ETV Bharat / state

ಬಿಜೆಪಿ ಸೇರಬೇಕೆಂಬ ಬಯಕೆ ಸ್ವಾರ್ಥ ರಾಜಕೀಯ: ಪಕ್ಷ ಬಿಟ್ಟವರ ಬಗ್ಗೆ ದೊಡ್ಡ ಗೌಡರ ಬೇಸರ - ರೈತರ ಸಾಲಮನ್ನಾ

ಪ್ರಸ್ತುತ ರಾಜಕೀಯ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂದರೆ ಜನರ ಬಗ್ಗೆ ಚಿಂತನೆ ಮಾಡುವ ಮನಸ್ಥಿತಿ ಬದಲಾಗಿದೆ. ಬಿಜೆಪಿಗೆ ಹೋಗಿ ಸೇರಬೇಕೆಂಬುವವರು ಅದರಲ್ಲೂ ರಾಜಕೀಯವಾಗಿ ಕೆಲವರು ಅನುಭವ ಹೊಂದಿರುವ ಮುಖಂಡರೇ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ರಾಜಕೀಯ ಸ್ವಾರ್ಥ ಎಂದು ಕರೆಯಲೋ, ದೇಶ ಪ್ರೇಮ ಇಲ್ಲವೆಂದು ಕರೆಯಲೋ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ದೇವೇಗೌಡರು ಮಾತನಾಡಿದ್ದಾರೆ
author img

By

Published : Oct 4, 2019, 7:18 PM IST

ಬೆಂಗಳೂರು: ಪ್ರಸ್ತುತ ರಾಜಕೀಯ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂದರೆ ಜನರ ಬಗ್ಗೆ ಚಿಂತನೆ ಮಾಡುವ ಮನಸ್ಥಿತಿ ಬದಲಾಗಿದೆ. ಬಿಜೆಪಿಗೆ ಹೋಗಿ ಸೇರಬೇಕೆಂಬುವವರು ಅದರಲ್ಲೂ ರಾಜಕೀಯವಾಗಿ ಕೆಲವರು ಅನುಭವ ಹೊಂದಿರುವ ಮುಖಂಡರೇ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ರಾಜಕೀಯ ಸ್ವಾರ್ಥ ಎಂದು ಕರೆಯಲೋ, ದೇಶ ಪ್ರೇಮ ಇಲ್ಲವೆಂದು ಕರೆಯಲೋ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ದೇವೇಗೌಡರು ಮಾತನಾಡಿದ್ದಾರೆ

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, 60 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಮನಸ್ಸಿಗೆ ತುಂಬಾ ನೋವಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಎಷ್ಟು ಹಿಂಸೆ ಅನುಭವಿಸಿದರೆಂಬುದು ನನಗೆ ಗೊತ್ತು. ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಸದನದಲ್ಲಿ ಮತ ಹಾಕುತ್ತಿದ್ದ ವೇಳೆ ನನ್ನ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಎಷ್ಟು ಹಗುರವಾಗಿ ಯಡಿಯೂರಪ್ಪನವರು ಮಾತನಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 37 ಸ್ಥಾನ ಬಂದಿದೆ. ಏನ್ರಿ? ರೈತರ ಸಾಲ ಮನ್ನಾ ಮಾಡಿಲ್ಲ ಎಂಬ ಒಂದೇ ವಿಷಯ ಹಿಡಿದುಕೊಂಡು ಎಷ್ಟು ಕೆಟ್ಟಪದ ಬಳಕೆ ಮಾಡಬೇಕೊ ಅಷ್ಟು ಯಡಿಯೂರಪ್ಪನವರು ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರೇ, ಅಪ್ಪ ಮಕ್ಕಳು ಸೇರಿ ನಿಮ್ಮನ್ನು ಮುಗಿಸಿಬಿಟ್ಟರು ಎಂದಿದ್ದರು. ಅವರ ಮನಸ್ಸಿಗೆ ಖುಷಿ ತರುವ ಮಾತು ಅವರು ಹೇಳಿದ್ದಾರೆ ಎನ್ನಬಹುದು ಎಂದ ಅವರು, ಸಿದ್ದರಾಮಯ್ಯನವರನ್ನು ಮುಗಿಸಲು ಸಾಧ್ಯವೇ? ಎಂದರು.

ಬ್ಯಾಂಕ್ ಗಳಲ್ಲಿ ರೈತರ ಸಾಲಮನ್ನಾ ಮಾಡಿದವರು ಯಾರು?

ಯಾವ ರಾಜ್ಯದಲ್ಲಿ 37 ಸ್ಥಾನ ಕೊಟ್ಟರೋ, ಅದೇ ರಾಜ್ಯದಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲಿ ರೈತರ ಸಾಲಮನ್ನಾ ಮಾಡಿದವರು ಯಾರು. ಜೊತೆಗೆ ಋಣಮುಕ್ತ ಕಾಯಿದೆಯನ್ನು ಜಾರಿಗೆ ತಂದವರು ಯಾರು? ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ಬೆಳಗಾವಿಗೆ ಹೋಗಿದ್ದಾರೆ. ಯಾವ ಯಡಿಯೂರಪ್ಪನವರ ಪಾಲಿಗೆ ಉತ್ತರ ಕರ್ನಾಟಕ ಮೀಸಲು ಎಂದು ಬೀಗುತ್ತಿದ್ದರೋ, ಅದೇ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅವರಿಗೆ ಸಿಕ್ಕಿರುವ ಅಭೂತಪೂರ್ಣ ಸ್ವಾಗತ ನೋಡಿದ್ದೇನೆ. “ ಶಾಸಕರನ್ನು ಕರೆದು ಬಾರೋ ಇಲ್ಲಿ. ದುಡ್ಡು ಇಲ್ಲಿದೆ” ಎಂದು ಯಡಿಯೂರಪ್ಪನವರು ಹೇಳಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜ್ಯ ಹಾಗೂ ದೇಶದ ಜನ ಪ್ರಜ್ಞಾವಂತರು. ಒಂದು ಬಾರಿ ಮೋಸ ಮಾಡಬಹುದು. ಸದಾ ಕಾಲ ಮೋಸ ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

Intro:ಬೆಂಗಳೂರು : ಪ್ರಸ್ತುತ ರಾಜಕೀಯ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂದರೆ ಜನರ ಬಗ್ಗೆ ಚಿಂತನೆ ಮಾಡುವ ಬದಲಾಗಿದೆ ಬಿಜೆಪಿಗೆ ಹೋಗಿ ಸೇರಬೇಕೆಂಬುದು ಅದರಲ್ಲೂ ರಾಜಕೀಯವಾಗಿ ಕೆಲವರು ಅನುಭವ ಹೊಂದಿರುವ ಮುಖಂಡರು ಮಾಡುತ್ತಿದ್ದಾರೆ. ಇದಕ್ಕೆ ರಾಜಕೀಯ ಸ್ವಾರ್ಥ ಎಂದು ಕರೆಯಲೋ, ದೇಶ ಪ್ರೇಮ ಇಲ್ಲವೆಂದು ಕರೆಯಲೋ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೇಸರವ್ಯಕ್ತಪಡಿಸಿದ್ದಾರೆ.Body:ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, 60 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದರು.
ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಎಷ್ಟು ಹಿಂಸೆ ಅನುಭವಿಸಿದರೆಂಬುದು ನನಗೆ ಗೊತ್ತು. ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಸದನದಲ್ಲಿ ಮತಕ್ಕೆ ಹಾಕುತ್ತಿದ್ದ ವೇಳೆ ನನ್ನ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಎಷ್ಟು ತುಚ್ಯವಾಗಿ ಯಡಿಯೂರಪ್ಪನವರು ಮಾತನಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 37 ಸ್ಥಾನ ಬಂದಿದೆ. ಏನ್ರಿ ರೈತರ ಸಾಲ ಮನ್ನಾ ಮಾಡಿಲ್ಲ. ಒಂದೇ ವಿಷಯ ಹಿಡಿದುಕೊಂಡು ಎಷ್ಟು ಕೆಟ್ಟಪದ ಬಳಕೆ ಮಾಡಬೇಕೊ ಅಷ್ಟು ಯಡಿಯೂರಪ್ಪನವರು ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರೇ, ಅಪ್ಪ ಮಕ್ಕಳು ಸೇರಿ ನಿಮ್ಮನ್ನು ಮುಗಿಸಿಬಿಟ್ಟರು ಎಂದು ಯಡಿಯೂರಪ್ಪನವರು ಹೇಳಿದ್ದರು. ಅಯ್ಯೋ, ಅಶ್ಲೀಲ ಪದಬೇಡ, ಮನಸ್ಸಿಗೆ ಖುಷಿ ತರುವ ಮಾತು ಅವರು ಹೇಳಿದ್ದಾರೆ ಎನ್ನಬಹುದು ಎಂದ ಗೌಡರು, ಸಿದ್ದರಾಮಯ್ಯನವರನ್ನು ಮುಗಿಸಲು ಸಾಧ್ಯವೇ? ಎಂದರು.
ಯಾವ ರಾಜ್ಯದಲ್ಲಿ 37 ಸ್ಥಾನ ಕೊಟ್ಟರೋ, ಅದೇ ರಾಜ್ಯದಲ್ಲಿ ಎಲ್ಲ ಬ್ಯಾಂಕ್ ಗಳಲ್ಲಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದವರು ಯಾರು. ಜೊತೆಗೆ ಋಣಮುಕ್ತ ಕಾಯಿದೆಯನ್ನು ಜಾರಿಗೆ ತಂದವರು ಯಾರು? ಯಡಿಯೂರಪ್ಪನವರೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಬೆಳಗಾವಿಗೆ ಹೋಗಿದ್ದಾರೆ. ಯಾವ ಯಡಿಯೂರಪ್ಪನವರ ಪಾಲಿಗೆ ಉತ್ತರ ಕರ್ನಾಟಕ ಮೀಸಲು ಎಂದು ಬೀಗುತ್ತಿದ್ದರೋ, ಅದೇ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅವರಿಗೆ ಸಿಕ್ಕಿರುವ ಅಭೂತಪೂರ್ಣ ಸ್ವಾಗತ ನೋಡಿದ್ದೇನೆ. “ ಶಾಸಕರನ್ನು ಕರೆದು ಬಾರೋ ಇಲ್ಲಿ. ದುಡ್ಡು ಎಲ್ಲಿದೆ” ಎಂದು ಯಡಿಯೂರಪ್ಪನವರು ಹೇಳಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜ್ಯ ಹಾಗೂ ದೇಶದ ಜನ ಪ್ರಜ್ಞಾವಂತರು. ಒಂದು ಬಾರಿ ಮೋಸ ಮಾಡಬಹುದು. ಸದಾ ಕಾಲ ಮೋಸ ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.