ETV Bharat / state

ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಿ ಆತಂಕ ದೂರ ಮಾಡಿ: ಸಿದ್ದರಾಮಯ್ಯ ಟ್ವೀಟ್​ - ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​

ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಇಂದು ಪ್ರತಿಭಟನೆಗೆ ಕುಳಿತಿರುವ ಭಾವಿ ಶಿಕ್ಷಕರ ಪರವಾಗಿಯೂ ಹೋರಾಟ ಮುಂದುವರೆಸಿದ್ದಾರೆ.

Siddaramaiah
ಸಿದ್ದರಾಮಯ್ಯ
author img

By

Published : Oct 12, 2020, 7:01 PM IST

ಬೆಂಗಳೂರು: ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ನಂತರವೂ ನೇಮಕಾತಿ ಪತ್ರ ದೊರೆಯದೇ ಪ್ರತಿಭಟನೆಗೆ ಕುಳಿತಿರುವವರ ಪರವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ, ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿಯ ಎದುರು ಕೂತಿದ್ದಾರೆ. ಈಗಲಾದರೂ ಸಹ ಕಣ್ತೆರೆಯಿರಿ. ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನು ದೂರ ಮಾಡಿ ಎಂದಿದ್ದಾರೆ.

  • ಮಾನ್ಯ @BSYBJP ಹಾಗೂ ಶಿಕ್ಷಣ ಸಚಿವ @nimmasuresh ಅವರೇ,

    ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿಯ ಎದುರು ಕೂತಿದ್ದಾರೆ.

    ಈಗಲಾದರೂ ಸಹ ಕಣ್ತೆರೆಯಿರಿ.
    ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನು ದೂರ ಮಾಡಿ pic.twitter.com/G51ETTi71G

    — Siddaramaiah (@siddaramaiah) October 12, 2020 " class="align-text-top noRightClick twitterSection" data=" ">

ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಇಂದು ಪ್ರತಿಭಟನೆಗೆ ಕುಳಿತಿರುವ ಭಾವಿ ಶಿಕ್ಷಕರ ಪರವಾಗಿಯೂ ಹೋರಾಟ ಮುಂದುವರಿಸಿದ್ದಾರೆ.

ಬೆಂಗಳೂರು ಕಾಳಜಿ ಮಹಾನಗರದ ಅಭಿವೃದ್ಧಿಗೆ ಮಾರಕವಾಗುವ ಪ್ರಸ್ತಾವನೆಯನ್ನು ಬಿಬಿಎಂಪಿ ಸಲ್ಲಿಸಿದೆ. ಇದರ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿ ಆಸ್ತಿ ತೆರಿಗೆ ದರ ಹೆಚ್ಚಳ ಮಾಡಲು ಮುಂದಾದರೆ ತುಂಬಾ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಈಗಿರುವ ಬೆಲೆಯನ್ನು ಕಟ್ಟಲು ನಗರದ ಬಹುತೇಕ ನಾಗರಿಕರು ಪರದಾಡುತ್ತಿದ್ದಾರೆ. ಭಾರಿ ಆರ್ಥಿಕ ಸಂಕಷ್ಟ ಎದುರಾಗಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆಸ್ತಿ ತೆರಿಗೆ ಹೆಚ್ಚಿಸುವ ಬದಲು ಕಡಿಮೆಗೊಳಿಸುವುದು ಸೂಕ್ತ ಎಂದಿದ್ದಾರೆ.

ಆಸ್ತಿ ತೆರಿಗೆ ಹೆಚ್ಚಳವು ಬಾಡಿಗೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೆಚ್ಚಿದ ವೆಚ್ಚಗಳೊಂದಿಗೆ ವ್ಯಾಪಾರ ನಡೆಸಲು ಕಷ್ಟವಾಗುತ್ತದೆ. ವಸತಿ, ಬಾಡಿಗೆ, ಬಡ ಮತ್ತು ಮಧ್ಯಮ ಆದಾಯದ ಜನರಿಗೆ ಕೈಗೆಟುಕುವಿಕೆ ಕಡಿಮೆ ಮಾಡುತ್ತದೆ. ಈ ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.