ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ಕೈವಾಡ ಇದ್ದೇ ಇದೆ ಎಂದು ಮಾಜಿ ಸಚಿವ ರೋಷನ್ ಬೇಗ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅಮಾಯಕರನ್ನು ಬಿಡಿ ಅಂತ ನಾನೇ ಹೇಳಿದ್ದೇನೆ. ಆದರೆ ಮೌಲಾನಗಳು ಗೋರಿ ಪಾಳ್ಯದಿಂದ ಯಾಕೆ ಇಲ್ಲಿಗೆ ಆಗಮಿಸಬೇಕಿತ್ತು? ಟಿಪ್ಪು ನಗರದಿಂದ ಡಿಜೆ ಹಳ್ಳಿಗೆ ಯಾಕೆ ಬರಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಜಮೀರ್ ಏನು ಅಂತ ನಾನು ಮಾತನಾಡಲಿ. ನಾನೊಬ್ಬ ಯೂತ್ ಮೂವ್ಮೆಂಟ್ ನಿಂದ ಬಂದ ಸೀನಿಯರ್ ಲೀಡರ್. ಬೇರೆ ಯಾರಾದರೂ ಸೀನಿಯರ್ ನನ್ನ ವಿರುದ್ಧ ಮಾತಾಡಿದರೆ, ಉತ್ತರ ಕೊಡುತ್ತಿದ್ದೆ. ಆದರೆ, ಜಮೀರ್ ಯಡಿಯೂರಪ್ಪ ಸಿಎಂ ಆದರೆ, ವಾಚ್ಮನ್ ಆಗ್ತೀನಿ ಅಂದಿದ್ದರು. ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ಮನ್ ಆಗಲಿ ಎಂದು ತಿರುಗೇಟುಕೊಟ್ಟರು.
ಹಿಂದೆ ಇದೇ ರೀತಿ ಗಲಾಟೆ ಆದಾಗ ನನ್ನ ಜೀವ ಉಳಿಸಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸುದರ್ಶನ್ ಅವರೇ ಹೊರತು, ಜಮೀರ್ ಅಲ್ಲ. ಇಂತಹ ವ್ಯಕ್ತಿಗಳು ಎಲ್ಲಿಯೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದರು.