ETV Bharat / state

ಜೆಡಿಎಸ್‌ ಜಾತ್ಯಾತೀತತೆ ಪರೀಕ್ಷಿಸಲು ಹೊರಟವರಿಗೆ ಧರ್ಮೇಗೌಡರ ಸಾವೇ ಉತ್ತರ.. ಮಾಜಿ ಸಿಎಂ ಹೆಚ್‌ಡಿಕೆ ಕಣ್ಣೀರು

ಹಲವಾರು ಮಂದಿ ರಾಜಕಾರಣಿಗಳು ಮರಣ ಹೊಂದಿದ್ದಾರೆ. ಆದರೆ, ಇದು ಇವತ್ತಿನ ರಾಜಕಾರಣದ ಕೊಲೆ ಎಂದು ಹೇಳುತ್ತೇನೆ. ಇದು ಆತ್ಮಹತ್ಯೆ ಎಂದು ಹೇಳaಕೆ ಇಷ್ಟಪಡಲ್ಲ. ಇಂತಹ ಘಟನೆ ಸಹಿಸಿಕೊಳುವುದಕ್ಕೆ ಸಾಧ್ಯವಿಲ್ಲ ಎಂದರು. ನನ್ನ ಜೀವನದಲ್ಲಿ ನನ್ನ ಸಹೋದರನ ಸಾವಿನ ಘಟನೆ ಎಂದು ಭಾವಿಸುತ್ತೇನೆ..

H. D. Kumaraswamy
ಹೆಚ್.ಡಿ.ಕುಮಾರಸ್ವಾಮಿ
author img

By

Published : Dec 29, 2020, 1:40 PM IST

ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರ ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್‌ನ ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಆದರೆ, ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದ್ರೂ ಅವರ ಆತ್ಮಾವಲೋಕನ ಆಗಲಿ ಎಂದಿದ್ದಾರೆ. ನನ್ನ ಜೀವನದ ಅತ್ಯಂತ ಮರೆಯಲಾಗದ ದುರಂತ ದಿನ ಇದು ಎಂದು ಧರ್ಮೇಗೌಡ ನಿಧನಕ್ಕೆ ಹೆಚ್​ಡಿಕೆ ಕಣ್ಣೀರು ಹಾಕಿದರು.

ಧರ್ಮೇಗೌಡರ ಅಗಲಿಕೆಗೆ ಹೆಚ್ ಡಿ ಕುಮಾರಸ್ವಾಮಿ ಕಣ್ಣೀರು..

ಹಲವಾರು ಮಂದಿ ರಾಜಕಾರಣಿಗಳು ಮರಣ ಹೊಂದಿದ್ದಾರೆ. ಆದರೆ, ಇದು ಇವತ್ತಿನ ರಾಜಕಾರಣದ ಕೊಲೆ ಎಂದು ಹೇಳುತ್ತೇನೆ. ಇದು ಆತ್ಮಹತ್ಯೆ ಎಂದು ಹೇಳaಕೆ ಇಷ್ಟಪಡಲ್ಲ. ಇಂತಹ ಘಟನೆ ಸಹಿಸಿಕೊಳುವುದಕ್ಕೆ ಸಾಧ್ಯವಿಲ್ಲ ಎಂದರು. ನನ್ನ ಜೀವನದಲ್ಲಿ ನನ್ನ ಸಹೋದರನ ಸಾವಿನ ಘಟನೆ ಎಂದು ಭಾವಿಸುತ್ತೇನೆ. ಧರ್ಮೇಗೌಡರ ತಂದೆ ಲಕ್ಷ್ಮಯ್ಯ 2004ರಲ್ಲಿ ಒಂದು ಮಾತು ಕೇಳಿದ್ದರು. ನಾನು ಸಾಯುವ ಮುನ್ನ ನನ್ನ ಮಗನನ್ನು ಮಂತ್ರಿಯಾಗಿ ನೋಡಬೇಕೆಂದಿದ್ದರು.

ಧರ್ಮೇಗೌಡ ಮತ್ತು ಅವರ ಸಹೋದರ ಬೋಜೇಗೌಡ ಇಬ್ಬರೂ 2013ರಲ್ಲಿ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್ ಸೇರಲು ಯೋಚಿಸಿರುವುದಾಗಿ ನನ್ನ ಬಳಿ ಬಂದು ಹೇಳಿದರು. ನಿಮಗೆ ಕುಮಾರಣ್ಣ ಬೇಕೆಂದರೆ ಉಳಿದುಕೊಳ್ಳಿ ಎಂದು ಹೇಳಿದ್ದೆ. ಆ ಒಂದು ಮಾತಿನಿಂದ ಅವರು ಜೆಡಿಎಸ್ ಪಕ್ಷದಲ್ಲಿ ಉಳಿದುಕೊಂಡರು ಎಂದು ಅವರ ಪಕ್ಷ ನಿಷ್ಠೆ ನೆನಪಿಸಿಕೊಂಡ ಕುಮಾರಸ್ವಾಮಿ ಅವರು, ಅವರ ತಂದೆಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಿಲ್ಲ. ಅದಕ್ಕೆ ಉಪಸಭಾಪತಿ ಮಾಡಿದ್ದೆ. ಉಪ ಸಭಾಪತಿಯನ್ನಾಗಿ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ? ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಉಪಸಭಾಪತಿ ಆತ್ಮಹತ್ಯೆ ನೆನೆದು ಕಣ್ಣೀರು ಹಾಕಿದ ಶಾಸಕ ಸಾ ರಾ ಮಹೇಶ್

ಸಭಾಪತಿ ಪೀಠದಲ್ಲಿ ಕೂರಲು ಧರ್ಮೇಗೌಡ ಒಪ್ಪಿರಲಿಲ್ಲ. ನಾನೂ ಕೂಡ ಬೇಡ ಎಂದು ಹೇಳಿದ್ದೆ. ಆದರೂ ಒತ್ತಡ ಹಾಕಿ ಅವರನ್ನು ತಂದು ಕೂರಿಸಿದರು. ಮನಸಿಲ್ಲದೆ ಅವರು ಪೀಠದ ಮೇಲೆ ಕುಳಿತರು. ಆನಂತರ ಆದ ಘಟನೆ ನಿಮಗೆ ಗೊತ್ತಿದೆ. ನಮ್ಮ ನಮ್ಮ ಸ್ವಾರ್ಥಕ್ಕೆ ಇದು ಆಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಯಾರೂ ಕೂಡ ಯಾವುದೇ ವ್ಯಕ್ತಿಗಳ ಜೊತೆ ಚೆಲ್ಲಾಟ ಆಡಬಾರದು.

ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ‌. ನಮ್ಮಂತ ರಾಜಕಾರಣಿಗಳ ತೆವಲಿಗೆ ಈ ವ್ಯಕ್ತಿ ಹೀಗಾಗಿದ್ದಾರೆ. ಅವರು ಪರಿಸರ ಪ್ರೇಮಿಯಾಗಿದ್ದರು. ಬಹಳ ಸಜ್ಜನ, ಸೂಕ್ಷ್ಮ ವ್ಯಕ್ತಿ. ಮರಗಳಿಗೆ ಕೊಡಲಿ ಪೆಟ್ಟು ಬಿದ್ದರೆ ತನಗೇ ಬಿದ್ದಿತು ಎಂದು ಕೊಳ್ಳುತ್ತಿದ್ದರು. ಇವರ ಸಹೋದರ ಬೋಜೇಗೌಡ ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಾರೆ. ಆದರೆ, ಧರ್ಮೇಗೌಡ ನಿಜವಾದ ಧರ್ಮರಾಯ. ಇವತ್ತಿನ ರಾಜಕಾರಣದಲ್ಲಿ ಧರ್ಮರಾಯನನ್ನು ಕಳೆದುಕೊಂಡಿದ್ದೇವೆ ಎಂದು ಭಾವುಕರಾದರು.

ಸದನದಲ್ಲಿ ನಡೆದ ಗಲಾಟೆ ಪ್ರಕರಣದಿಂದ ಅವರು ಮನನೊಂದಿದ್ದರು. ಆ ಪ್ರಕರಣದಲ್ಲಿ ಧರ್ಮೇಗೌಡರ ಮೇಲೆಯೇ ದೋಷ ಹೊರಿಸೋಕೆ ಪ್ರಯತ್ನ ನಡೆದಿದೆಯಂತೆ. ಅದರಿಂದಲೂ ಅವರು ಮನನೊಂದು ಈ ರೀತಿ ಮಾಡಿಕೊಂಡರೋ ಗೊತ್ತಿಲ್ಲ. ಎಲ್ಲಾ ಸತ್ಯಾಂಶಗಳು ಹೊರ ಬರಬೇಕು. ಕೆಲವು ವ್ಯಕ್ತಿಗಳು ನಿಮ್ಮ ಆತ್ಮಕ್ಕೆ ನಿಮ್ಮ ಪಾತ್ರದ ಬಗ್ಗೆ ಅವಲೋಕನ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಷತ್ ಘಟನೆ ಬಳಿಕ ಅವರ ತಮ್ಮ ಬೋಜೇಗೌಡ ಫೋನ್ ಮಾಡಿದ್ರು. ನಮ್ಮ ಅಣ್ಣ ತುಂಬಾ ಧೃತಿಗೆಟ್ಟಿದ್ದಾನೆ. ಫೋನ್ ಮಾಡಿ ಧೈರ್ಯ ಹೇಳಿ ಎಂದಿದ್ದರು. ನಾನು ಮಾತಾಡಿ ಧೈರ್ಯ ಹೇಳಿದ್ದೆ ಎಂದರು. ನಮ್ಮ ಪಕ್ಷದ ಮಾರ್ಯಾದೆಯುಳ್ಳ ಮರಿತಿಬ್ಬೇಗೌಡ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿದ್ದಾರೆ. ಅದರಲ್ಲಿ ಹಲವು ಸದಸ್ಯರು ಇದ್ದಾರೆ. ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು, ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಉತ್ತರ ಕೊಡಲಾಗದೇ ಆ ಹೆಣ್ಣು ಮಗಳು ಧರ್ಮೇಗೌಡರ ವಿರುದ್ಧ ಚಾರ್ಜ್ ಮಾಡಿ ಒಂದೂವರೆ ಪುಟದ ವರದಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.