ETV Bharat / state

ಮತ್ತೊಂದು ಉಪಸಮರಕ್ಕೆ ಮುಹೂರ್ತ ಫಿಕ್ಸ್: ಮೂರು ಉಪಸಮರ ರಣಕಣಗಳ ಚಿತ್ರಣ ಹೀಗಿದೆ

ಬಿಜೆಪಿ ಮೂರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪಣ ತೊಟ್ಟಿದ್ದರೆ, ಕಾಂಗ್ರೆಸ್ ಈ ಉಪಸಮರದಲ್ಲಾದರೂ ಗೆಲುವಿನ ನಗೆ ಬೀರಲು ಶತಾಯಗತಾಯ ಯತ್ನಿಸುತ್ತಿದೆ. ಇತ್ತ ಜೆಡಿಎಸ್ ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲದಲ್ಲಿದೆ.

ಉಪಚುನಾವಣೆ ವಿವಿರ
ಉಪಚುನಾವಣೆ ವಿವಿರ
author img

By

Published : Mar 17, 2021, 3:33 AM IST

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಉಪಸಮರಕ್ಕೆ ರಣಕಣ ಸಿದ್ಧವಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 17ಕ್ಕೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಕಾವೇರಲಿದೆ.

ಈ ಮೂರು ಕ್ಷೇಯ್ರಗಳ ಕಿರು ಪಡಿಚಯ ಇಲ್ಲಿದೆ.ಚುನಾವಣಾ ಆಯೋಗ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರ, ಕಾಂಗ್ರೆಸ್ ಶಾಸಕರಾದ ನಾರಾಯಣ ರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಹಾಗೂ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ವಲಸೆ ಬಂದಿದ್ದರಿಂದ ತೆರವಾದ ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 17ಕ್ಕೆ ಉಪಸಮರ ನಡೆಯಲಿದ್ದು, ಮೇ 2ಕ್ಕೆ ಪಲಿತಾಂಶ‌ ಪ್ರಕಟವಾಗಲಿದೆ.

ಇದೀಗ ಬಿಜೆಪಿ ಮೂರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪಣ ತೊಟ್ಟಿದ್ದರೆ, ಕಾಂಗ್ರೆಸ್ ಈ ಉಪಸಮರದಲ್ಲಾದರೂ ಗೆಲುವಿನ ನಗೆ ಬೀರಲು ಶತಾಯಗತಾಯ ಯತ್ನಿಸುತ್ತಿದೆ. ಇತ್ತ ಜೆಡಿಎಸ್ ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲದಲ್ಲಿದೆ.

ಬೆಳಗಾವಿ ರಣಕಣದ ವಿವರ

ಬಿಜೆಪಿ ಸಂಸದ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಉಪಸಮರದಲ್ಲಿ ಬಿಜೆಪಿ ಕಡೆಯಿಂದ ಅಂಗಡಿ ಅವರ ಪುತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದರ ಜೊತೆಗೆ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ, ಪ್ರಮೋದ್ ಮುತಾಲಿಕ್, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಎಂಎಲ್ ಸಿ ಮಹಾಂತೇಶ ಕವಟಗಿಮಠ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.

ಇತ್ತ ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್ ಹುಕ್ಕೇರಿ ಪ್ರಬಲ ಆಕಾಂಕ್ಷಿಯಾಗಿದ್ದು, ಸತೀಶ್ ಜಾರಕಿಹೊಳಿ, ಚೆನ್ನರಾಜ್ ಹೆಬ್ಬಾಳ್ಕರ್ ಹೆಸರೂ ಕೇಳಿ ಬರುತ್ತಿದೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದು ಇನ್ನೂ ಅನುಮಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 18,11,642 ಮತದಾರರಿದ್ದಾರೆ. ಈ ಪೈಕಿ ಮಹಿಳೆಯರು 9,01,433, ಪುರುಷರು 9,10,151 ಮತದಾರರಿದ್ದಾರೆ. 24,462 ಯುವ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2064 ಮತಗಟ್ಟೆಗಳಿವೆ.

ಮಸ್ಕಿ ವಿಧಾನಸಭೆ ಕ್ಷೇತ್ರದ ವಿವರ

ಕಾಂಗ್ರೆಸ್ ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಾಪ್ ಗೌಡ ಬಿಜೆಪಿಗೆ ವಲಸೆ ಬಂದ ಕಾರಣ ಮಸ್ಕಿ ಕ್ಷೇತ್ರ ತೆರವಾಗಿತ್ತು. ಇದೀಗ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಕಾಂಗ್ರೆಸ್ ನಿಂದ ಬಸನಗೌಡ ತುರುವೀಹಾಳ ಹೆಸರು ಕೇಳಿ ಬರುತ್ತಿದೆ.

ಇತ್ತ ಜೆಡಿಎಸ್ ಪಕ್ಷದಿಂದ ರಾಮಚಂದ್ರ ನಾಯಕ್ ಹೆಸರು ಕೇಳಿ‌ಬರುತ್ತಿದೆ. ಎಸ್ ಟಿ ಮೀಸಲು ಕ್ಷೇತ್ರವಾದ ಮಸ್ಕಿಯಲ್ಲಿ ಒಟ್ಟು 2,06,354 ಮತದಾರರಿದ್ದಾರೆ. ಈ ಪೈಕಿ ಮಹಿಳೆಯರು 1,05,040, ಪುರುಷರು 1,01,301 ಮತದಾರರು ಇದ್ದಾರೆ. 2,678 ಯುವ ಮತದಾರರು ಇದ್ದಾರೆ. ಕ್ಷೇತ್ರದ ಒಟ್ಟು ಮತಗಟ್ಟೆ 231.

ಬಸವಕಲ್ಯಾಣ ಕ್ಷೇತ್ರದ ವಿವರ

ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣ್ ರಾವ್ ನಿಧನದಿಂದ ತೆರವಾದ ಬಸವಕಲ್ಯಾಣ ಕ್ಷೇತ್ರ ಬಿಜೆಪಿಗೂ ಹಾಗೂ ಕಾಂಗ್ರೆಸ್​ಗೆ ಪ್ರತಿಷ್ಠಿತ ಕಣವಾಗಿದೆ. ಅನುಕಂಪದ ಅಲೆಯನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷದಿಂದ ಮಲ್ಲಮ್ಮ ನಾರಾಯಣ್ ರಾವ್ ರನ್ನು ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿದೆ. ಇನ್ನು ವಿಜಯ್ ಸಿಂಗ್ ಎಂಬವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಇತ್ತ ಬಿಜೆಪಿ ಪಕ್ಷದಿಂದ ಎಂಜಿ ಮೂಳ್ಹೆ, ಶರಣು ಸಲಗಾರ್ ಮಲ್ಲಿಕಾರ್ಜುನ‌ ಖೂಬಾ ಹೆಸರು ಕೇಳಿ ಬರುತ್ತಿದೆ. ಅದೇ ಜೆಡಿಎಸ್ ಕಡೆಯಿಂದ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 2,39,473 ಮತದಾರರು ಇದ್ದಾರೆ. ಈ ಪೈಕಿ ಮಹಿಳೆಯರು 1,14,628, ಪುರುಷ ಮತದಾರರು 1,24,841 ಇದ್ದಾರೆ. ಕ್ಷೇತ್ರದ ಒಟ್ಟು ಮತಗಟ್ಟೆ 264

ETV Bharat Logo

Copyright © 2024 Ushodaya Enterprises Pvt. Ltd., All Rights Reserved.