ETV Bharat / state

ಕೋವಿಡ್​ನಿಂದ ಗುಣಮುಖರಾಗಿದ್ದೀರಾ?....ದಿಢೀರ್ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದರೆ ಎಚ್ಚರ! - ಕೋವಿಡ್​ನಿಂದ ಗುಣಮುಖರಾದವರಿಗೆ ತಜ್ಞರ ಸಲಹೆ

ಮಹಾಮಾರಿ ಕೋವಿಡ್​​ನಿಂದ ಗುಣಮುಖವಾದ ಬಳಿಕ ವಿಶ್ರಾಂತಿ ಪಡೆಯಬೇಕು. ವ್ಯಾಯಾಮ ಅಥವಾ ಕ್ರೀಡೆಯಲ್ಲಿ ತೊಡಗಿದರೆ ಅಪಾಯ ಸಂಭವಿಸುತ್ತದೆಯಂತೆ. ಈ ಕುರಿತಂತೆ ಬೆಂಗಳೂರಿನ ಖ್ಯಾತ ತಜ್ಞರಾದ ಡಾ.ರೇಣು ದಡಿಯಾಲ ಮಾಹಿತಿ ನೀಡಿದ್ದಾರೆ.

Bangalore expert Dr. Renu Dadiyala
ಬೆಂಗಳೂರಿನ ಖ್ಯಾತ ತಜ್ಞರಾದ ಡಾ.ರೇಣು ದಡಿಯಾಲ ಮಾಹಿತಿ
author img

By

Published : Aug 28, 2021, 7:50 PM IST

ಬೆಂಗಳೂರು: ಕೋವಿಡ್​​ನಿಂದ ಗುಣಮುಖರಾದವರು ವಿಶ್ರಾಂತಿ ಪಡೆಯುವ ಬದಲು ತಕ್ಷಣವೇ ವ್ಯಾಯಾಮ ಅಥವಾ ಕ್ರೀಡೆಯಲ್ಲಿ ತೊಡಗಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಖ್ಯಾತ ತಜ್ಞರಾದ ಡಾ.ರೇಣು ದಡಿಯಾಲ ಮಾಹಿತಿ

ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ಬೆಂಗಳೂರಿನ ಖ್ಯಾತ ಕ್ರೀಡಾ ಗಾಯಗಳ ವಿಶೇಷ ತಜ್ಞರಾದ ಡಾ.ರೇಣು ದಡಿಯಾಲ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕೊರೊನಾದಿಂದ ಗುಣಮುಖರಾದ ಬಳಿಕ ಕನಿಷ್ಠ 10-15 ದಿನಗಳವರೆಗೆ ಯಾವುದೇ ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುಬಾರದು. ಇದರಿಂದ ಆರೋಗ್ಯದ ಮೇಲೆ ಬೀರುವ ಗಂಭೀರ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ದೇಹದ ಅನೇಕ ಅಂಗಗಳಿಗೆ ಹಾನಿ:

ಕೋವಿಡ್ ದೇಹದ ಅನೇಕ ಅಂಗಗಳಿಗೆ ಹಾನಿ ಉಂಟು ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇದು ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಅಧ್ಯಯನಗಳು ನಡೆದಿಲ್ಲ. ಶಕ್ತಿ ಕುಂದುವಿಕೆ, ಉಸಿರಾಟದಲ್ಲಿ ತೊಂದರೆ, ಸ್ನಾಯು ನೋವು, ಬಳಲಿಕೆ ಇತ್ಯಾದಿಗಳಂತಹ ಲಕ್ಷಣಗಳಿಂದ ಜನರು ಬಳಲುತ್ತಿದ್ದಾರೆ. ಇವರನ್ನು ಗುಣಮುಖರಾದ ನಂತರ ತಿಂಗಳುಗಟ್ಟಲೆ ಆರೈಕೆ ಮಾಡಬೇಕಾಗುತ್ತದೆ ಎಂದರು.

ಮುನ್ನೆಚ್ಚರಿಕೆ ಅಗತ್ಯ:

ಕೋವಿಡ್ ಪಾಸಿಟಿವ್ ಬಂದಾಗ ಕ್ವಾರಂಟೈನ್‍ನಲ್ಲಿ ಇರುವ ಯಾವುದೇ ವ್ಯಕ್ತಿಯು ವ್ಯಾಯಾಮ ಮಾಡುವುದಾಗಲಿ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬಾರದು. ಕೊರೊನಾದಿಂದ ಗುಣಮುಖರಾದ ನಂತರ ಜನರು ಕ್ರೀಡೆ ಅಥವಾ ವ್ಯಾಯಾಮದಲ್ಲಿ ತೊಡಗಿದರೆ ದೈಹಿಕ ಬಳಲಿಕೆಯನ್ನು ಎದುರಿಸಬೇಕಾಗುತ್ತದೆ. ಸಾಧಾರಣ ಅಥವಾ ಗಂಭೀರ ಸ್ವರೂಪದ ಕೋವಿಡ್ ಲಕ್ಷಣಗಳಿಂದ ಬಳಲುತ್ತಿದ್ದವರು ಪ್ರಮುಖವಾಗಿ ಕ್ರೀಡಾಪಟುಗಳು ಪಾಲ್ಗೊಂಡರೆ ಕುಸಿದು ಬೀಳುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಸಂಬಂಧಪಟ್ಟಂತೆ ವೈದ್ಯರನ್ನು ಸಂಪರ್ಕಿಸಿ ಇಸಿಜಿ ಮತ್ತು ರಕ್ತದ ಪರೀಕ್ಷೆಗಳನ್ನು ಮಾಡಿಸಿ ಕೊಳ್ಳಬೇಕು ಎಂದರು.

ಹೃದಯಕ್ಕೆ ಹೆಚ್ಚು ಅಪಾಯಕಾರಿ:

ಈ ಕೋವಿಡ್ ವೈರಸ್ ಹೃದಯದ ಸ್ನಾಯುಗಳಲ್ಲಿ ಉರಿಯೂತ ಮತ್ತು ಮಯೋಕಾರ್ಡಿಟಿಸ್​ಗೆ ಕಾರಣವಾಗುತ್ತದೆ. ವೈರಸ್ ದೇಹದಿಂದ ಹೊರ ಹೋದರೂ, ನಿರ್ದಿಷ್ಟ ಜಾಗದಲ್ಲಿ ಜೀವಂತವಾಗಿದ್ದುಕೊಂಡು ಆಮ್ಲಜನಕ ವಿನಿಮಯ ಪ್ರಕ್ರಿಯೆಗೆ ಅಡ್ಡಿಯಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ವ್ಯಾಯಾಮ ಅಥವಾ ಕ್ರೀಡೆಯಲ್ಲಿ ನಿರತರಾಗುವುದು ಅತ್ಯಂತ ಅಪಾಯಕಾರಿಯಾಗಿದೆ.

ಯಾವುದೇ ವ್ಯಕ್ತಿಯು ಉಸಿರಾಟದಲ್ಲಿ ತೊಂದರೆ, ಎದೆನೋವು, ತಲೆ ಸುತ್ತುವುದು ಅಥವಾ ಹೃದಯ ಬಡಿತದಲ್ಲಿ ತೊಂದರೆ ಆಗುತ್ತಿರುವ ಅನುಭವವನ್ನು ಹೊಂದಿದರೆ ಅದಕ್ಕೆ ಚಿಕಿತ್ಸೆ ಪಡೆಯುವವರೆಗೆ ಕ್ರೀಡೆ ನಿಲ್ಲಿಸಬೇಕು. ಕೋವಿಡ್‍ನಿಂದ ಗುಣಮುಖರಾದ 15 ದಿನಗಳ ನಂತರ ಸಾಮಾನ್ಯ ಸ್ಥಿತಿಗೆ ಮರಳಿದ್ದೇವೆ ಎಂದೆನಿಸಿದಾಗ ಮಾತ್ರ ದೈಹಿಕ ಚಟುವಟಿಕೆಗಳನ್ನು ನಡೆಸಬೇಕು ಎಂದರು.

ಕಳೆದ 15 ವರ್ಷಗಳಲ್ಲಿ ಬೆಂಗಳೂರು ಸೈಕ್ಲಿಂಗ್, ರನ್ನಿಂಗ್, ಸಾಕರ್ ಮತ್ತು ಟೆನ್ನಿಸ್ ಕ್ಲಬ್‍ಗಳೊಂದಿಗೆ ಮನರಂಜನಾ ಕ್ರೀಡಾ ಹಬ್ ಆಗಿ ಬೆಳೆದಿದೆ. ಇಲ್ಲಿ ಕ್ರೀಡೆ ಮತ್ತು ಕೋಚಿಂಗ್ ಅಕಾಡೆಮಿಗಳು ಮತ್ತು ಫಿಟ್ನೆಸ್ ಕೇಂದ್ರಗಳು ಹೆಚ್ಚಾಗಿವೆ. ಐಟಿ ಪ್ರತಿನಿಧಿಗಳಿಂದ ಶಾಲಾ ವಿದ್ಯಾರ್ಥಿಗಳಿಂದ ಗೃಹಿಣಿಯವರೆಗೆ ಎಲ್ಲರೂ ಒಂದಲ್ಲಾ ಒಂದು ಬಗೆಯ ಮನರಂಜನಾ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ಶಾಲೆಗಳು ಕ್ರೀಡೆಗಳನ್ನು ತಮ್ಮ ಪಠ್ಯಕ್ರಮದ ಭಾಗವಾಗಿ ಸೇರಿಸಿವೆ. ಇದು ಮನರಂಜನಾ ಅಥ್ಲೀಟ್‍ಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇದರ ಪರಿಣಾಮ ಕ್ರೀಡಾ ಸಂಬಂಧಿತ ಗಾಯಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.