ETV Bharat / state

ಡ್ರಗ್ಸ್ ತನಿಖೆಯಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ: ಸಿದ್ದರಾಮಯ್ಯ ಕಿಡಿ - ಬಿಬಿಎಂಪಿ ಚುನಾವಣೆ

ಆಡಳಿತಾರೂಢ ಬಿಜೆಪಿ ಪಕ್ಷದ ವೈಫಲ್ಯತೆ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬರೀ ಭಾಷಣ ಮಾಡುವುದೊಂದೇ ಗೊತ್ತು, ಅಭಿವೃದ್ಧಿ ಕೆಲಸ ಮಾಡಿ ಇವರಿಗೆ ಗೊತ್ತಿಲ್ಲ ಎಂದು ಛೇಡಿಸಿದ್ದಾರೆ.

Ex CM Siddaramaiah reaction about drug mafia
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Sep 17, 2020, 5:02 PM IST

Updated : Sep 17, 2020, 11:36 PM IST

ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾನು ನಾನು ಪೊಲೀಸರ ಬಳಿ ಮಾತನಾಡಿದಾಗ ಕೆಲವರು ಸಿಗ್ತಾನೇ ಇಲ್ಲ ಅಂತಿದ್ದಾರೆ. ಎ1 ಆರೋಪಿಯನ್ನೇ ಬಂಧಿಸಿಲ್ಲ. ಸರ್ಕಾರ ಎಲ್ಲೋ ಪ್ರಭಾವ ಬೀರುತ್ತಿರಬಹುದು. ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ. ಸರ್ಕಾರದ ಅಣತಿಯಂತೆ ನಡೆದುಕೊಳ್ತಿದ್ದಾರೆ. ನಾವಿದ್ದಾಗ ಸಿಐಡಿ, ಸಿಸಿಬಿ, ಎಸಿಬಿ ತನಿಖೆಗೆ ಕೊಡಬೇಡಿ ಅಂತಿದ್ರು. ಸಿಬಿಐಗೆ ಕೊಡಿ ಅಂತ ಹೇಳುತ್ತಿದ್ರು. ಈಗ ಸಿಬಿಐ ಬಗ್ಗೆ ಅವರಿಗೆ ಬಾಯಿ‌ಬರ್ತಿಲ್ಲ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ನಡೆಯಬೇಕು. ಇದೇ ನಮ್ಮ ಒತ್ತಾಯ ಎಂದರು.

ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ: ಯಡಿಯೂರಪ್ಪ ಪುತ್ರ ವಿಜಯೇಂದ್ರ ಡಿಫ್ಯಾಕ್ಟೋ ಚೀಪ್ ಮಿನಿಸ್ಟರ್ ಆಗಿದ್ದಾರೆ ಎಂದು ಇದೇ ವೇಳೆ ಕಿಡಿ ಕಾರಿದರು. ಯಡಿಯೂರಪ್ಪ ಚೀಫ್ ಮಿನಿಸ್ಟರ್. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸೋಕೆ ವಿಜಯೇಂದ್ರ ಯಾರು? ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇಲ್ವೇ? ಇದರ ಬಗ್ಗೆ ಸದನದಲ್ಲಿ ಮಾತನಾಡ್ತೇನೆ. ಸದನದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ನಾವು ಎಲ್ಲದಕ್ಕೂ ಸಿದ್ಧತೆ ನಡೆಸಿದ್ದೇವೆ. ಮೆಡಿಕಲ್ ಕಿಟ್, ಕಾಯ್ದೆಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಕಾಣ್ತಾ ಇಲ್ಲ: ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ಯಾ? ಶಿವಾನಂದ ಸರ್ಕಲ್ ಫ್ಲೈ ಓವರ್ ಇನ್ನೂ ಪೂರ್ಣಗೊಂಡಿಲ್ಲ. ಎರಡು ವರ್ಷದಿಂದ ಹಾಗೇ ಇದೆ. 55 ಸಾವಿರ ಕೋಟಿ ಸಾಲ ಮಾಡ್ತೇವೆ ಅಂತ ಬಜೆಟ್​​ನಲ್ಲಿ ಹೇಳಿದ್ರು. ಅದರ ಮೇಲೆ ಹೆಚ್ಚು 33 ಸಾವಿರ ಕೋಟಿ ರೂ. ಸಾಲ ಪಡೆಯುತ್ತಿದ್ದಾರೆ. ಇದರ ಭಾರ ಎಲ್ಲರ ಮೇಲೂ ಹಾಕಿ ಹೋಗ್ತಾರೆ ಎಂದರು.

ಬಿಬಿಎಂಪಿ ಚುನಾವಣೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕೋರ್ಟ್ ಹೇಳಿದಂತೆ ನಡೆಸಲೇಬೇಕಾಗುತ್ತದೆ. ಚುನಾವಣೆ ಮುಂದಕ್ಕೆ ಹಾಕೋಕೆ ಆಗುತ್ತಾ? ಎಂದು ಪ್ರಶ್ನಿಸಿದರು. ನಾವೇ ಅಧಿಕಾರಕ್ಕೆ ಬಂದಿದ್ದರೆ ಬಿಬಿಎಂಪಿಯನ್ನು 5 ವಲಯಗಳನ್ನು ಮಾಡುತ್ತಿದ್ದೆವು. ಬೆಂಗಳೂರಿನಲ್ಲಿ 1.10 ಕೋಟಿ ಜನ ಇದ್ದಾರೆ. ತೆರಿಗೆ ಸರಿಯಾಗಿ ವಸೂಲಿ ಮಾಡ್ತಿಲ್ಲ. ಅಭಿವೃದ್ಧಿ ಕೆಲಸ ಮಾಡೋಕೆ‌ ಹೋಗ್ತಿಲ್ಲ. ಮಳೆ ಬಂದ್ರೆ ರಾಜಕಾಲುವೆ ತುಂಬಿ ಹೋಗುತ್ತವೆ. ಬಿಜೆಪಿಯವರ ಕೈಲಿ ಬರೀ ಭಾಷಣ ಅಷ್ಟೇ ಎಂದು ಕಿಡಿ ಕಾರಿದರು.

ನಿರುದ್ಯೋಗ ದಿನಕ್ಕೆ ನನ್ನ ಬೆಂಬಲ: ಅನ್ ಎಂಪ್ಲಾಯ್​​ಮೆಂಟ್​ ಡೇ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿಯವರ ಹುಟ್ಟಿದ ಹಬ್ಬ. ಅವರಿಗೆ ಆಯುಷ್ಯ ಆರೋಗ್ಯ ದೇವರು ಕೊಡಲಿ. ಆದರೆ, ಅವರು ಕೋಟ್ಯಂತರ ರೂ. ಜಾಹೀರಾತು ನೀಡಿದ್ದಾರೆ. ಮಾಡದಿರುವ ಸಾಧನೆ ಬಗ್ಗೆ ಜಾಹೀರಾತು ಕೊಟ್ಟಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ವಾಗ್ದಾಳಿ ‌ನಡೆಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕೃಷಿ ಕ್ಷೇತ್ರ ಬಿಟ್ಟರೆ ಎಲ್ಲೆಡೆ ಅಭಿವೃದ್ಧಿ ಶೂನ್ಯವಾಗಿದೆ. ಉತ್ಪಾದಕ ವಲಯವೂ ಕುಸಿದಿದೆ‌. ಹೊಸದಾಗಿ ಉದ್ಯೋಗ ಕೊಟ್ಟೇ ಇಲ್ಲ. ಇದು ಹೋಗಲಿ ಇರೋ‌ ಉದ್ಯೋಗಗಳೂ ಹೋಗಿವೆ. ಮೋದಿ ಸ್ವರ್ಗ ಮಾಡ್ತಾರೆ ಅಂತ ಹೋಗಿದ್ದರು. ಆದರೆ, ಆಗಲಿಲ್ಲ. ಅದಕ್ಕೆ ನಿರುದ್ಯೋಗಿಗಳು ಮೋದಿ ಜನ್ಮದಿನದಂದು ವಿರೋಧ ಮಾಡಿದ್ದಾರೆ. ಅವರ ಸುಳ್ಳು ಸಾಧನೆಗಳ ಬಗ್ಗೆ ಅಭಿಯಾನ ಮಾಡ್ತಿದ್ದಾರೆ ಎಂದರು.

ಹೈಕಮಾಂಡ್ ನಮ್ಮನ್ನೇನು ಕೇಳಿ ಮಾಡಲ್ಲ: ಎಐಸಿಸಿಯಲ್ಲಿ ಅವಕಾಶ ಸಿಕ್ಕಿಲ್ಲವೆಂದು ರಾಮಲಿಂಗಾರೆಡ್ಡಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಮ್ಮನ್ನೇನು ಕೇಳಿ ಮಾಡಲ್ಲ. ಹೈಕಮಾಂಡ್ ಅವರೇ ತೀರ್ಮಾನ ತೆಗೆದುಕೊಳ್ತಾರೆ. ನಾವ್ಯಾಕೆ ಇಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಶ್ನಿಸಿದರು.

Last Updated : Sep 17, 2020, 11:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.