ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಕಿಶೋರ್ ಶೆಟ್ಟಿ ಹಾಗೂ ಪ್ರತೀಕ್ ಶೆಟ್ಟಿಯನ್ನು ಇಂದು ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ನಟಿ ರಾಗಿಣಿಯ ಆಪ್ತನಾಗಿ ಗುರುತಿಸಿಕೊಂಡಿರುವ ಪ್ರತೀಕ್ ಶೆಟ್ಟಿಯನ್ನ ಸಿಸಿಬಿ ಪೊಲೀಸರು ಮೊದಲು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಡ್ರಗ್ಸ್ ಜಾಲದಲ್ಲಿ ಮಂಗಳೂರಿನ ಹೆಸರಾಂತ ಡ್ಯಾನ್ಸರ್ ಆಗಿರುವ ಕಿಶೋರ್ ಕೂಡ ಇರುವುದಾಗಿ ಮಾಹಿತಿ ನೀಡಿದ್ದ ಹಿನ್ನಲೆ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಿಶೋರ್ ಶೆಟ್ಟಿ ಹಿಂದಿಯ "ಎಬಿಸಿಡಿ" ಚಿತ್ರದಲ್ಲಿ ಡ್ಯಾನ್ಸರ್ ಆಗಿ ನಟಿಸಿದ್ದು, ಡ್ಯಾನ್ಸ್ ವೇಳೆ ಎನರ್ಜಿಗಾಗಿ ಡ್ರಗ್ಸ್ ಬಳಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಕಿಶೋರ್ ಶೆಟ್ಟಿಗೆ ಪ್ರತೀಕ್ ಶೆಟ್ಟಿ ಡ್ರಗ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬೆಂಗಳೂರು ಸಿಸಿಬಿ ಪೊಲೀಸರು, ಮಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿ ಸದ್ಯ ಅವರಿಬ್ಬರನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಂಧಿಸಿರುವ ಕಿಶೋರ್ನನ್ನು ಬೆಂಗಳೂರು ಸಿಸಿಬಿ ಕಚೇರಿಗೆ ಕರೆತರುವ ಸಾಧ್ಯತೆ ಇದೆ.
ಪ್ರತೀಕ್ ಶೆಟ್ಟಿ ಮಂಗಳೂರಿನಲ್ಲಿ ದೊಡ್ಡ ಗ್ಯಾಂಗನ್ನೇ ಹೊಂದಿದ್ದು, ನಿರೂಪಕರು, ಸೀರಿಯಲ್ ನಟಿಯರು, ಡ್ಯಾನ್ಸರ್ಗಳು, ಮಾಡೆಲ್ಗಳು ಆತನ ಗ್ಯಾಂಗ್ನಲ್ಲಿ ಇದ್ದು, ಸದ್ಯ ಸಿಸಿಬಿ ಪೊಲೀಸರು ತನಖೆ ನಡೆಸಿ ಹಲವಾರು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.