ETV Bharat / state

ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ವಿಶಿಷ್ಟ ಯೋಜನೆ: ರಾಜನಾಥ್ ಸಿಂಗ್

author img

By

Published : Mar 17, 2022, 9:32 PM IST

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿರುವ ಎಫ್​​ಸಿಎಸ್ ಕಾಂಪ್ಲೆಕ್ಸ್ (ಫ್ಲೈಟ್ ಕಂಟ್ರೋಲ್ ಸಿಸ್ಟಮ್) ಕಟ್ಟಡವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟನೆ

ಬೆಂಗಳೂರು: ನಗರದ ನ್ಯೂ ತಿಪ್ಪಸಂದ್ರದಲ್ಲಿ ನೂತನ ತಂತ್ರಜ್ಞಾನದಿಂದ ಕೇವಲ 45 ದಿನಗಳಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿರುವ ಎಫ್​​ಸಿಎಸ್ ಕಾಂಪ್ಲೆಕ್ಸ್ (ಫ್ಲೈಟ್ ಕಂಟ್ರೋಲ್ ಸಿಸ್ಟಮ್) ಕಟ್ಟಡವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಇದು ವಿಶಿಷ್ಟ ಯೋಜನೆಯಾಗಿದೆ ಮತ್ತು ನವ ಭಾರತದ ಹೊಸ ಶಕ್ತಿಯ ಸಾಕಾರವಾಗಿದೆ. ಈ ಕಾಂಪ್ಲೆಕ್ಸ್ ತಂತ್ರಜ್ಞಾನ, ಬದ್ಧತೆ, ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಹಯೋಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪಿಸಿರುವ 'ಆತ್ಮನಿರ್ಭರ ಭಾರತ' ಪ್ರತೀಕವಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವಲ್ಲಿ ಈ ಸೌಲಭ್ಯವು ಬಹಳ ದೂರ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಟ್ಟಡದಲ್ಲಿ ಸಿಮ್ಯುಲೇಟರ್ ತರಬೇತಿ: ಈ ಸಂಕೀರ್ಣವು ಯುದ್ಧ ವಿಮಾನದ ಪೈಲಟ್‌ಗಳಿಗೆ ಸಿಮ್ಯುಲೇಟರ್ ತರಬೇತಿ ಸಹ ನೀಡುತ್ತದೆ. ಇದು ಸಂಕೀರ್ಣದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸಿಮ್ಯುಲೇಟರ್‌ಗಳು ಕಲಿಯಲು ಅವಕಾಶವನ್ನು ಒದಗಿಸುತ್ತದೆ ಎಂದು ವಿವರಿಸಿದರು.

ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಡಿಆರ್‌ಡಿಓ ಮುಂಚೂಣಿ: ಹೈಬ್ರಿಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಡಿ.ಆರ್.ಡಿ.ಓ ಮತ್ತು ಎಲ್‌ಅಂಡ್‌ಟಿ ಸಂಸ್ಥೆಗಳನ್ನು ಶ್ಲಾಘಿಸುತ್ತೇನೆ. ಈ ಪ್ರಕ್ರಿಯೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಹೈಬ್ರಿಡ್ ತಂತ್ರಜ್ಞಾನವು ನಿರ್ಮಾಣ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲು. ನಿರ್ಮಾಣ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದರು.

ಸಶಸ್ತ್ರ ಪಡೆಗಳನ್ನು ಬೆಂಬಲಿಸಲು ಕೇಂದ್ರದ ಸಂಕಲ್ಪ: ಸಶಸ್ತ್ರ ಪಡೆಗಳನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಲು ಕೇಂದ್ರ ಸರ್ಕಾರ ಸಂಕಲ್ಪಿಸಿದೆ. ವಿಜ್ಞಾನಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ರೈತರು ಸಮೃದ್ಧ ಭವಿಷ್ಯಕ್ಕಾಗಿ ಅನ್ವೇಷಣೆ ನೆಡೆಸಲಾಗುತ್ತಿದೆ. ಪ್ರಪಂಚದಾದ್ಯಂತ ಆರ್ಥಿಕ, ರಾಜಕೀಯ ಮತ್ತು ಕಾರ್ಯತಂತ್ರದ ಸಮೀಕರಣಗಳು ಬದಲಾಗುತ್ತಿವೆ. ರಕ್ಷಣಾ ಅಗತ್ಯಗಳೂ ಹೆಚ್ಚಿವೆ ಮತ್ತು ಸಶಸ್ತ್ರ ಪಡೆಗಳ ನಿರಂತರ ಆಧುನೀಕರಣದ ಈ ಸಮಯದ ಅಗತ್ಯವಾಗಿದೆ.

ನಮ್ಮನ್ನು ನಾವು ಸಿದ್ಧವಾಗಿಟ್ಟುಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಕಾರ್ಯತಂತ್ರದ ಸಾಮರ್ಥ್ಯಗಳನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ತಂತ್ರಜ್ಞಾನ, ಉತ್ಪನ್ನಗಳು, ಸೇವೆಗಳು ಮತ್ತು ಸೌಲಭ್ಯಗಳು ವೇಗವಾದ ಅಭಿವೃದ್ಧಿಯು ಸಮಯದ ಅಗತ್ಯವಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವಲ್ಲಿ ಡಿಆರ್‌ಡಿಓ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿ ಡಿಆರ್‌ಡಿಓ ಉದ್ದೇಶ: ಭವಿಷ್ಯದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಡಿಆರ್‌ಡಿಓ ಉದ್ದೇಶವಾಗಿದೆ. ಸಾಮಾನ್ಯ ನಾಗರಿಕ ವಲಯಕ್ಕೂ ಇದು ಲಭ್ಯವಾಗುತ್ತಿವೆ. ಸಾಂಪ್ರದಾಯಿಕ ನಿರ್ಮಾಣ ಉದ್ಯಮವನ್ನು ಶ್ರಮದಾಯಕವೆಂದು ಪರಿಗಣಿಸಲಾಗುತ್ತದೆ. ಡಿಆರ್‌ಡಿಓ ಹೈಬ್ರಿಡ್ ತಂತ್ರಜ್ಞಾನದ ಮೂಲಕ ಎಫ್‌ಸಿಎಸ್ ಸಂಕೀರ್ಣವನ್ನು ನಿರ್ಮಿಸಿದೆ.

ಸ್ಟ್ಯಾಂಡರ್ಡ್ ನ್ಯಾಶನಲ್ ಬಿಲ್ಡಿಂಗ್ ಕೋಡ್ ಪ್ರಕಾರ ವಿದ್ಯುತ್ ವ್ಯವಸ್ಥೆ ಮತ್ತು ಅಗ್ನಿಯ, ರಕ್ಷಣೆ ಹವಾನಿಯಂತ್ರಣ ವ್ಯವಸ್ಥೆಯನ್ನು ಕಟ್ಟಡವನ್ನು ಒದಗಿಸಲಾಗಿದೆ. ನಿರ್ಮಾಣ ತಂತ್ರಜ್ಞಾನದಲ್ಲಿನ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮತ್ತು ಹೊಸ ಆವಿಷ್ಕಾರಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ರಾಜನಾಥ್ ಸಿಂಗ್ ಕರೆ ನೀಡಿದರು.

1.3 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ: ಎಫ್‌ಸಿಎಸ್ ಸೌಲಭ್ಯವು 1.3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡವಾಗಿದೆ. ನಿರ್ಮಾಣವು 45 ದಿನಗಳಲ್ಲಿ ಪೂರ್ಣಗೊಂಡಿದೆ. ದೇಶದಲ್ಲಿ ಮೊದಲ ಬಾರಿಗೆ ಹೈಬ್ರಿಡ್ ನಿರ್ಮಾಣ ತಂತ್ರಜ್ಞಾನದೊಂದಿಗೆ ಏಳು ಅಂತಸ್ತಿನ ಕಟ್ಟಡವನ್ನು ಪೂರ್ಣಗೊಳಿಸುವ ವಿಶಿಷ್ಟ ದಾಖಲೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.