ETV Bharat / state

ವಿಸ್ಕಿ ಡಿಸ್ಟ್ರಿಬ್ಯೂಟರ್ ಮೇಲೆ ಹಲ್ಲೆ, ಅಪಹರಣ ಯತ್ನ ಆರೋಪದ ದೂರು ದಾಖಲು

ನಗರದಲ್ಲಿ ವಿಸ್ಕಿ ಡಿಸ್ಟ್ರಿಬ್ಯೂಟರ್​ವೊಬ್ಬರ ಮೇಲೆ ಹಲ್ಲೆಗೈದು, ಅಪಹರಣ ಮಾಡಲು ಯತ್ನಿಸಿರುವ ಘಟನೆ ನಿನ್ನೆ ಸಂಜೆ ನಾಗರಭಾವಿ ಎರಡನೇ ಹಂತದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

author img

By

Published : Mar 5, 2021, 1:19 PM IST

Deadly assault on a distributor at bangalore
ಡಿಸ್ಟ್ರಿಬ್ಯೂಟರ್ ಮೇಲೆ ಮಾರಣಾಂತಿಕ ಹಲ್ಲೆ, ಕಿಡ್ನಾಪ್ ಯತ್ನ ಆರೋಪ: ದೂರು ದಾಖಲು!

ಬೆಂಗಳೂರು: ವಿಸ್ಕ್​ ಡಿಸ್ಟ್ರಿಬ್ಯೂಟರ್​​ಗೆ ದುಡ್ಡಿನ ವಿಚಾರವಾಗಿ ಹಲ್ಲೆ ನಡೆಸಿ ಕಿಡ್ನಾಪ್​ಗೆ ಯತ್ನಿಸಿರುವ ಘಟನೆ ನಗರದ ನಾಗರಭಾವಿ ಎರಡನೇ ಹಂತದಲ್ಲಿ ನಡೆದಿದೆ.

ನಿನ್ನೆ ಸಂಜೆ ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ವಿಸ್ಕಿ ಡಿಸ್ಟ್ರಿಬ್ಯೂಟರ್ ಅವಿನಾಶ್ ಎಂಬುವವರ ಮೇಲೆ ಹಲ್ಲೆ ಮಾಡಿ ಅಪಹರಿಸಲು ಯತ್ನಿಸಲಾಗಿತ್ತು ಎಂದು ದೂರು ದಾಖಲಾಗಿದೆ.

ಅವಿನಾಶ್​ರಿಂದ ಪ್ರವೀಣ್ ಶೆಟ್ಟಿ ಎಂಬುವವರು 35 ಲಕ್ಷ ರೂ. ‌ಮೌಲ್ಯದ ಮದ್ಯ ಪಡೆದಿದ್ದರು. ಕೋವಿಡ್ ಬಂದ ಹಿನ್ನೆಲೆ ವಿಸ್ಕಿತಯನ್ನು ವಿತರಣೆ ಮಾಡಲಾಗಲಿಲ್ಲ ಎಂದು ಅವಿನಾಶ್​ರಿಗೆ ಪ್ರವೀಣ್ ಶೆಟ್ಟಿಯು ಹಣ ನೀಡಿರಲಿಲ್ಲ. ಈ ಹಿನ್ನೆಲೆ, ಪ್ರವೀಣ್ ಶೆಟ್ಟಿ ವಿರುದ್ಧ ಕೊರ್ಟ್​ನಲ್ಲಿ ಅವಿನಾಶ್ ಖಾಸಗಿ ದೂರು ದಾಖಲಿಸಿದ್ದರು. ಹಣದ ವಿಚಾರವಾಗಿ ಕರೆ ಮಾಡಿ ನಾಗರಭಾವಿ ಬಳಿ ಕರೆಸಿದ್ದ ಪ್ರವೀಣ್ ಶೆಟ್ಟಿ ಆಪ್ತ ಜೀವನ್ ಎಂಬಾತ, ಹಣ ಕೊಡದೆ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರವೀಣ್ ಶೆಟ್ಟಿ, ಜೀವನ್, ಮಂಜು ಹಾಗೂ ಪ್ರೀತಂ ಎಂಬ ನಾಲ್ವರಿಂದ ಹಲ್ಲೆ ನಡೆಯಾಗಿದೆ. ಹಲ್ಲೆ ಮಾಡಿದ ಬಳಿಕ ಕಾರಿನಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ವೇಳೆ ಅವಿನಾಶ್ ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಮೊಬೈಲ್ ಒಡೆದು ಹಾಕಿ ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಓದಿ: ತನ್ನಿಬ್ಬರು ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಅವಿನಾಶ್ ಕಿರುಚಿಕೊಂಡಾಗ ಸ್ಥಳೀಯರು ಹಾಗು ಕಾರು ಚಾಲಕ ಅಜಿತ್ ಸಹಾಯಕ್ಕೆ ಬಂದರು. ಆ ಬಳಿಕ ಅಪಹರಣಕ್ಕೆ ಯತ್ನಿಸಿದವರು ಪರಾರಿ ಆಗಿದ್ದಾರೆ. ಸದ್ಯ ಘಟನೆ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಅವಿನಾಶ್ ದೂರು ನೀಡಿದ್ದು, ಹಲ್ಲೆ, ಜೀವ ಬೆದರಿಕೆ ಹಾಗು ಕಿಡ್ನಾಪ್ ಯತ್ನದ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.