ETV Bharat / state

ಇ-ಆಫೀಸ್ ಮೂಲಕವೇ ಕಡತ ವ್ಯವಹಾರ ಮಾಡುವಂತೆ ಸಿಎಸ್ ಆದೇಶ - e-Office start from October 1

ಸಚಿವಾಲಯಕ್ಕೆ ಕಳುಹಿಸುವ ಎಲ್ಲಾ ಪತ್ರಗಳು/ವರದಿಗಳನ್ನು e-office ನಲ್ಲಿ ಸ್ವೀಕೃತಿಗಳಾಗಿ ಕಳುಹಿಸಬೇಕು. ಈ ಆದೇಶ ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದ್ದು, ಆದೇಶವನ್ನು ಉಲ್ಲಂಘಿಸುವ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು‌ ಎಂದು ತಿಳಿಸಲಾಗಿದೆ.

CS orders file transactions via e-office from October 1
ಇ-ಆಫೀಸ್ ಮೂಲಕ ಕಡತ ವ್ಯವಹಾರ
author img

By

Published : Sep 16, 2021, 3:53 AM IST

ಬೆಂಗಳೂರು: ಜಿಲ್ಲಾಧಿಕಾರಿಗಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ, ಇಲಾಖಾ ಮುಖ್ಯಸ್ಥರುಗಳ ಎಲ್ಲಾ ಕಛೇರಿಗಳಲ್ಲಿ ಎಲ್ಲಾ ಕಡತಗಳನ್ನು ಹಾಗೂ ಪತ್ರಗಳನ್ನು ಇ-ಆಫೀಸ್ ಮೂಲಕವೇ ವ್ಯವಹರಿಸುವಂತೆ ಸರ್ಕಾರ ಆದೇಶ ಹೊರಡಿಸಲಾಗಿದೆ.

ಸಿಎಂ ನಿರ್ದೇಶನದ ಮೇರೆಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈ‌ ಆದೇಶ ಹೊರಡಿಸಿದ್ದು, ಅಕ್ಟೋಬರ್​ನಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳು ತಮ್ಮ ಪ್ರಸ್ತಾವನೆಗಳು, ಪತ್ರಗಳು ಹಾಗೂ ವರದಿಗಳನ್ನು ಸಂಬಂಧಪಟ್ಟ ಸರ್ಕಾರದ ಕಾರ್ಯದರ್ಶಿಗಳಿಗೆ ಇ-ಆಫೀಸ್ ಮೂಲಕವೇ ಚಲನವಲನಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಯು ಸಂಬಂಧಿಸಿದ ಕಾರ್ಯದರ್ಶಿಗೆ ಪ್ರಸ್ತಾವನೆಗಳನ್ನು ಏಕ ಕಡತ ರೀತಿಯಲ್ಲಿ e-office ಮೂಲಕವೇ ಕಳುಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ಅರ್ಜಿಗಳನ್ನು ವಿಲೇಗೊಳಿಸಬೇಕು ಅಥವಾ ಸಂಬಂಧಿಸಿದ ಸಚಿವರಿಗೆ ಆದೇಶಕ್ಕಾಗಿ ಸಲ್ಲಿಸಬೇಕು. ವಿಷಯದ ಬಗ್ಗೆ ಹೆಚ್ಚುವರಿ ಮಾಹಿತಿ ಬೇಕಾಗುವಂಥ ಅಸಾಧಾರಣ ಪ್ರಕರಣಗಳ ಇ-ಆಫೀಸ್ ಕಡತಗಳನ್ನು ಸಚಿವ ಸಂಪುಟದ ಮುಂದೆ ತರಬೇಕಾಗುವಂಥ ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ಮಾತ್ರ ಕಾರ್ಯದರ್ಶಿಯವರು ಸಂಬಂಧಿಸಿದ ಉಪ ಕಾರ್ಯದರ್ಶಿಗಳಿಗೆ ಕಳುಹಿಸಬಹುದು ಎಂದು ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.