ಬೆಂಗಳೂರು : ನಗರದಲ್ಲಿ ಮಾಸ್ಕ್ ಹಾಕುವ ನಿಯಮ ಇನ್ನಷ್ಟು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಹಾಕದವರ ವಿರುದ್ಧ ದಂಡವನನ್ನ ₹200ರಿಂದ ₹1000ಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
230 ಜನ ಮಾರ್ಷಲ್ಸ್ ಮಾಸ್ಕ್ ಹಾದವರ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ನಗರದಲ್ಲಿ ಸಾರ್ವಜನಿಕರ ಗುಂಪು, ಜನಸಂದಣಿ ಹೆಚ್ಚಿದೆ. ಹೀಗಾಗಿ, ಸಾಮಾಜಿಕ ಅಂತರ ಕಾಯದಿರುವುದು ಹೆಚ್ಚಾಗಿರುವುದರಿಂದ ನಿಯಮ ಇನ್ನಷ್ಟು ಕಠಿಣ ಮಾಡಲಾಗುತ್ತಿದೆ. ಕಸ ವಿಂಗಡಣೆ ಮಾಡದವರ ವಿರುದ್ಧ ದಂಡ ಹಾಕುವ ವಿಚಾರ ಸದನಗಳಲ್ಲಿ ಪಾಸ್ ಆಗಿದ್ದು, ಮುಂದೆ ಜಾರಿಯಾಗಲಿದೆ ಎಂದರು.
ಹೋಂ ಐಸೋಲೇಷನ್ ಹೆಲ್ತ್ ಕಿಟ್ ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಸಚಿವರು, ಸಿಎಸ್ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಹೋಂ ಐಸೋಲೇಷನ್‌ನಲ್ಲಿ ಶೇ. 52ರಷ್ಟು ರೋಗಿಗಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಹೋಂ ಐಸೋಲೇಷನ್ ಪೇಷಂಟ್ಗಳಿಗೆ ಕಿಟ್, ಬೇಸಿಕ್ ಮಾತ್ರೆಗಳ ಪೂರೈಕೆ ವಿಚಾರದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನಲವತ್ತು ಸಾವಿರ ಕೊರೊನಾ ಪರೀಕ್ಷೆ ನಡೆಸಲು ಒಂದು ವಾರದ ಟಾರ್ಗೆಟ್ ನೀಡಲಾಗಿದೆ. 196 ಸಿಬ್ಬಂದಿಯನ್ನ ಗುತ್ತಿಗೆಗೆ ಪಡೆಯಲಾಗಿದೆ ಎಂದರು.
208 ಕೆರೆಗಳ ನಿರ್ವಹಣೆ ಜವಾಬ್ದಾರಿ ಬಿಬಿಎಂಪಿ ಹೆಗಲಿಗೆ ಬಿದ್ದಿದೆ. ಕೆರೆ ಒತ್ತುವರಿ ತೆರವು ವಿಚಾರದ ಬಗ್ಗೆಯೂ ಗಂಭೀರ ಚಿಂತನೆಯನ್ನ ಬಿಬಿಎಂಪಿ ನಡೆಸಿದೆ. ಕೆರೆಗಳ ಹೂಳೆತ್ತುವ ಕೆಲಸ ಜೋರಾಗಿಯೇ ನಡೆಯುತ್ತಿದೆ ಎಂದರು.