ETV Bharat / state

ನಿಶಾ ನರಸಪ್ಪ ವಿರುದ್ದ 30ಕ್ಕೂ ಹೆಚ್ಚು ಜನರಿಂದ ದೂರು: ಪುನೀತ್, ಶಿವರಾಜ್‌ಕುಮಾರ್‌ ಹೆಸರಲ್ಲೂ ವಂಚನೆ - ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿ

ನಟ ಮಾಸ್ಟರ್​ ಆನಂದ್​ ಅವರ ಮಗಳ ಹೆಸರಲ್ಲಿ ವಂಚಿಸಿದ ಆರೋಪ ಹೊತ್ತಿರುವ ನಿಶಾ ನರಸಪ್ಪ ಎಂಬ ಮಹಿಳೆಯ ವಿರುದ್ಧ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

fraud-in-name-of-master-anand-daughter-30-cases-booked-against-nisha
ನಿಶಾ ನರಸಪ್ಪ ವಿರುದ್ದ 30ಕ್ಕೂ ಹೆಚ್ಚು ಜನರಿಂದ ದೂರು: ಪುನೀತ್, ಶಿವರಾಜ್‌ಕುಮಾರ್‌ ಹೆಸರಲ್ಲೂ ವಂಚನೆ
author img

By

Published : Jul 18, 2023, 8:52 AM IST

ಬೆಂಗಳೂರು : ಸಿನಿಮಾ ತಾರೆಯರ ಮಕ್ಕಳ ಹೆಸರಿನಲ್ಲಿ ವಂಚಿಸಿದ ಆರೋಪ ಹೊತ್ತಿರುವ ನಿಶಾ ನರಸಪ್ಪ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಈಕೆಯ ವಿರುದ್ಧ ಪೊಲೀಸ್ ಠಾಣೆಗೆ ಬರುವ ದೂರುದಾರರ ಸಂಖ್ಯೆ ಹೆಚ್ಚುತ್ತಿದೆ. ಚೀಟಿಂಗ್ ಚಾತುರ್ಯದ ಮತ್ತಷ್ಟು ವಿಚಾರಗಳು ಬಯಲಾಗುತ್ತಿವೆ. ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಗಂಭೀರ ಆರೋಪ ನಿಶಾ ನರಸಪ್ಪ ಮೇಲಿದ್ದು, ಸದ್ಯ ಜೈಲುವಾಸಿಯಾಗಿದ್ದಾರೆ.

ಸದಾಶಿವನಗರ, ಯಲಹಂಕ ಠಾಣೆಗೆ ಮತ್ತಷ್ಟು ಮಂದಿ ದೂರು ನೀಡಲು ಆಗಮಿಸುತ್ತಿದ್ದಾರೆ. ನಿಶಾ ವಂಚನೆಯ ಹೊಸ ಹೊಸ ವಿಚಾರಗಳೂ ಬಯಲಿಗೆ ಬರುತ್ತಿವೆ.

ಪುನೀತ್​ ರಾಜ್​ಕುಮಾರ್, ಶಿವರಾಜ್‌ ಕುಮಾರ್ ಹೆಸರಲ್ಲಿ ವಂಚನೆ ಆರೋಪ : ದೊಡ್ದ ದೊಡ್ಡ ಸ್ಟಾರ್‌ಗಳ ಹೆಸರು ಬಳಸಿಕೊಳ್ಳುತ್ತಿದ್ದ ನಿಶಾ, ದಿ. ಪುನೀತ್ ರಾಜ್‌ಕುಮಾರ್ ಹೆಸರನ್ನೂ ಬಿಟ್ಟಿಲ್ಲ. ಅಪ್ಪು ಅವರಿಗೆ ಟ್ರಿಬ್ಯೂಟ್ ಸಾಂಗ್ ಮಾಡ್ತಿದ್ದೀವಿ, ಅದರಲ್ಲಿ ನಿಮ್ಮ ಮಕ್ಕಳನ್ನೂ ಕುಣಿಸ್ತೀವಿ ಎಂದು ಹಲವರಿಂದ ಹಣ ಪಡೆದಿರುವ ಆರೋಪೂ ಇದೆ. ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ಸೇರಿ ಹಲವು ಸಿನಿಮಾ ನಟರ ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂಬ ಸಾಲು ಸಾಲು ಆರೋಪಗಳು ಕೇಳಿಬಂದಿವೆ.

ಇಲ್ಲಿಯವರೆಗೆ ಆನ್‌ಲೈನ್, ವ್ಯಾಟ್ಸ್‌ಆ್ಯಪ್ ಹಾಗು ನೇರ ದೂರುಗಳು ಸೇರಿ ಒಟ್ಟು 30ಕ್ಕೂ ಹೆಚ್ಚು ಜನರಿಂದ ದೂರುಗಳು ಬಂದಿದ್ದು, ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ ಎಂದು ಹೇಳಲಾಗ್ತಿದೆ. ನಿಶಾ ಅವರನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಅಡ್ಮಿಷನ್​ ಬ್ಯಾರಕ್​ನಲ್ಲಿ‌ ಈಕೆಯನ್ನು ಇರಿಸಲಾಗಿದೆ.

ಮತ್ತೊಂದೆಡೆ ಆರೋಪಿಯ ಟೀಂ ಇನ್ಸ್ಟಾಗ್ರಾಮ್‌ನಲ್ಲಿ, ಎಲ್ಲದಕ್ಕೂ ಉತ್ತರ ಕೊಡ್ತೀವಿ. ಏನೂ ಆಗಿಲ್ಲ. ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರು ಮಾಡಿಕೊಳ್ಳಿ ಎಂದು ಮತ್ತೆ ಅಮಾಯಕ ಜನರಿಗೆ ಮೋಸದ ಬಲೆ ಬೀಸಲಾಗುತ್ತಿದೆ.

ಆನಂದ್​ ಪುತ್ರಿ ಹೆಸರಲ್ಲಿ ವಂಚನೆ : ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿಯ ಹೆಸರು ಬಳಸಿ ವಂಚನೆ ಎಸಗಿದ ಆರೋಪದಡಿ ನಿಶಾ ನರಸಿಂಹಪ್ಪರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯವು ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿದ್ಯಾರಣ್ಯಪುರ ನಿವಾಸಿಯಾಗಿರುವ ನಿಶಾ ವಿರುದ್ಧ ಆನಂದ್ ಪತ್ನಿ ಯಶಸ್ವಿನಿ ದೂರು ನೀಡಿದ್ದರು.

ಕಳೆದ‌ ನಾಲ್ಕು ವರ್ಷಗಳಿಂದ ಈವೆಂಟ್ ಮ್ಯಾನೇಜ್​ಮೆಂಟ್ ಕೆಲಸ‌ ಮಾಡುತ್ತಿದ್ದ ನಿಶಾ, ಎನ್​ಎನ್‌ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದ್ದರು. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಆ್ಯಕ್ಟಿಂಗ್ ಕ್ಲಾಸ್, ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನೆಲ್​ನಲ್ಲಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಹಲವು ಮಕ್ಕಳ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ : ನಟ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಮೋಸದ ಆರೋಪ: ಆರೋಪಿ ಮಹಿಳೆ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.