ETV Bharat / state

ಅಕ್ಟೋಬರ್​ 3 ರಿಂದ 7ರ ವರೆಗೆ ಹೈಕೋರ್ಟ್​​​​​ಗೆ ದಸರಾ ರಜೆ - ಕರ್ನಾಟಕ ಹೈಕೋರ್ಟ್​​​ಗೆ ದಸರಾ ರಜೆ

ಹೈಕೋರ್ಟ್​ಗೆ ದಸರಾ ರಜೆ. ಅಕ್ಟೋಬರ್ 3 ರಿಂದ 7ರವರೆಗೆ ಹೈಕೋರ್ಟ್​ಗೆ ರಜೆ.

ಹೈಕೋರ್ಟ್​​​​​ಗೆ ದಸರಾ ರಜೆ
ಹೈಕೋರ್ಟ್​​​​​ಗೆ ದಸರಾ ರಜೆ
author img

By

Published : Sep 29, 2022, 8:07 PM IST

ಬೆಂಗಳೂರು: ಅಕ್ಟೋಬರ್ 3ರಿಂದ 7ರವರೆಗೆ ಕರ್ನಾಟಕ ಹೈಕೋರ್ಟ್​​​ಗೆ ದಸರಾ ರಜೆ ಇರಲಿದೆ ಎಂದು ಹೈಕೋರ್ಟ್ ಅಧಿಸೂಚನೆಯಲ್ಲಿ ತಿಳಿಸಿದೆ. ಅಕ್ಟೋಬರ್ 6 ರಂದು ರಜೆ ಕಾಲದ ಪೀಠಗಳು ಕಾರ್ಯನಿರ್ವಹಿಸಲಿವೆ. ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದಲ್ಲಿ ವಿಭಾಗೀಯ ಪೀಠ ನ್ಯಾಯಮೂರ್ತಿಗಳಾದ ಎನ್ ಎಸ್ ಸಂಜಯ್ ಗೌಡ, ಎಂ ಜಿ ಎಸ್ ಕಮಲ್ ಮತ್ತು ಸಿ ಎಂ ಪೂಣಚ್ಚ ಅವರು ಏಕ ಸದಸ್ಯ ಪೀಠಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುಯಲ್ ವಿಧಾನದಲ್ಲಿ ವಿಚಾರಣೆ ನಡೆಸಲಾಗುತ್ತದೆ. ತುರ್ತು ಮಧ್ಯಂತರ ಆದೇಶ, ತಡೆಯಾಜ್ಞೆ ಮತ್ತು ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತದೆ.

ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಕ್ಟೋಬರ್ 3ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಫೈಲ್ ಮಾಡಬಹುದಾಗಿದೆ. ಇ-ಫೈಲಿಂಗ್ ಪೋರ್ಟಲ್ ಮೂಲಕ ಅರ್ಜಿ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಭಾರಿ ನ್ಯಾಯಿಕ ರಿಜಿಸ್ಟ್ರಾರ್ ಕೆ ಎಸ್ ಭರತ್ ಕುಮಾರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

(ಓದಿ: ಅಪ್ರಾಪ್ತೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.