ETV Bharat / state

ಕೋವಿಡ್​ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ: ಎಪಿಎಲ್ ಕುಟುಂಬಕ್ಕೂ ಪರಿಹಾರ ಏರಿಕೆ ಬಗ್ಗೆ ಚಿಂತನೆ

ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ಕೊಡಲಾಗುವುದು. ನಗರದ ವಿವಿಧೆಡೆ ಈಗಾಗಲೆ ಆರಂಭಿಸಲಾಗಿದೆ. ಇದಕ್ಕಾಗಿಯೇ ಸರ್ಕಾರ 57 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಬೆಂಗಳೂರಲ್ಲಿ 8,591 ಜನರಿಂದ ಪರಿಹಾರ ಕೋರಿ ಅರ್ಜಿ ಬಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು
author img

By

Published : Dec 27, 2021, 3:44 PM IST

ಬೆಂಗಳೂರು: ಕೋವಿಡ್​ನಿಂದ ಮೃತಪಟ್ಟವರ ವಾರಸುದಾರ, ಕುಟುಂಬಸ್ಥರಿಗೆ ಪರಿಹಾರ ಧನ ವಿತರಣಾ ಕಾರ್ಯಕ್ರಮವನ್ನು ಆಯ್ದ ಕೆಲ ಕುಟುಂಬಗಳಿಗೆ ವಿತರಿಸುವ ಮೂಲಕ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು

ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಕುಟುಂಬದ ಸದಸ್ಯರ ಅಗಲಿಕೆ ಬಹಳ ವರ್ಷ ಕಾಡುತ್ತದೆ. ಅದರಲ್ಲೂ ಆರೋಗ್ಯವಾಗಿ ಇದ್ದ ಕುಟುಂಬದ ಸದಸ್ಯರು ಕೆಲವೇ ದಿನದಲ್ಲಿ ನಮ್ಮ ಕಣ್ಣಮುಂದೆ ಹೋಗುವ ದುಃಖ ತಡೆಯಲು ಸಾಧ್ಯವಿಲ್ಲ. ಮಹಾಮಾರಿ ಕೋವಿಡ್ ಬಹಳಷ್ಟು ಕುಟುಂಬಗಳನ್ನು ತಬ್ಬಲಿಯಾಗಿ, ಅನಾಥರನ್ನಾಗಿ ಮಾಡಿದೆ.

ಆರೋಗ್ಯ ಇಲಾಖೆ, ಪೊಲೀಸರು, ಮುಂಚೂಣಿ ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲ್ಲರೂ ಯಶಸ್ವಿಯಾಗಿ ಎದುರಿಸಿದ್ದೇವೆ. ರಾಜ್ಯದಲ್ಲಿ 97 ರಷ್ಟು ಜನರಿಗೆ ಮೊದಲ ಡೋಸ್ ಆಗಿದೆ. ಶೇ 76 ರಷ್ಟು 2ನೇ ಡೋಸ್ ಆಗುತ್ತಿದೆ. ಇದು ಬಹಳ ದೊಡ್ಡ ಸಾಧನೆ ಎಂದರು.

ಹಳ್ಳಿಗಾಡಲ್ಲಿ ಜನ ಹಿಂಜರಿದರೂ ತಿಳಿವಳಿಕೆ ನೀಡಲಾಗಿದೆ

ಹಳ್ಳಿಗಾಡಲ್ಲಿ ಜನ ಹಿಂಜರಿದರೂ ಮನೆಮನೆಗೆ ಹೋಗಿ ಈ ಬಗ್ಗೆ ತಿಳಿವಳಿಕೆ ನೀಡಲಾಗ್ತಿದೆ. ಬೆಂಗಳೂರಲ್ಲಿಯೂ ಶೇ.10ರಷ್ಟು ಬಾಕಿ ಇದ್ದು, ನಗರದ ಜನಪ್ರತಿನಿಧಿಗಳು ಮನೆಮನೆಗೆ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡ್ತೇನೆ ಎಂದು ತಿಳಿಸಿದರು.

ಕೋವಿಡ್ ನಿರ್ವಹಣೆಗೆ ಬೇಕಾದ ಬೆಡ್​ಗಳು, ಔಷಧಗಳನ್ನು ಕೂಡಾ ಅಭಿವೃದ್ಧಿ ಮಾಡಲಾಗಿದೆ. ಪ್ರತೀ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್ ಟೆಸ್ಟ್ ಯುನಿಟ್​ಗಳನ್ನು ಹೆಚ್ಚು ಮಾಡಲಾಗಿದೆ. 3ನೇ ಅಲೆಗೆ ಬೇಕಾದ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. 4 ಸಾವಿರ ವೈದ್ಯರ ನೇಮಕಾತಿ ಮಾಡಲಾಗಿದೆ ಎಂದರು.

ಬೆಂಗಳೂರಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುವುದು. ಪ್ರತೀ ವಾರ್ಡ್ ಅಭಿವೃದ್ಧಿಗೆ ಯೋಜನೆ ಮಾಡಲಾಗುವುದು. ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಮಾಡಿ, ಹಣ ಕೊಟ್ಟು ಅಭಿವೃದ್ಧಿ ಮಾಡಲಾಗುವುದು. ಮಳೆ ಬಂದಾಗ ನಗರದ ರಾಜಕಾಲುವೆ ನಿರ್ಮಾಣ ಬಾಕಿ ಇರುವ ಕಡೆ ನಾನೇ ನೋಡಿದ್ದೇನೆ. ಶಾಶ್ವತ ರಾಜಕಾಲುವೆ ನಿರ್ಮಾಣಕ್ಕೆ, ಬಾಟಲ್ ನೆಕ್ ತೆಗೆಯಲು, ಯಾರು ಅಕ್ರಮವಾಗಿ ಕಾಲುವೆ ಮೇಲೆ ಮನೆ ಕಟ್ಟಿದ್ದಾರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆಗೆಯಲಾಗುವುದು ಎಂದು ತಿಳಿಸಿದರು.

ಕಂದಾಯ ಸಚಿವರಾದ ಆರ್. ಅಶೋಕ್ ಮಾತನಾಡಿ, ಮೃತ ಕುಟುಂಬದ ಸದಸ್ಯರಿಗೆ ನೆರವಿಗೆ ಬರಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಒಂದು ಸಾವಿರ ಜನ ಮಾತ್ರ ಇಲ್ಲಿ ಸೇರಲು ಅವಕಾಶ ಇದೆ. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರು, ಶಾಸಕರು, ಪಾಲಿಕೆ ಅಧಿಕಾರಿಗಳು ಮನೆಬಾಗಿಲಿಗೆ ಹೋಗಿ ಸಾಂತ್ವಾನ ಹೇಳಿ, ಪರಿಹಾರ ಧನ ಕೊಡಲಿದ್ದಾರೆ ಎಂದರು.

ಎಪಿಎಲ್​ ಕುಟುಂಬಕ್ಕೂ ನೆರವು ಹೆಚ್ಚಳ ಚಿಂತನೆ

ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ಕೊಡಲಾಗುವುದು. ನಗರದ ವಿವಿಧೆಡೆ ಈಗಾಗಲೆ ಆರಂಭಿಸಲಾಗಿದೆ. ಇದಕ್ಕಾಗಿಯೇ ಸರ್ಕಾರ 57 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಬೆಂಗಳೂರಲ್ಲಿ 8,591 ಜನರಿಂದ ಪರಿಹಾರ ಕೋರಿ ಅರ್ಜಿ ಬಂದಿದೆ ಎಂದು ಹೇಳಿದರು.

ಇಷ್ಟೇ ಅಲ್ಲದೆ 1003.5 ಕೋಟಿ ರೂ. ಹಣವನ್ನು ಸರ್ಕಾರ ರೈತರಿಗೆ ಪರಿಹಾರ ನೀಡಿದೆ. ಈ ಹಿಂದೆ ಎಲ್ಲ ಪರಿಹಾರ ಸಿಗುವಾಗ ಕೆಲವರು ಸತ್ತೇ ಹೋಗಿರುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ಪರಿಹಾರ ನೀಡಿದೆ ಎಂದು ತಿಳಿಸಿದರು.

ಕೊರೊನಾದಿಂದ ಮೃತಪಟ್ಟ ಎಲ್ಲ ವರ್ಗಗಳ ಕುಟುಂಬಗಳಿಗೆ ತಲಾ‌ 50 ಸಾವಿರ ರೂ. ಕೇಂದ್ರ ಸರ್ಕಾರದ ಎನ್​ಡಿಆರ್​ಎಫ್ ಅನುದಾನದಿಂದ ಪರಿಹಾರ ಕೊಡಲಾಗುತ್ತದೆ. ಇನ್ನು ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್​ನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ ತಲಾ 1 ಲಕ್ಷ ರೂ. ಪರಿಹಾರ ವಿತರಣೆ ಆಗಲಿದೆ. ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು 1.50 ಲಕ್ಷ ರೂ. ಪರಿಹಾರ ವಿತರಣೆ ಆಗಲಿದೆ. ಬಿಪಿಎಲ್ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರವನ್ನು ಮಾಜಿ‌ ಸಿಎಂ ಯಡಿಯೂರಪ್ಪ ಘೋಷಿಸಿದ್ದರು.

ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಬಿಪಿಎಲ್ ಕಾರ್ಡ್ ದಾರರಿಗೆ 1.50 ಲಕ್ಷ ಕೊಡುವಂತೆಯೇ, ಎಪಿಎಲ್ ಕಾರ್ಡ್ ಇರುವವರಿಗೂ 1 ಲಕ್ಷ ಕೊಡಬೇಕೆಂದು ಮನವಿ ಮಾಡ್ತೇನೆ ಎಂದರು. ಎಲ್ಲರ ಅರ್ಜಿ ಸ್ವೀಕರಿಸಬೇಕು, ನಮ್ಮ ಕ್ಷೇತ್ರದಲ್ಲಿ ಅರ್ಜಿ ಹಾಕಿದವರಲ್ಲಿ ಕೆಲವರನ್ನಷ್ಟೇ ಆಯ್ಕೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಎಸ್. ಟಿ ಸೋಮಶೇಖರ್, ಗೋಪಾಲಯ್ಯ, ಮುನಿರತ್ನ, ಡಾ. ಸುಧಾಕರ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಧಾನಸಭಾ ಸದಸ್ಯರು, ರವಿ ಸುಬ್ರಹ್ಮಣ್ಯ, ಸಂಸದ ಪಿ ಸಿ ಮೋಹನ್, ಯುಬಿ ವೆಂಕಟೇಶ್, ಜಮೀರ್ ಅಹ್ಮದ್ ಖಾನ್, ಸತೀಶ್ ರೆಡ್ಡಿ ಮಂಜುನಾಥ್ ಹಾಗೂ ಬೈರತಿ ಸುರೇಶ್ ಮೊದಲಾದವರು ಭಾಗಿಯಾಗಿದ್ದರು.

ಓದಿ: ಯುವತಿಗೆ ಡ್ರಗ್ಸ್ ನೀಡಿ ಲೈಂಗಿಕವಾಗಿ ದುರ್ಬಳಕೆ : ಮಂಗಳೂರಲ್ಲಿ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.