ETV Bharat / state

ಅಗತ್ಯ ವಸ್ತುಗಳು ಸಿಗ್ತವೆ, ಜನ ಗಾಬರಿ ಪಡೋ ಅಗತ್ಯ ಇಲ್ಲ: ನೀನಾಸಂ ಸತೀಶ್​​ - ರಾಜರಾಜೇಶ್ವರಿ ನಗರ ಸಂಪೂರ್ಣ ಸ್ತಬ್ದ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಜನತೆ ಮನೆಯಿಂದ ಹೊರ ಬರದೆ ಕರ್ಫ್ಯೂಗೆ ಸಹಕರಿಸಿದ್ದಾರೆ. ಈ ಏರಿಯಾ ಸಂಪೂರ್ಣ ಸ್ತಬ್ಧವಾಗಿದ್ದು, ಖಾಲಿ ರೋಡ್​ನಲ್ಲಿ ಜಾಲಿಯಾಗಿ ಸೈಕಲ್ ರೈಡ್ ಮೂಲಕ ಬಂದು ನಟ ನೀನಾಸಂ ಸತೀಶ್ ತರಕಾರಿ ಖರೀದಿ ಮಾಡಿದ್ದಾರೆ.

ನೀನಾಸಂ ಸತೀಶ್
ನೀನಾಸಂ ಸತೀಶ್
author img

By

Published : Mar 25, 2020, 9:15 PM IST

ಬೆಂಗಳೂರು: ಅಗತ್ಯ ವಸ್ತುಗಳು ಸಿಗುತ್ತವೆ ಎಂದು ಸರ್ಕಾರ ಹೇಳಿದ್ರೂ ಜನರು ಮಾತ್ರ ಗಾಬರಿ ಆಗೋದನ್ನ ಮಾತ್ರ ಬಿಟ್ಟಿಲ್ಲ. ಸುಖಾ ಸುಮ್ಮನೆ ಆತಂಕಕ್ಕೆ ಒಳಗಾಗಿ ರಸ್ತೆಯಿಂದ ಹೊರ ಬಂದು ಪೊಲೀಸರ ಲಾಠಿ ಏಟಿನ ರುಚಿ ನೋಡುತ್ತಿದ್ದಾರೆ. ಆದರೆ ಆರ್​​.ಆರ್​ ನಗರ ಇದಕ್ಕೆ ಭಿನ್ನವಾಗಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದು ನಟ ನೀನಾಸಂ ಸತೀಶ್ ಹೇಳಿದರು.

ಸರ್ಕಾರದ ಮನವಿಗೆ ಸ್ಪಂದಿಸಿರುವ ರಾಜರಾಜೇಶ್ವರಿ ನಗರದ ಜನತೆ ಮನೆಯಿಂದ ಹೊರ ಬರದೆ ಕರ್ಫ್ಯೂಗೆ ಸಹಕರಿಸಿದ್ದಾರೆ. ಈ ಏರಿಯಾ ಸಂಪೂರ್ಣ ಸ್ತಬ್ಧವಾಗಿದ್ದು, ಖಾಲಿ ರೋಡ್​ನಲ್ಲಿ ಜಾಲಿಯಾಗಿ ಸೈಕಲ್ ರೈಡ್ ಮೂಲಕ ಬಂದು ನಟ ನೀನಾಸಂ ಸತೀಶ್ ತರಕಾರಿ ಖರೀದಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಕರ್ಫ್ಯೂವನ್ನು ಜನ ಸೀರಿಯಸ್ ಆಗಿ ತೆಗೆದುಕೊಳ್ಳದೆ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ. ಆದರೆ ಆರ್.​ಆರ್ ನಗರದ ಜನತೆ ತೋರಿರುವ ಶಿಸ್ತಿಗೆ ಕ್ವಾಟ್ಲೆ ಸತೀಶ್ ಸಲಾಂ ಹೇಳಿದ್ದಾರೆ.

ಸೈಕಲ್ ರೈಡ್ ಮೂಲಕ ಬಂದು ಜಾಗೃತಿ ಮಾತು ಹೇಳಿದ ನೀನಾಸಂ ಸತೀಶ್

ಅಗತ್ಯ ವಸ್ತುಗಳು ಸಿಗುತ್ತವೆ. ಜನತೆ ಅತಂಕ ಪಡುವ ಅಗತ್ಯವಿಲ್ಲ. ಜೊತೆಗೆ ಕರ್ಫ್ಯೂ ಇರುವವರೆಗೂ ನಾನು ಮನೆಯಲ್ಲೇ ಇರ್ತೇನೆ, ನೀವೂ ಮನೆಯಲ್ಲೇ ಇರಿ. ನಾವು ಬದುಕಿದ್ರೆ ಮುಂದೆ ಉತ್ತಮ ಜೀವನ ನಡೆಸಬಹುದು‌. ನೀವು ಎಲ್ಲಿ ಇದ್ದೀರ ಅಲ್ಲೇ ಇದ್ದು, ಪೊಲೀಸರಿಗೆ ಹಾಗೂ ವೈದ್ಯರಿಗೆ ಸಹಕರಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.