ETV Bharat / state

ಪರಿಷತ್‌ನಲ್ಲಿ ನಿವೃತ್ತ ಶಾಸಕರ ಸಂಕಷ್ಟ ವಿವರಿಸಿದ ಎಚ್.ವಿಶ್ವನಾಥ್ - ಪಿಂಚಣಿ ಹೆಚ್ಚಿಸುವಂತೆ ಮನವಿ ಮಾಡಿದ ಎಚ್​ ವಿಶ್ವನಾಥ್​

ನಿವೃತ್ತ ಶಾಸಕರ ಸಂಕಷ್ಟಗಳ ಬಗ್ಗೆ ಪರಿಷತ್​​ನಲ್ಲಿ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿದರು.

H. Vishwanath
ಎಚ್. ವಿಶ್ವನಾಥ್
author img

By

Published : Mar 9, 2022, 7:55 PM IST

ಬೆಂಗಳೂರು: ವಿಧಾನಪರಿಷತ್​​ನಲ್ಲಿ ಶಾಸಕರಾಗಿ ನಿವೃತ್ತಿ ಹೊಂದುವ ಪ್ರಾಮಾಣಿಕ ರಾಜಕಾರಣಿಗಳಿಗೆ ಎದುರಾಗುವ ಸಮಸ್ಯೆಯನ್ನು ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಸವಿಸ್ತಾರವಾಗಿ ವಿವರಿಸಿದರು. ವಿಧಾನಪರಿಷತ್​ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಶಾಸಕರ ವೇತನ ವಿಚಾರ ಮಾತನಾಡಿದಾಗ, ವಿಶ್ವನಾಥ್​ ಹಳೆಯ ಘಟನೆ ವಿವರಿಸಿದರು.

1978ರಲ್ಲಿ ನಮ್ಮ ಗೌರವಧನ 600 ರೂ. ಇತ್ತು. ಪ್ರತಿದಿನ ಹಾಜರಾಗಿ ಸಹಿ ಹಾಕಿದರೆ 50 ರೂ.ಕೊಡ್ತಿದ್ದರು. ನಾನು ಶಾಸಕನಾಗಿದ್ದಾಗ ಒಬ್ಬ ಹುಡುಗ ಕಾರು ತೊಳೀತಿದ್ದ. ಒಮ್ಮೆ ಹೊಡೆದುಬಿಟ್ಟೆ. ದಿನಕ್ಕೆ ಎರಡು ರೂ. ಕೇಳಿದ್ದಕ್ಕೆ ಹೊಡೆದಿದ್ದೆ. ಆತ ನಾನು ಮದುಗಿರಿಯಿಂದ ಎರಡು ಬಾರಿ ಶಾಸಕರಾಗಿದ್ದವರ ಮಗ. ನಮ್ಮ ಅಣ್ಣ ಇನ್ನೊಂದು ಕಡೆ ಕಾರು ತೊಳೆಯುತ್ತಾನೆ. ಇದರಿಂದ ಬರುವ ಹಣದಲ್ಲಿ ಬದುಕುತ್ತೇವೆ. ತಂದೆಯವರ ಪ್ರಾಮಾಣಿಕತೆ ನಮಗೆ ಈ ಸ್ಥಿತಿ ತಂದಿದೆ. ಪಿಂಚಣಿ ಬಂದರೆ ಬದುಕಬಹುದು ಎಂದು ಆ ಹುಡುಗ ಹೇಳಿದ್ದ. ಆಗ ನಾನು ಆತನಿಗೆ ಒಂದು ಕೆಲಸ ಕೊಡಿಸಲು ಸಾಕಷ್ಟು ಶ್ರಮಿಸಿದ್ದೆ. ಆಗ ನಮ್ಮಂತ ಜನಪ್ರತಿನಿಧಿಗೆ ಮುಂದೆ ಪಿಂಚಣಿಯ ಅಗತ್ಯ ಎಷ್ಟಿದೆ ಎಂಬ ಅರಿವಾಯಿತು ಎಂದರು.

ಗುಂಡೂರಾವ್ ಸಿಎಂ ಆದಾಗ 1,000 ರೂ. ಸಂಬಳ ಮಾಡಿದರು. ಪೆನ್ಶನ್ ನೀಡುವಂತೆ ಒತ್ತಡ ಹಾಕಿದ್ದೆವು. ರಾಜಕೀಯ ರಣೋತ್ಸಾಹದಲ್ಲಿ ಯಾರು ಗೆಲ್ಲುತ್ತೇವೋ ಸೋಲುತ್ತೇವೋ ಗೊತ್ತಿಲ್ಲ. ನಮ್ಮ ಪಿಂಚಣಿ ಹೆಚ್ಚಿಸಿದರೆ ಅನುಕೂಲ ಆಗುತ್ತದೆ ಎಂದು ಎಚ್​. ವಿಶ್ವನಾಥ್​ ಮನವಿ ಮಾಡಿದರು.

ದೇವರಾಜ್ ಅರಸು ಅವಧಿಯಲ್ಲಿ ಕೆಲ ಶಾಸಕರಿಗೆ 125 ಸೈಟ್‌ಗಳನ್ನು ಸಾಮೂಹಿಕವಾಗಿ ನೀಡಿದ್ದರು. ಎಲ್ಲರಿಗೂ ವೇತನ ಹೆಚ್ಚಳದ ಅಗತ್ಯವಿಲ್ಲವಾದರೂ, ಮರ್ಯಾದೆಯಿಂದ ಬದುಕುವ ನಮ್ಮಂತವರಿಗೆ ಅವಶ್ಯಕತೆ ಇದೆ. ಈ ಸಮಾಜದಲ್ಲಿ ನಾವು ಬದುಕಲು ಗೌರವಧನ ಹೆಚ್ಚಳ ಅನಿವಾರ್ಯ ಎಂದು ಹೇಳಿದರು.

ಹಾಡಿನೊಂದಿಗೆ ಬಜೆಟ್ ವಿಮರ್ಶಿಸಿದ ಭೋಜೇಗೌಡ: ಶಿಕ್ಷಣಕ್ಕೆ ಒತ್ತು ಕೊಡಬೇಕು. ಅಂದಿನ ಗುಣಮಟ್ಟ ಇಂದು ಇಲ್ಲ. ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಜ್ಞಾನದ ಅವಶ್ಯಕತೆ ಇಲ್ಲ. ಕೆಲವೊಂದು ಪ್ರಮುಖ ವಿಚಾರ ಕೈಬಿಡಲಾಗಿದೆ. ಅದು ಸರಿಯಲ್ಲ ಎಂದು ಹೇಳಿದರು.

ಹೊರಟ್ಟಿ ಜನತಾ ಶಾಲೆ: ಬಸವರಾಜ್ ಹೊರಟ್ಟಿ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಿದ್ದರ ಪ್ರಸ್ತಾಪ ಕಲಾಪದಲ್ಲಿ ಆಯಿತು. ಭೋಜೇಗೌಡರು ಶಾಲೆ ವಿಚಾರ ಪ್ರಸ್ತಾಪಿಸಿದಾಗ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50 ಲಕ್ಷ ಬೆಲೆಬಾಳುವ 7 ಎಕರೆ ಭೂಮಿ ನೀಡಿದ್ದಾರೆ. ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅವರು ನನಗೆ ಅಧ್ಯಕ್ಷರಾಗಿ ಎಂದರು. ಆದರೆ ನಿಮ್ಮ ಶ್ರಮಕ್ಕೆ ಗೌರವ ನೀಡಬೇಕಿರುವ ಹಿನ್ನೆಲೆ ನೀವೇ ಅಧ್ಯಕ್ಷರಾಗಿರಿ ಎಂದಿದ್ದೇನೆ. ಶೇ.95 ರಷ್ಟು ಫಲಿತಾಂಶ ಬರ್ತಿದೆ. ಐಟಿಐ ಸಹ ಆರಂಭಿಸುವ ಗುರಿ ಹೊಂದಿದ್ದಾರೆ. ಸಾಕಷ್ಟು ಶೈಕ್ಷಣಿಕ ಕಾಳಜಿ ಸಭಾಪತಿಗಳಿಗೆ ಇದೆ ಎಂದು ವಿವರಿಸಿದರು.

ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು, ಅಧಿಕಾರಿಗಳು ಗೈರು: ಸ್ಪೀಕರ್‌ ಗರಂ, ಜೆಡಿಎಸ್‌ನಿಂದ ಸಭಾತ್ಯಾಗದ ಎಚ್ಚರಿಕೆ

ಭೋಜೇಗೌಡ ಮಾತನಾಡಿ, ಕೋವಿಡ್ ಹಿನ್ನೆಲೆ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಕ್ಕೆ ನಷ್ಟವಾಗಿದೆ. ಬೆಂಗಳೂರಿನ ನಾಲ್ಕು ವಿಭಾಗದಲ್ಲಿ ಕೋವಿಡ್ ಆಸ್ಪತ್ರೆ ಕಟ್ಟಿಸುವುದು ಸ್ವಾಗತಾರ್ಹ. ಜಯದೇವ ಆಸ್ಪತ್ರೆ ರಾಜ್ಯದ ವಿವಿಧೆಡೆ ವಿಸ್ತರಿಸುವುದು ಸ್ವಾಗತಾರ್ಹ. ಕೋವಿಡ್ ಸಂದರ್ಭ ವಾರಿಯರ್ಸ್ ಆಗಿ ಕೆಲಸ ಮಾಡಿದವರಿಗೆ ಗೌರವಿಸುವ ಕಾರ್ಯ ಆಗಬೇಕು. ಮೃತರ ಕುಟುಂಬದವರು, ಲಕ್ಷಾಂತರ ರೂ ನರ್ಸಿಂಗ್ ಹೋಂ ಬಿಲ್ ಪಾವತಿಸಿ ಬದುಕಿ ಬಂದು ಈಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗೆ ನಷ್ಟ ಪರಿಹಾರ ನೀಡುವವರು ಯಾರು. ಸುಲಿಗೆ ಮಾಡಿದ ಆಸ್ಪತ್ರೆ, ನರ್ಸಿಂಗ್ ಹೋಂನ ಯಾರ ಮೇಲಾದರೂ, ಕ್ರಿಮಿನಲ್ ಪ್ರಕರಣ ದಾಖಲಾಗಿದೆಯಾ? ಎಂದು ಕೇಳಿದರು.

ಅಡಿಕೆ ಬೆಳೆಗೆ ಬೆಲೆ ಬಂದ ಸಂದರ್ಭದಲ್ಲೇ ಹಳದಿ ರೋಗ ಬಂದು ಸಮಸ್ಯೆ ಉಂಟಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು. ಸಾಂಪ್ರದಾಯಿಕವಾಗಿ ಅಡಿಕೆ ಬೆಳೆ ಬೆಳೆಯುತ್ತಿರುವವರಿಗೆ ಬೆಲೆ ಹೆಚ್ಚಳದ ಪ್ರಯೋಜನ ಸಿಕ್ಕಿಲ್ಲ. ಇವರ ಸಹಾಯಕ್ಕೆ ಧಾವಿಸಬೇಕಿದೆ ಎಂದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.