ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯವಾಗಿರುತ್ತೆ. ಆದ್ರೆ ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ರಾಜ್ಯದ ಕೆಲ ನಗರಗಳಲ್ಲಿ ಬಂಗಾರದ ಬೆಲೆ ಕಡಿಮೆಯಾಗಿದ್ದು, ನೀವಿಂದು ಚಿನ್ನಾಭರಣ ಖರೀದಿಸಬೇಕೆಂದುಕೊಂಡಿದ್ದರೆ, ನಿಮಗಿದು ಉತ್ತಮ ಸಮಯ..
ನಗರ | ಚಿನ್ನ22K | ಚಿನ್ನ24k | ಬೆಳ್ಳಿ |
ಬೆಂಗಳೂರು | 4,710 | 5,095 | 57.2 |
ಮಂಗಳೂರು | 4,788 | 5,115 | 62.40 |
ಹುಬ್ಬಳ್ಳಿ | 4,741 | 5,172 | 58,100(ಕೆ.ಜಿ) |
ಮೈಸೂರು | 4,735 | 5,246 | 58.50 |
ದಾವಣಗೆರೆ | 4,667 | 5,183 | 62.48 |
ಈ ಎಲ್ಲಾ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 75 ರೂ.(ಪ್ರತಿ ಗ್ರಾಂ), 24K ಚಿನ್ನದ ಬೆಲೆಯಲ್ಲಿ 81 ರೂ. ಮತ್ತು ಬೆಳ್ಳಿ ಬೆಲೆಯಲ್ಲಿ 10 ಪೈಸೆ ಇಳಿಕೆ ಆಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 75 ರೂ., 24K ಚಿನ್ನದ ಬೆಲೆಯಲ್ಲಿ 52 ರೂ. ಮತ್ತು ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 140 ರೂ. ಇಳಿಕೆ ಆಗಿದೆ.
ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 70 ರೂ., 24K ಚಿನ್ನದ ಬೆಲೆಯಲ್ಲಿ 78 ರೂ. ಇಳಿಕೆ ಕಂಡಿದೆ. ದಾವಣಗೆರೆಯಲ್ಲಿ 22K ಚಿನ್ನದ ಬೆಲೆಯಲ್ಲಿ 120 ರೂ., 24K ಚಿನ್ನದ ಬೆಲೆಯಲ್ಲಿ 128 ರೂ. ಮತ್ತು ಬೆಳ್ಳಿ ಬೆಲೆಯಲ್ಲಿ 2 ರೂ. ಇಳಿಕೆ ಆಗಿದೆ.
ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಇಂದು ತರಕಾರಿ, ಹಣ್ಣುಗಳಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?