ಬೆಂಗಳೂರು: ರಾಜ್ಯ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಯಲ್ಲಿ ನಮ್ಮ ಪಕ್ಷದಿಂದ ಸೋತಿರುವಂತಹ ಎಲ್ಲ ಸದಸ್ಯರನ್ನು ಆಹ್ವಾನ ಮಾಡಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಪಕ್ಷದ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋತವರ ಮನಸ್ಸಿನಲ್ಲಿ ಸೋತೆವು ಎಂಬ ಭಾವನೆ ಇರಬಾರದು. ಈ ಹಿಂದೆ ಗೆದ್ದ ಅಭ್ಯರ್ಥಿಗಳನ್ನು ನಾನು ಸನ್ಮಾನ ಮಾಡಿದ್ದೆ. ಸೋತವರನ್ನು ಕಡೆಗಣಿಸಿದರು ಎಂಬ ಭಾವನೆ ಬರಬಾದರು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಏರ್ಪಡಿಸಿರುವುದಾಗಿ ತಿಳಿಸಿದರು.
ಈ ಹಿಂದಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವನಾಥ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ್ದಾರೆ. ವಿಶ್ವನಾಥ್ ಯಾವುದೇ ಕಾರಣದಿಂದ ಪಕ್ಷ ಬಿಡುವುದಿಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನ್ನನ್ನು ಒತ್ತಾಯಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅದರಂತೆ ಆಗಲಿ ಎಂದಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ದೇಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಪಕ್ಷದ ಅಧ್ಯಕ್ಷ ಸ್ಥಾನವನ್ನು ಬೇರೆ ಯಾರಿಗೂ ಕೊಡಬೇಡಿ. ಇದರಿಂದ ಹಾನಿ ಆಗಲಿದೆ. ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ. ನೀವೇ ಮುಂದುವರೆಯಬೇಕು ಎಂದು ತಿಳಿಸಿರುವುದಾಗಿ ಹೇಳಿದರು. ಇನ್ನು ಮೊನ್ನೆ ಹೋದಾಗ ತಾವು ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮೈತ್ರಿ ಸರ್ಕಾರಕ್ಕೆ ನಮ್ಮಿಂದ, ಅದರಲ್ಲೂ ನನ್ನಿಂದ ಯಾವುದೇ ರೀತಿಯ ಅಪಾಯ ಆಗೋದಿಲ್ಲ ಎಂಬ ಭರವಸೆ ಕೊಡ್ತೇನಿ. ನಾನು ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ ಈ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ ಎಂದರು. ನಾಳೆ ನಡೆಯುವ ಸಭೆಯಲ್ಲಿ ಕುಮಾರಸ್ವಾಮಿ ಇರುವುದಿಲ್ಲ, ಅವರು ಗ್ರಾಮ ವಾಸ್ತವ್ಯದಲ್ಲಿರುತ್ತಾರೆ. ನಾಳಿನ ಸಭೆಯಲ್ಲಿ ಪಕ್ಷದ ಬಲವರ್ದನೆ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮುಂಬರುವ ಚುನಾವಣೆ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದರು.