಜನ ಇವರನ್ನು ನಂಬಲ್ಲ" ಎಂದರು.

ಪಂಚರತ್ನ ಯಾತ್ರೆಯಲ್ಲಿ ಹೆಬ್ಬಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೈಯ್ಯದ್ ಮೋಹಿದ್ ಅಲ್ತಾಫ್, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮುಂತಾದವರು ಇದ್ದರು. ಇದಕ್ಕೂ ಮುನ್ನ ಹೆಬ್ಬಾಳದ ನಾಗಶೆಟ್ಟಿ ಹಳ್ಳಿ ಹಾಗೂ ಭೂಪಸಂದ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಹೆಚ್​ಡಿಕೆ ತಮ್ಮ ಅಭ್ಯರ್ಥಿ ಪರ ಮತ ಯಾಚಿಸಿದರು.

ಇದನ್ನೂ ಓದಿ: ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.