ETV Bharat / state

ಕೋವಿಡ್​​ ಹೊಡೆತಕ್ಕೆ ನೆಲಕಚ್ಚಿತು ಕೇಟರಿಂಗ್ ಉದ್ಯಮ... ಜೀವನದ ಬಂಡಿ ಸಾಗಿಸೋದಾದರೂ ಹೇಗೆ?

ಮಹಾಮಾರಿ ಕೋವಿಡ್​​ ಅಟ್ಟಹಾಸ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೇಟರಿಂಗ್​​​ ಉದ್ಯಮವೂ ಸಂಕಷ್ಟದ ಸುಳಿಗೆ ಸಿಲುಕಿದೆ. ಕೊರೊನಾ ಹೊಡೆತಕ್ಕೆ ಬೆಂಗಳೂರು, ಬೆಳಗಾವಿ, ಕೊಪ್ಪಳ ಜಿಲ್ಲೆಯ ಕೇಟರಿಂಗ್ ಉದ್ಯಮ ನೆಲಕಚ್ಚಿದೆ. ಅದನ್ನೇ ನಂಬಿಕೊಂಡಿದ್ದ ನೂರಾರು ಕಾರ್ಮಿಕರೀಗ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ..

covid effects on Food catering industry
ಕೇಟರಿಗ್​ ಉದ್ಯಮದ ಮೇಲೆ ಕೋವಿಡ್ ಎಫೆಕ್ಟ್​​
author img

By

Published : Jun 12, 2021, 12:55 PM IST

ಬೆಂಗಳೂರು/ಬೆಳಗಾವಿ/ಕೊಪ್ಪಳ: ಏಪ್ರಿಲ್‌, ಮೇ, ಜೂನ್​‌ ತಿಂಗಳು ಬಂದ್ರೆ ಸಾಕು ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶ‌ ಹೀಗೆ ನಾನಾ ರೀತಿಯ ಸಮಾರಂಭಗಳು ನಡೆಯೋದು ಸಾಮಾನ್ಯ. ಈ ಸೀಜನ್​​ನಲ್ಲೇ ಕೇಟರಿಂಗ್​ನವರು ವಿಧ ವಿಧವಾದ, ರುಚಿಕರ ಅಡುಗೆ ಮಾಡಿ ಆದಾಯ ಗಳಿಸೋದು ಸಾಮಾನ್ಯ.

ಆದ್ರೆ ಎರಡು ಬಾರಿಯೂ ಕಾರ್ಯಕ್ರಮದ ಸೀಸನ್​ನಲ್ಲೇ ಕೋವಿಡ್​ ವಕ್ಕರಿಸಿ ಅಡುಗೆ ಮಾಡೋವ್ರ ಕೈ ಕಟ್ಟಿಹಾಕಿದೆ. ಇದನ್ನೇ ನಂಬಿ ಜೀವನ ನಡೆಸ್ತಿದ್ದೋವ್ರ ಪಾಡು ಹೇಳತೀರದಾಗಿದೆ.

ಕೇಟರಿಗ್​ ಉದ್ಯಮದ ಮೇಲೆ ಕೋವಿಡ್ ಎಫೆಕ್ಟ್​​

ಮೊದಲೆಲ್ಲಾ ಕಾರ್ಯಕ್ರಮಗಳೆಂದರೆ ನೂರರಿಂದ ಸಾವಿರಾರು ಮಂದಿ ಸೇರಿ ಸಂಭ್ರಮಿಸ್ತಿದ್ರು. ಅಡುಗೆ ವಿಚಾರವೇ ಎಲ್ಲರ ಮಾತಾಗುತ್ತಿತ್ತು. ಕೇಟರಿಂಗ್​ ನಂಬಿದವರಿಗಂತೂ ಲಾಭವೇ ಲಾಭ. ಆದ್ರೀಗ ಎಲ್ಲ ಸಂಭ್ರಮವನ್ನು ಕಿತ್ತುಕೊಂಡ ಕೊರೊನಾ ಕೇಟರಿಂಗ್​ ಉದ್ಯಮದ ಮೇಲೆ ತನ್ನ ವಕ್ರದೃಷ್ಟಿ ಬೀರಿದೆ. ಜೀವನ ನಡೆಸೋದೇ ಸವಾಲಾಗಿದೆ ಅಂತಾರೆ ಬೆಂಗಳೂರು ಕೇಟರಿಂಗ್​ ಉದ್ಯಮಿಗಳು.

ಕೊಪ್ಪಳ ಜಿಲ್ಲೆಯಲ್ಲೂ ಸುಮಾರು 20 ಮಂದಿ ಕೇಟರಿಂಗ್​ ಉದ್ಯಮಿಗಳಿದ್ದು, ಇದಕ್ಕೆ ಪೂರಕವಾಗಿ ಕೆಲಸ ಮಾಡುವ ನೂರಾರು ಮಂದಿ ಕಾರ್ಮಿಕರಿದ್ದಾರೆ. ಆದ್ರೆ ಕೋವಿಡ್​ ನಿಯಮಾನುಸಾರ ಕಾರ್ಯಕ್ರಮಗಳೆಲ್ಲವೂ ಮನೆ ಮಟ್ಟಿಗಷ್ಟೇ ಸೀಮಿತವಾಗಿದ್ದು, ಕೇಟರಿಂಗ್​​ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಕಾರ್ಮಿಕರ ಪಾಡಂತೂ ಹೇಳತೀರದಾಗಿದೆ.

ಬೆಳಗಾವಿ ಜಿಲ್ಲೆಯ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಆರ್ಡರ್​ಗಳು ಸಿಗದ ಕಾರಣ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಮಾಡಿದ ಸಾಲ ತೀರಿಸಲು ಉದ್ಯಮಿಗಳು ಹೆಣಗಾಡುತ್ತಿದ್ದರೆ, ಜೀವನದ ಬಂಡಿ ಸಾಗಿಸಲು ಕಾರ್ಮಿಕರು ಪರದಾಡ್ತಿದ್ದಾರೆ. ಕೋವಿಡ್​ ನಿಯಂತ್ರಣವೊಂದೇ ಎಲ್ಲ ಸಮಸ್ಯೆಗೂ ಮಾರ್ಗೋಪಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.