ಬೆಂಗಳೂರು: ಐಎಂಎ ಕಂಪನಿ ಅವ್ಯವಹಾರ ಸಂಬಂಧ 8 ತಿಂಗಳ ಮೊದಲೇ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ವಿಚಾರ ಬಯಲಾಗಿದೆ.
ಆರ್ಬಿಐ ನಿಯಮಾವಳಿ ಪಾಲಿಸದ ಐಎಂಎ ಕಂಪನಿ ವಿರುದ್ಧ 8 ತಿಂಗಳ ಹಿಂದೆಯೇ ಹೂಡಿಕೆದಾರರಿಗೆ ಪಬ್ಲಿಕ್ ನೊಟೀಸ್ ನೀಡುವ ಮೂಲಕ ಎಚ್ಚರಿಸಿತ್ತು. 2018 ರ ನವಂಬರ್ 20 ರಂದು ಪಬ್ಲಿಕ್ ನೋಟಿಸ್ ಹೊರಡಿಸಿದ್ದ ಸರ್ಕಾರ ಐಎಂಎ ಎಂಬ ಕಂಪನಿ ಹೂಡಿಕೆದಾರರಿಂದ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವುದಾಗಿ ಅವ್ಯವಹಾರದ ಕುರಿತು ಬೆಂಗಳೂರು ಉತ್ತರ ತಹಶಿಲ್ದಾರಿಂದ ಪಬ್ಲಿಕ್ ನೊಟೀಸ್ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ.
ಆರ್ಬಿಐ ಮಾಹಿತಿ ಹಿನ್ನೆಲೆ 2018 ರ ಜುಲೈನಲ್ಲಿ ರಾಜ್ಯ ಮಟ್ಟದ ಸಮನ್ವಯ ಸಮಿತಿ ರಾಜ್ಯ ಮುಖ್ಯಕಾರ್ಯದರ್ಶಿ, ಅರ್ಬಿಐನ ರಾಜ್ಯದ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಸಭೆ ಸೇರಿ ನಿಯಮಬಾಹಿರವಾಗಿ ಹಣ ಸಂಗ್ರಹಿಸುತ್ತಿರುವ ಕಂಪನಿ ವಿರುದ್ಧ ಸಿಐಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನೆಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದರು. ಇಷ್ಟಾದರೂ ಹೂಡಿಕೆದಾರರು ಎಚ್ಚೆತ್ತುಕೊಳ್ಳದೆ ಮೋಸ ಹೋಗಿದ್ದಾರೆ.