ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏಪ್ರಿಲ್ 26 ರಂದು ಲಾಕ್ ಡೌನ್ ವಿಧಿಸಿದೆ. ಇದರಿಂದ ಕರುನಾಡು 36 ದಿನಗಳಿಂದ ಸಂಪೂರ್ಣ ಸ್ತಬ್ಧಗೊಂಡಿದೆ. ಇದರಿಂದ ಆಟೋ-ಟ್ಯಾಕ್ಸಿ ಚಾಲಕರ ಜೀವನ ನಿಜಕ್ಕೂ ಶೋಚನೀಯ ಸ್ಥಿತಿ ತಲುಪಿದೆ. ಈ ಸಂದರ್ಭದಲ್ಲಿ ಸರ್ಕಾರ, ಎನ್ಜಿಒ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಇದೀಗ ಆ ಗುಂಪಿಗೆ ಇಎಲ್ವಿ ಪ್ರಾಜೆಕ್ಟ್ ಡೆವೆಲಪರ್ ಕೂಡ ಸೇರಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏಪ್ರಿಲ್ 26 ರಂದು ಲಾಕ್ ಡೌನ್ ವಿಧಿಸಿದೆ. ಇದರಿಂದ ಕರುನಾಡು 36 ದಿನಗಳಿಂದ ಸಂಪೂರ್ಣ ಸ್ತಬ್ಧಗೊಂಡಿದೆ. ರಾಜ್ಯ ಸರ್ಕಾರ ಈ ಸಂದರ್ಭದ ರಾಜ್ಯದ ಜನತೆಗೆ 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಆದರೆ ಈ ಮೊತ್ತದಲ್ಲಿ ಆಟೋ ಟ್ಯಾಕ್ಸಿ ಚಾಲಕರಿಗೆ ಸಿಕ್ಕಿದ್ದು ಮಾತ್ರ ಕೇವಲ 3 ಸಾವಿರ ರೂಗಳು. ಅದರಲ್ಲಿ ಮನೆ ಬಾಡಿಗೆ , ವಿದ್ಯುತ್ ಬಿಲ್ , ಕೇಬಲ್ ಬಿಲ್ಗಳ ಪಾವತಿ ಮಾಡುವುದಕ್ಕೂ ಕಷ್ಟಸಾಧ್ಯವಾಗಿದೆ.
ಇದೀಗ ಸಂಕಷ್ಟದಲ್ಲಿರುವ್ಕೆ ಆಟೋ ಚಾಲಕರ ಇಎಲ್ವಿ ಪ್ರಾಜೆಕ್ಟ್ ಸಂಸ್ಥೆಯ ಚೇರ್ಮನ್ ಭಾಸ್ಕರ್ 1500 ರೂಪಾಯಿಗಳ ಮೊತ್ತದ 18 ಬಗೆಯ ಅಗತ್ಯ ವಸ್ತುಗಳ ದಿನಸಿ ಕಿಟ್ಗಳನ್ನು 2000 ಮಂದಿಗೆ ವಿತರಿಸುವ ಮೂಲಕ ಚಾಲಕರ ಹಸಿವು ನೀಗಿಸಲು ಮುಂದಾಗಿದ್ದಾರೆ. ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಡೆವಲಪರ್ ಸಂಸ್ಥೆಗಳನ್ನ ಜನರ ಸಂಕಷ್ಟಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
" ಲಾಕ್ ಡೌನ್ನಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದವರು ಆಟೋ, ಟ್ಯಾಕ್ಸಿ ಚಾಲಕರು. ಪ್ರಯಾಣಿಕರನ್ನು ನಂಬಿ ಬದುಕು ಸಾಗಿಸುತ್ತಿದ್ದ ಅವರಿಗೆ ಲಾಕ್ ಡೌನ್ ಸಾಕಷ್ಟು ಪೆಟ್ಟು ನೀಡಿದೆ. ಹಾಗಾಗಿ ಸುತ್ತಮುತ್ತಲಿನ ವೈಟ್ ಫೀಲ್ಡ್ , ಹೂಡಿ , ದೊಡ್ಡನಕ್ಕುಂದಿ , ವರ್ತೂರು ಭಾಗದ ಆಟೋ ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ನೀಡಲು ನಿರ್ಧರಿಸಲಾಗಿದೆ. ಸಮಾಜದಲ್ಲಿನ ಉನ್ನತ ವ್ಯಕ್ತಿಗಳು ಲಾಕ್ ಡೌನ್ ಸಮಯದಲ್ಲಿ ಮುಂದೆ ಬಂದು ಹಸಿದವರಿಗೆ ಅನ್ನ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ನಾವು ನೀಡುವ ದಿನಸಿ ಕಿಟ್ ಅವರ ಜೀವನೋಪಯೋಗಕ್ಕೆ ಸಹಾಯವಾಗಲಿದೆ ಪ್ರತಿಯೊಬ್ಬರು ಸಹಕರಿಸಬೇಕು" ಎಂದು ಭಾಸ್ಕರ್ ಮನವಿ ಮಾಡಿದರು.
ದೊಡ್ಡ ದೊಡ್ಡ ಬಿಲ್ಡರ್ಸ್ಗಳು ಮುಂದೆ ಬಂದು ಕೆಲವು ದಿನಗಳವರೆಗೆ ಸಹಾಯ ಮಾಡಿದರೆ ಉತ್ತಮ. ನಾವು ಖರ್ಚು ಮಾಡುವುದು ಕೇವಲ ಒಂದು ಪರ್ಸೆಂಟ್ ಅಷ್ಟೇ ಈ ಸಮಯದಲ್ಲಿ ನಾವು ಚಿಕ್ಕ ಸಹಾಯ ಮಾಡಿದರೆ ಮುಂದಿನ ದಿನಗಳಲ್ಲಿ ನಮ್ಮನ್ನ ಸದಾ ನೆನಪಿನಲ್ಲಿ ಉಳಿಸಿಕೊಳ್ಳತ್ತಾರೆ. ಕೇವಲ 10 ದಿನಗಳ ಮಟ್ಟಿಗೆ ಸಹಾಯ ಮಾಡಿ ಎಂದು ಕೇಳಿಕೊಂಡರು.
ಇದನ್ನು ಓದಿ: ಗ್ರಾಪಂ ಸದಸ್ಯ ದಂಪತಿಯಿಂದ ಬಡವರಿಗೆ 500 ಮೂಟೆ ಅಕ್ಕಿ ವಿತರಣೆ