ETV Bharat / state

ಪಾರ್ಕಿಂಗ್ ಪಾಲಿಸಿ 2.0: ವಸತಿ ಪ್ರದೇಶಗಳ ಪಾರ್ಕಿಂಗ್​ಗೂ ಶುಲ್ಕ ನಿಗದಿ - ಪಾರ್ಕಿಂಗ್ ಪಾಲಿಸಿ 2.0ಗೆ ಗ್ರೀನ್ ಸಿಗ್ನಲ್

ಪಾರ್ಕಿಂಗ್ ಪಾಲಿಸಿ 2.0 ರಚಿಸಲಾಗಿದ್ದು, ಇದನ್ನು ಜಾರಿಗೆ ತರಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಪಾಲಿಸಿ ಪ್ರಕಾರವಾಗಿ ಪ್ರದೇಶ ವಾಹನ ನಿಲುಗಡೆ ಯೋಜನೆಗಳ ಆಧಾರದಲ್ಲಿ ಪಾರ್ಕಿಂಗ್ ಶುಲ್ಕ ಜಾರಿಗೊಳಿಸುವಂತೆ ಆದೇಶ ಹೊರಡಿಸಿದೆ.

Government Green Signal for Parking Policy 2.0
ಪಾರ್ಕಿಂಗ್ ಪಾಲಿಸಿ 2.0ಗೆ ಗ್ರೀನ್ ಸಿಗ್ನಲ್
author img

By

Published : Feb 11, 2021, 10:24 PM IST

ಬೆಂಗಳೂರು: ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ರಚಿಸಿದ ಆರಂಭದ ಪಾರ್ಕಿಂಗ್ ನೀತಿಯಲ್ಲಿ ಕೆಲವು ಮಾರ್ಪಾಡು ಮಾಡಿ ಪಾರ್ಕಿಂಗ್ ಪಾಲಿಸಿ 2.0 ರಚಿಸಲಾಗಿದ್ದು, ಇದನ್ನು ಜಾರಿಗೆ ತರಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ವಾಣಿಜ್ಯ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ವಸತಿ ಪ್ರದೇಶಗಳ ರಸ್ತೆಗಳಲ್ಲೂ ಪಾರ್ಕಿಂಗ್ ಶುಲ್ಕ ಜಾರಿಗೆ ಬರಲಿದೆ. ಈ ಪಾಲಿಸಿ ಪ್ರಕಾರವಾಗಿ ಪ್ರದೇಶ ವಾಹನ ನಿಲುಗಡೆ ಯೋಜನೆಗಳ ಆಧಾರದಲ್ಲಿ ಪಾರ್ಕಿಂಗ್ ಶುಲ್ಕ ಜಾರಿಗೊಳಿಸುವಂತೆ ಆದೇಶ ಹೊರಡಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ, ವಾಹನ ನಿಲುಗಡೆ ಮಾಡುವವರಿಗೆ ವಾರ್ಷಿಕ ನಿಲುಗಡೆ ಪರವಾನಗಿ, ಶುಲ್ಕದ ನಾಲ್ಕನೇ ಒಂದರಷ್ಟು ದಂಡವನ್ನು ಪ್ರತೀ ಸಂದರ್ಭದಲ್ಲೂ ವಿಧಿಸಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಓದಿ : ಓದಿ : ಮುಂದುವರೆದ ಬಜೆಟ್ ಪೂರ್ವಭಾವಿ ಸಭೆ: 10 ಇಲಾಖೆಗಳೊಂದಿಗೆ ಸಿಎಂ ಬಿಎಸ್​​​ವೈ ಚರ್ಚೆ

ವಲಯವಾರು ಪಾರ್ಕಿಂಗ್ ಕಾರ್ಯತಂತ್ರ ರೂಪಿಸುವುದು, ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಸಂಚರಿಸುವ ಬಸ್​​ಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿ, ಟ್ರಕ್​​ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್ ನಿರ್ಮಾಣ, ಸಗಟು ಮಾರುಕಟ್ಟೆಗಳ ಸ್ಥಳಾಂತರ, ಪಾರ್ಕಿಂಗ್ ನಿರ್ವಹಣೆಗೆ ಹೊಸ ತಂತ್ರಜ್ಞಾನಗಳ ಅಳವಡಿಕೆಯ ಪ್ರಸ್ತಾವಗಳೂ ನೀತಿಯಲ್ಲಿವೆ.

ವಸತಿ ಪ್ರದೇಶದ (ವಾರ್ಡ್ ಮಟ್ಟದಲ್ಲಿ) ಪಾರ್ಕಿಂಗ್ ಶುಲ್ಕ
ಸಣ್ಣ ಕಾರುಗಳು - 1000 ರೂ.
ಮಧ್ಯಮ ಕಾರುಗಳು- 3000-4000 ರೂ.
ಎಂ​ಯುವಿ, ಎಸ್​ಯುವಿ - 5000

ಇನ್ನು ಪ್ರತೀ ಗಂಟೆಗೆ ಪಾರ್ಕಿಂಗ್ ಸಮಯ ಹೆಚ್ಚಿದಂತೆ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಿಧಿಸಲು ಕೂಡ ಪಾಲಿಸಿಯಲ್ಲಿ ನಿಯಮ ರೂಪಿಸಲು ಅವಕಾಶವಿದೆ. ಈ ರೀತಿ ಪಾರ್ಕಿಂಗ್ ಶುಲ್ಕ ವಿಧಿಸುವುದರಿಂದ ಜನರು ಖಾಸಗಿ ವಾಹನ ಬಿಟ್ಟು, ಸಾರ್ವಜನಿಕ ವಾಹನ ಓಡಾಟಕ್ಕೆ ಪ್ರೋತ್ಸಾಹ ಸಿಗಲು ಪಾರ್ಕಿಂಗ್ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಈ ನೀತಿ ರೂಪಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.