ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೋಡಿಯೇರಿಯ ಆಸ್ತಿ, ಕಂಪನಿಗಳ ವಿವರ ಕೋರಿ ಕೇರಳ ಡಿಜಿಪಿ ಕಚೇರಿಗೆ ಇಡಿ ಪತ್ರ ಬರೆದಿದೆ.
ಪತ್ರದಲ್ಲಿ ಡ್ರಗ್ಸ್ ಕೇಸ್ನ ಆರೋಪಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಅರೋಪವಿರುವ ಹಿನ್ನೆಲೆ ತನಿಖೆ ನಡೆಸಬೇಕು. ಬಿನೀಶ್ ಕೊಡಿಯೇರಿ ಹಾಗೂ ಈತನ ಜೊತೆ ಕೇರಳದಲ್ಲಿದ್ದ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿ, ಕಂಪನಿಗಳ ಮಾಹಿತಿ ಪಡೆದು ಇವುಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಹಂಚಿಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಇಡಿ ತನಿಖೆ ಕೈಗೆತ್ತಿಕೊಂಡಿದೆ.
ಡ್ರಗ್ ಪೆಡ್ಲರ್ ಜೊತೆ ಸಂಪರ್ಕ : ಬಿನೇಶ್ ಕೊಡಿಯೇರಿಗೆ ನ್ಯಾಯಾಂಗ ಬಂಧನ
ಪ್ರಕರಣ ಹಿನ್ನೆಲೆ
ಡ್ರಗ್ಸ್ ಪೆಡ್ಲರ್ ಅನೂಪ್ ಹಾಗೂ ಇನ್ನೂ ಕೆಲ ವ್ಯಕ್ತಿಗಳಿಗೆ ಅಕ್ರಮವಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿರುವ ಆರೋಪ ಬಿನೀಶ್ ಕೊಡಿಯೇರಿ ಮೇಲಿದೆ. ಹೀಗಾಗಿ ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದು ನಂತರ ಬಂಧಿಸಿದ್ದರು. ಕೊಡಿಯೇರಿ ಬೆಂಗಳೂರು ಮತ್ತು ಕೇರಳದಲ್ಲಿ ಹೋಟೆಲ್ ನಡೆಸಿರುವ ವಿಚಾರ ಹಾಗೂ ಅನೂಪ್ ಜೊತೆ ಡ್ರಗ್ಸ್ ಡೀಲಿಂಗ್ನಲ್ಲಿ ಕೈ ಜೋಡಿಸಿ ಅಕ್ರಮ ಆಸ್ತಿ ಮಾಡಿರುವ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ.