ಬೆಂಗಳೂರು: ಗುರುವಾರ ರಾತ್ರಿಯಿಂದ ರಾಜ್ಯದಲ್ಲಿ ಜಾರಿಯಾಗಲಿರುವ ನೈಟ್ ಕರ್ಫ್ಯೂ ಅನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಿಂದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಿಎಸ್ ವಿಜಯ ಭಾಸ್ಕರ್ ವಿಡಿಯೋ ಸಂವಾದ ನಡೆಸಿದರು. ಕೊರೊನಾ ರೂಪಾಂತರ ವೈರಾಣು ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ರಾತ್ರಿ 11 ರಿಂದ ಮುಂಜಾನೆ 5 ಗಂಟೆವರೆಗೂ ಕರ್ಫ್ಯೂ ವಿಧಿಸಲಾಗಿದೆ. ಗುರುವಾರ ರಾತ್ರಿಯಿಂದ ಜನವರಿ 2 ರ ಬೆಳಗ್ಗೆ 5 ಗಂಟೆಗೂ ಕರ್ಫ್ಯೂ ಇರಲಿದ್ದು ಎಲ್ಲಾ ಜಿಲ್ಲೆಗಳಲ್ಲಿಯೂ ಯಾವುದೇ ಲೋಪದೋಶಗಳಾಗದ ರೀತಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದರು.
ಇದನ್ನೂ ಓದಿ : ಆಸ್ಪತ್ರೆಯಿಂದಲೇ ಸಿಎಂ ಆಡಳಿತ ನಿರ್ವಹಣೆ : ಮಳೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ
ಬ್ರಿಟನ್ ಸೇರಿದಂತೆ ವಿದೇಶದಿಂದ ಬಂದಿರುವ ಪ್ರಯಾಣಿಕರ ಮೇಲೆ ನಿಗಾ ಇರಿಸಬೇಕು. ಕ್ವಾರಂಟೈನ್ ಪೂರ್ಣಗೊಳಿಸಯವಂತೆ ನೋಡಿಕೊಳ್ಳಬೇಕು. ಪಾಸಿಟಿವ್ ಬಂದ ವಿದೇಶ ಪ್ರವಾಸ ಇತಿಹಾಸ ಇರುವ ವ್ಯಕ್ತಿಗಳಿಗೆ ರೂಪಾಂತರ ವೈರಸ್ ಇದೆಯೋ ಎಲ್ಲವೋ ಎನ್ನುವುದು ಖಚಿತಗೊಳ್ಳುವವರೆಗೂ ಅವರನ್ನು ಹೊರಗಡೆ ಎಲ್ಲೂ ಹೋಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು ಎನ್ನಲಾಗಿದೆ.