ETV Bharat / state

ನೈಟ್​​ ಔಟ್​​ಗೆಂದು ಒಂದೇ ಬೈಕ್​ನಲ್ಲಿ ತೆರಳಿದ್ದ ಟೆಕ್ಕಿಗಳು... ಅಪಘಾತದಲ್ಲಿ ಮೂವರ ದುರ್ಮರಣ

author img

By

Published : May 6, 2019, 2:22 PM IST

ಬೆಂಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದೆ. ನೈಟ್​ ಔಟ್​ಗೆಂದು ಒಂದೇ ಬೈಕ್​ನಲ್ಲಿ ತೆರಳಿದ್ದ ಮೂವರು ಟೆಕ್ಕಿಗಳ ಪ್ರಾಣ ಪಕ್ಷಿ ಹಾರಿಹೋಗಿರುವ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಟೆಕ್ಕಿಗಳು ಅಪಘಾತದಲ್ಲಿ ಸಾವು

ಬೆಂಗಳೂರು: ಭಾನುವಾರ ರಾತ್ರಿ ನೈಟ್ ​​ಔಟ್​​ಗೆಂದು ತೆರಳಿದ್ದ ಮೂವರು ಟೆಕ್ಕಿಗಳು ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟಿದ್ದಾರೆ. ಒಂದೇ ಬೈಕ್​ನಲ್ಲಿ ತೆರಳುತ್ತಿದ್ದ ಇವರು ಆಯತಪ್ಪಿ ಡಿವೈಡರ್​​ಗೆ ಬೈಕ್​​​ನ್ನು​ ಗುದ್ದಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಬಸವೇಶ್ವರನಗರದಲ್ಲಿ ಸಂಭವಿಸಿದೆ.

ಅನಿಲ್, ಕಾರ್ತಿಕ್, ಶ್ರೀನಾಥ್ ಮೃತ ಟೆಕ್ಕಿಗಳು. ಈ ಮೂವರು ಮಧ್ಯೆರಾತ್ರಿ ಸುಮಾರು 1.30 ರ ಸಮಯದಲ್ಲಿ ಒಂದೇ ಬೈಕ್​​​ನಲ್ಲಿ ಹೊರ ಹೋಗಿದ್ರು. ಟೆಕ್ಕಿ ಕಾರ್ತಿಕ್ ಬೈಕ್​ನ್ನು​ವೇಗವಾಗಿ ಚಲಾಯಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಆಯತಪ್ಪಿ ಡಿವೈಡರ್​​​​ಗೆ ಬೈಕ್​​​ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತ ನಡೆದ ಸ್ಥಳ

ಬೈಕ್ ಮಾತ್ರ ಅಲ್ಪಮಟ್ಟಿಗೆ ಹಾನಿಯಾಗಿದ್ದು, ಟೆಕ್ಕಿಗಳು ಡಿಕ್ಕಿಯ ರಭಸಕ್ಕೆ ಬೈಕ್​​​ನಿಂದ ಹಾರಿ ರೋಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಖಾಸಗಿ ಕಂಪನಿಯಲ್ಲಿ ಇಂಜಿನೀಯರ್​ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಲ್ಲರೂ ಅವಿವಾಹಿತರಾಗಿದ್ದು ಅತಿಯಾದ ವೇಗ, ಹೆಲ್ಮೆಟ್ ಬಳಸಿದಿರುವುದು ಹಾಗೂ ತ್ರಿಬಲ್ ರೈಡಿಂಗ್ ಈ ದುರ್ಘಟನೆಗೆ ಪ್ರಮುಖ ಕಾರಣ ಅನ್ನೋದು ಪೊಲೀಸರ ಪರಿಶೀಲನೆಯಿಂದ ಗೊತ್ತಾಗಿದೆ.

Intro:KN _BNG_03-6-19_ACCiDENT_7204498-BHAVYABody:KN _BNG_03-6-19_ACCiDENT_7204498-BHAVYAConclusion:KN _BNG_03-6-19_ACCiDENT_7204498-BHAVYA

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.