ETV Bharat / state

ರಾಜೀನಾಮೆ ಬಳಿಕ ಯಾವುದೇ ಗೊಂದಲ, ಆತಂಕದಲ್ಲಿ ಬಿಎಸ್​ವೈ ಇಲ್ಲ: ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲಕ್ಕೆ ತೆರೆ ಎಳೆಯಲು ಅರುಣ್ ಸಿಂಗ್ ಆಗಮನದ ಬಳಿಕ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎನ್ನಲಾಗಿತ್ತು. ಇಂದು ಸಂಜೆ ಎಲ್ಲಾ ಶಾಸಕರನ್ನು ಸಭೆಗೆ ಕರೆಯುವ ಬಗ್ಗೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್
ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್
author img

By

Published : Jul 27, 2021, 1:10 PM IST

Updated : Jul 27, 2021, 1:39 PM IST

ಬೆಂಗಳೂರು: ಎಲ್ಲರ ಅಭಿಪ್ರಾಯಗಳನ್ನು ಕೇಳಬಹುದು. ಈ ಸಂದರ್ಭದಲ್ಲಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಬಿಎಸ್​ವೈ ಆರಾಮಾಗಿ ಇದ್ದಾರೆ. ಬಂದಂತಹ ಶಾಸಕರು, ಮುಖಂಡರಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ರಾಜೀನಾಮೆ ಕೊಟ್ಟಿರುವುದಕ್ಕೆ ಯಾವುದೇ ಗೊಂದಲ ಆತಂಕದಲ್ಲಿ ಅವರು ಇಲ್ಲವೆಂದು ಗುಂಡ್ಲುಪೇಟೆ ಶಾಸಕ ನಿರಂಜನ್​ ಕುಮಾರ್​ ತಿಳಿಸಿದರು.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಪ್ರತಿಕ್ರಿಯೆ

ಬಿಎಸ್​ವೈ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರನ್ನು ಸಭೆಗೆ ಕರೆಯುವ ಬಗ್ಗೆ ಪ್ರತಿಕ್ರಿಯಿಸಿದರು. ಸಂಜೆ ಶಾಸಕರನ್ನು ಸಭೆಗೆ ಕರೆಯಬಹುದು. ಪಕ್ಷದ ಸಭೆ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಸಂಜೆ ಕರೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ?:

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲಕ್ಕೆ ತೆರೆ ಎಳೆಯಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅರುಣ್ ಸಿಂಗ್ ಆಗಮನದ ಬಳಿಕ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎನ್ನಲಾಗಿತ್ತು.

ಈಗಾಗಲೇ ಶಾಸಕರಿಗೆ ಕರೆ ಮಾಡಲಾಗುತ್ತಿದ್ದು, ಸಭೆಯಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ನಡೆಯಲಿದೆ. ‌ಇದಾದ ಬಳಿಕ ಒಂದೆರಡು ದಿನಗಳಲ್ಲಿ ಸಿಎಂ ಯಾರು ಎಂಬುದು ತಿಳಿಯಲಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ರಾಜ್ಯಕ್ಕೆ ಅರುಣ್​ ಸಿಂಗ್​, ಕಿಶನ್​ ರೆಡ್ಡಿ ದೌಡು: ಇಂದು ಸಂಜೆಯೇ ಸಿಎಂ ಆಯ್ಕೆ!

Last Updated : Jul 27, 2021, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.