ಬೆಂಗಳೂರು: ಮಹಾಪ್ರವಾಹ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟವಾಗಿದೆ. ಸರ್ಕಾರಿ ಶಾಲೆಗಳಿಗೆ ಹಾನಿಯಾಗಿದ್ದು ಬರೋಬ್ಬರಿ 7,492 ಪ್ರಾಥಮಿಕ ಶಾಲೆಗಳು ದುರಸ್ಥಿಯಾಗಿವೆ. 285 ಪ್ರೌಢ ಶಾಲೆಗಳಿಗೆ ಹಾನಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ.
ಬೆಳಗಾವಿಯಲ್ಲಿ 57, ಚಾಮರಾಜನಗರ 35, ಮಂಗಳೂರು 95, ಶಿವಮೊಗ್ಗ 87, ಉಡುಪಿ 10, ಯಾದಗಿರಿಯಲ್ಲಿ 1 ಪ್ರೌಢಶಾಲೆಗಳಿಗೆ ತೊಂದರೆಯಾಗಿದ್ದು ಅಂದಾಜು 2,072.05 ಲಕ್ಷ ರೂ.ಗಳು ನಷ್ಟವಾಗಿದೆ.
![schools](https://etvbharatimages.akamaized.net/etvbharat/prod-images/4188875_mng.jpg)
ನೆರೆಹಾವಳಿಗೆ ಸಾವಿರಕ್ಕೂ ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿದೆ. ಬಾಗಲಕೋಟೆಯಲ್ಲಿ 128, ಬೆಳಗಾವಿ 868, ಬಳ್ಳಾರಿ 198 ಬೀದರ್ 168, ಚಾಮರಾಜನಗರ 165, ಚಾಮರಾಜನಗರ 165, ಚಿಕ್ಕೋಡಿ 1305, ಚಿಕ್ಕಮಂಗಳೂರು 445, ಧಾರವಾಡ 65, ಗದಗ 1025, ಹಾವೇರಿ 464, ಕೊಡಗು 172, ಮಂಡ್ಯ 32, ಮಂಗಳೂರು 222, ಮೈಸೂರು 450, ರಾಯಚೂರು 13, ಶಿವಮೊಗ್ಗ, ಶಿವಮೊಗ್ಗ 1074, ಶಿರಸಿ 386, ಉಡುಪಿ 10, ಉತ್ತರಕನ್ನಡ 237, ವಿಜಯಪುರ 50, ಯಾದಗಿರಿ 15 ಒಟ್ಟು 7,492 ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿದ್ದು, ಅಂದಾಜು ಮೊತ್ತ ಒಟ್ಟು 32,427.20 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ.