ಬೆಂಗಳೂರು: ಅತೃಪ್ತ ಶಾಸಕರು ನಮ್ಮವರೇ ಆಗಿರುವುದರಿಂದ ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂಬ ಉದ್ದೇಶವನ್ನು ನಾವು ಹೊಂದಿದ್ದೆವು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಪಗಾವಲಿನಲ್ಲಿ ಶಾಸಕರು ಇದ್ದಾರೆ. ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ಹೋಗಿದ್ದಾರೆ ಎಂದರು.
ಇದೇ ವೇಳೆ ಮಾತನಾಡುತ್ತಾ ಅವರು, ನಾವು ಎಂದಿಗೂ ಯಾರನ್ನು ಭಯದಿಂದಿರಿಸಲು ಪ್ರಯತ್ನಿಸಿಲ್ಲ, ನಾವು ಅವರನ್ನು ಪ್ರೀತಿಯಿಂದ ಮನವೊಲಿಸಬೇಕು ಎಂದುಕೊಂಡಿದ್ವಿ. ಆದ್ರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.