ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಕುರಿತಾದ ಕ್ಷಣ ಕ್ಷಣದ ಅಧಿಕೃತ ಮತ್ತು ನಿಖರ ಮಾಹಿತಿ ನೀಡುವ ಡಿಜಿಟಲ್ ಡ್ಯಾಶ್ ಬೋರ್ಡ್ಅನ್ನ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಉದ್ಘಾಟನೆ ಮಾಡಿದರು. ಬಿಬಿಎಂಪಿ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕೋವಿಡ್-19 ವಾರ್ ರೂಂನಲ್ಲಿ ಸರ್ಕಾರದ ಅಧಿಕೃತ ಡ್ಯಾಶ್ ಬೋರ್ಡ್ಗೆ ಚಾಲನೆ ನೀಡಲಾಯಿತು.
ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿದೆ. ಕೆಲವೇ ದಿನಗಳ ಹಿಂದೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲು ಡಿಜಿಟಲ್ ತಂತ್ರಜ್ಞಾನದ ಬಳಕೆ ಮಾಡಲಾಗಿತ್ತು. ಇಲ್ಲೂ ಕೂಡ ಕೋವಿಡ್-19 ಕುರಿತಂತೆ ಖಚಿತವಾದ ಮತ್ತು ಕ್ಷಣ ಕ್ಷಣದ ಮಾಹಿತಿ ನೀಡಲು ತಂತ್ರಜ್ಞಾನದ ಸಹಾಯದಿಂದ ಈ ಡ್ಯಾಶ್ ಬೋರ್ಡ್ ನಿಮಿಸಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಕುಳಿತು ಸರಳವಾಗಿ ರಿಯಲ್ ಟೈಮ್ ಮಾಹಿತಿ ಪಡೆಯಬಹುದು. ಜನರಿಗೆ ಮಾಹಿತಿ, ಜಾಗೃತಿ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಇದೊಂದು ಪ್ರಾಮಾಣಿಕ ಪ್ರಯತ್ನ ಮಾಡಿದೆ ಅಂತ ಸಚಿವರು ಮಾಹಿತಿ ನೀಡಿದರು.