ETV Bharat / state

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ FIR: ಬರೋಬ್ಬರಿ 2.84 ಕೋಟಿ ರೂ. ವಂಚನೆ ಆರೋಪ - Katta Subramanya Naidu breaking news

2004 ರಲ್ಲಿ ಕಟ್ಟಾ ಸುಬ್ರಮಣ್ಯ ಎಂಎಲ್‌ಎ ಅಗಿದ್ದಾಗ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

FIR against Former Minister Katta Subramanya Naidu
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ FIR
author img

By

Published : Oct 12, 2021, 4:37 PM IST

ಬೆಂಗಳೂರು : ಸೈಟ್ ಮತ್ತು ಫ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್​ಐಆರ್​ ದಾಖಲಾಗಿದೆ. 1-04-2008 ರಲ್ಲಿ 2ಕೋಟಿ 84 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.

ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ, ಮಾಜಿ ಶಾಸಕನ ವಿರುದ್ಧ 2 ಕೋಟಿ 84 ಲಕ್ಷ ರೂ ವಂಚನೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಇಂಡ್ ಸಿಂಗ್ ಡೆವಲಪರ್ಸ್ ಪ್ರೈ.ಲಿ ನ ನಿರ್ದೇಶಕ ಕೃಷ್ಣ ಎಂಬುವವರು ಈ ದೂರು ನೀಡಿದ್ದಾರೆ.

2004 ರಲ್ಲಿ ಕಟ್ಟಾ ಸುಬ್ರಮಣ್ಯ ಎಂಎಲ್‌ಎ ಅಗಿದ್ದಾಗ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಂತ ಹಂತವಾಗಿ ಒಟ್ಟು 2 ಕೋಟಿ 84 ಲಕ್ಷ ರೂಪಾಯಿಗಳನ್ನ ಇಂಡ್ ಸಿಂಡ್ ಕಂಪನಿಯಿಂದ ನಗದು ಮತ್ತು ಚೆಕ್ ಮೂಲಕ ಪಡೆದು ವಂಚನೆ ಮಾಡಲಾಗಿದೆ ಎನ್ನಲಾಗಿದೆ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಹಣಕ್ಕೆ ದುಪ್ಪಟ್ಟು ಹಣ ನೀಡೋದಾಗಿ ನಂಬಿಸಿ ವಂಚಿಸಿದ್ದಾರಂತೆ. ಇನ್ನು 4ನೇ ಎಸಿಎಂಎಂ ನ್ಯಾಯಲಯದ ಆದೇಶದಂತೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 2 ಲಕ್ಷ ರೂ ಹಿಂದಿರುಗಿಸಿದ್ದರು. ಈ ವಿಚಾರ ವೆಂಕಯ್ಯ ನಾಯ್ಡು, ಬಿಎಸ್​ವೈ ಮತ್ತು ವಿಜಯೇಂದ್ರ ವರೆಗೂ ಹೋಗಿ ಸಂಧಾನದ ಮಾತುಕತೆ ಆಗಿತ್ತು. ಆದರೆ , ಟಾಪ್ ಲೆವಲ್‌ನ ಸಂಧಾನದಿಂದ ಯಾವುದೇ ಪ್ರಯೋಜನವಾಗಿಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.