ETV Bharat / state

ರಾಜ್ಯಕ್ಕೆ ಇನ್ನಷ್ಟು ಲಸಿಕೆ ಅಗತ್ಯವಿದೆ: ಕೇಂದ್ರ ಸಚಿವರಿಗೆ ಡಿಸಿಎಂ ಅಶ್ವತ್ಥ ನಾರಾಯಣ ಮನವಿ - ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ್ ನಾರಾಯಣ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಲ್ಲಿ ಮನವಿ

ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಜನರ ಅನುಕೂಲತೆಗೆ ತಕ್ಕಂತೆ ಲಸಿಕೆ ಪೂರೈಸುವಂತೆ ಡಿಸಿಎಂ ಅಶ್ವತ್ಥ ನಾರಾಯಣ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಬಳಿ ವಿನಂತಿಸಿಕೊಂಡಿದ್ದಾರೆ.

DCM Ashwath Narayan
ಅಶ್ವತ್ಥ್ ನಾರಾಯಣ
author img

By

Published : May 20, 2021, 9:01 AM IST

ಬೆಂಗಳೂರು: ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಕೊಡಿಸಬೇಕು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ-ಉಪಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಪರಿಶ್ರಮದಿಂದ ಕೆಜಿಎಫ್‌ನಲ್ಲಿ ಜೀರ್ಣೋದ್ಧಾರ ಮಾಡಲಾದ ಬಿಜಿಎಂಎಲ್‌ ಆಸ್ಪತ್ರೆಯ ವರ್ಚುಯಲ್‌ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿಸಿಎಂ, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಲಸಿಕೆ ಕೊರತೆ ವಿಷಯವನ್ನು ತಿಳಿಸಿದರು. ಒಂದೆಡೆ ಕೋವಿಡ್‌ ಸೋಂಕಿತರನ್ನು ಪತ್ತೆ ಮಾಡುತ್ತಾ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ವ್ಯಾಕ್ಸಿನೇಷನ್‌ ಕೂಡ ಸಾಗುತ್ತಿದೆ. ಎರಡನೇ ಅಲೆ ತೀವ್ರವಾಗಿರುವ ಈ ಸಂದರ್ಭದಲ್ಲಿ ಲಸಿಕೆ ಬಹಳ ಅಗತ್ಯವಾಗಿದೆ. ಲಸಿಕೆಯು ಜನರನ್ನು ಉಳಿಸಲಿದೆ ಮಾತ್ರವಲ್ಲದೆ, ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸುತ್ತಿದೆ ಎಂದರು.

ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಕೂಡಲೇ ಈ ಬಗ್ಗೆ ಸಂಬಂಧಟ್ಟ ಸಚಿವರು, ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.

ಹೊಸದಾಗಿ 30,000 ಆಕ್ಸಿಜನ್‌ ಬೆಡ್‌: ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದಾಗಿ 30,000 ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿದೆ. ಈಗ ರಾಜ್ಯಾದ್ಯಂತ ಒಟ್ಟು 60,000 ಆಕ್ಸಿಜನ್‌ ಬೆಡ್‌ಗಳಿವೆ. ಗ್ರಾಮೀಣಮಟ್ಟದಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಅತ್ಯುತ್ತಮಪಡಿಸಲು ಸರ್ಕಾರ ನಿರ್ಧರಿಸಿದೆ. ಹಳ್ಳಿ ಪ್ರದೇಶದಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವುದನ್ನು ಮಾಡಲಾಗುತ್ತಿದೆ. ಇಡೀ ದೇಶದಲ್ಲೇ ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವಂತೆ ಮಾಡುವ ಪ್ರಯತ್ನ ನಡೆದಿದೆ ಎಂದರು.

ಕೋಲಾರ ರೆಡ್‌ ಝೊನ್‌ನಲ್ಲಿದೆ:

ಕೋವಿಡ್‌ ವಿಷಯದಲ್ಲಿ ಕೋಲಾರ ಜಿಲ್ಲೆಯು ಈಗ ರೆಡ್‌ ಝೋನ್‌ನಲ್ಲಿದೆ. ಸೋಂಕು ತಡೆಗೆ ಇನ್ನೂ ಹೆಚ್ಚಿನ ಕ್ರಮ ವಹಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಸ್ಥಳೀಯ ಮಟ್ಟದಲ್ಲೇ ಟಾಸ್ಕ್‌ ಫೋರ್ಸ್‌ಗಳನ್ನು ರಚನೆ ಮಾಡಿ ಮನೆ ಮನೆಗೂ ಹೋಗಿ ಸೋಂಕಿತರನ್ನು ಪತ್ತೆ ಮಾಡಬೇಕು. ಟೆಲಿ ಟ್ರಾಯಾಜಿಂಗ್‌ ಮತ್ತು ಭೌತಿಕ ಟ್ರಾಯಾಂಜಿಂಗ್‌ ಹೆಚ್ಚಿಸಬೇಕು. ಮನೆ ಮನೆಯನ್ನೂ ಸಮೀಕ್ಷೆ ಮಾಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಸೋಂಕಿತರ ಸಂಪರ್ಕಿತರನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಪತ್ತೆ ಹಚ್ಚಲಾಗುತ್ತಿದೆ. ಆದರೆ, ಕೋವಿಡ್‌ ಪರೀಕ್ಷೆ ರಿಸಲ್ಟ್‌ ಕೊಡಲು ಎರಡು ದಿನಕ್ಕೂ ಹೆಚ್ಚಿನ ಸಮಯ ಆಗುತ್ತಿದೆ. 24 ಗಂಟೆಯೊಳಗೆ ಅಥವಾ ಅದಕ್ಕೂ ಮುನ್ನವೇ ರಿಸಲ್ಟ್ ಕೊಡುವ ವ್ಯವಸ್ಥೆ ಮಾಡಿ. ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಯಾರನ್ನೂ ಹೋಮ್‌ ಐಸೋಲೇಷನ್‌ ಮಾಡಬೇಡಿ. ಎಲ್ಲರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್​ಗೆ ಶಿಫ್ಟ್‌ ಮಾಡಿ ಚಿಕಿತ್ಸೆ ಕೊಡಿ ಎಂದು ಜಿಲ್ಲಾಧಿಕಾರಿಗೆ ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಜತೆಗೆ ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌, ಕೋಲಾರದ ಲೋಕಸಭೆ ಸದಸ್ಯ ಎಸ್.‌ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.‌ಸೆಲ್ವಮಣಿ ಮುಂತಾದವರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.