ETV Bharat / state

ಮಾ. 31ರವರೆಗೆ ಬಾರ್​​​ ಬಂದ್​ಗೆ ಆದೇಶ‌: ಮದ್ಯದಂಗಡಿಗಳಿಗೆ ಅಧಿಕಾರಿಗಳಿಂದ ಬೀಗ ಮುದ್ರೆ

ರಾಜ್ಯ ಸರ್ಕಾರ ಇಂದಿನಿಂದ ಮಾರ್ಚ್ 31ರವರೆಗೆ ಬಾರ್ ಬಂದ್ ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ನಗರದ ಬಾರ್​​ಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮದ್ಯದಂಗಡಿಗಳಿಗೆ ಬೀಗ ಮುದ್ರೆ ಹಾಕಿದರು.

Bar closed Up To 31st March
ಮಾ.31ರವರೆಗೆ ಬಾರ್ ಬಂದ್
author img

By

Published : Mar 21, 2020, 7:53 PM IST

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಇಂದಿನಿಂದ ಮಾರ್ಚ್ 31ರವರೆಗೆ ಬಾರ್ ಬಂದ್ ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ನಗರದ ಬಾರ್​​ಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಠಲ್ ಮಲ್ಯ ರಸ್ತೆಯ ಬಿಯರ್ ಕ್ಲಬ್, ಸೋಡಾ ಬಾಟಲ್ ಕ್ಲಬ್, ಮ್ಯಾರಿಯೇಟ್ ಹೋಟೆಲ್, ಕೋರಮಂಗಲ, ಅಶೋಕನಗರ, ವೈಟ್ ಫೀಲ್ಡ್, ವರ್ತೂರು‌ ಸೇರಿದಂತೆ ನಗರದಲ್ಲಿರುವ ಬಹುತೇಕ ಬಾರ್​ಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲನೆ ನಡೆಸಿದರು ಈ ವೇಳೆ ಎಲ್ಲಿಯೂ ಕೂಡ ಬಾರ್ ಮಾಲೀಕರು ಸರ್ಕಾರದ ಆದೇಶ ಉಲ್ಲಂಘಿಸಿರುವುದು ಕಂಡು ಬಂದಿಲ್ಲ.

Bar closed Up To 31st March
ಮಾ. 31ರವರೆಗೆ ಬಾರ್ ಬಂದ್

ಬಂದ್ ಮಾಡಿರುವ ಮಳಿಗೆಗಳಿಗೆ ಅಧಿಕೃತವಾಗಿ ಮದ್ಯ ಮಾರಾಟ ಮಾಡದಂತೆ ಬೀಗ ಮುದ್ರೆ ಹಾಕಿದರು. ಆದೇಶ ಧಿಕ್ಕರಿಸಿ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳುವಂತೆ ಅಬಕಾರಿ‌ ಇಲಾಖೆಗೆ ಸರ್ಕಾರ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.