ಬೆಂಗಳೂರು: ಶ್ರೀರಾಮ ಮಂದಿರ ಅಭಿಯಾನ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ವಸೀಂ ಉಲ್ಲಾ (32), ಮೊಹಮ್ಮದ್ ಆದ್ನಾನ್ (21),ಅಹಮ್ಮದ್ ಬಾಷಾ (65),ಅಬ್ದುಲ್ ಗೌಸ್ (19), ಮಹಮ್ಮದ್ ಶಬ್ಬೀರ್(20) ಬಂಧಿತ ಆರೋಪಿಗಳು. ನಿನ್ನೆ ಬಿಸ್ಮಿಲಾ ನಗರದ ಬಳಿ ಶ್ರೀರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮದ ಕಿಡಿಗೇಡಿಗಳು ರಾಮರಥ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಸಂಘಟನೆಯ ಕಾರ್ಯಕರ್ತರಾದ ಶೇಷಾಚಲ, ಯಶವಂತ್, ಸುರೇಶ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದರು.
ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಗಳನ್ನು ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ಬಂಧಿಸಿದೆ.
ಇದನ್ನೂ ಓದಿ:ರಾಮ ಮಂದಿರ ನಿಧಿ ಸಂಗ್ರಹ ವಾಹನದ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಆರೋಪ