ETV Bharat / state

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಯ ಬಂಧನ: ಜೂಜುಕೋರರ ವಿರುದ್ಧ ನಿಗಾ ಇಟ್ಟಿರುವ ಸಿಸಿಬಿ - ಇಂಡಿಯನ್ ಪ್ರೀಮಿಯರ್ ಲೀಗ್

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐವರು ಬುಕ್ಕಿಗಳನ್ನು ಬಂಧನ ಮಾಡಿರುವ ಇಲ್ಲಿನ ಸಿಸಿಬಿ ಪೊಲೀಸರು, 5 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಸಿಸಿಬಿ ಈ ಬಗ್ಗೆ ವಿಶೇಷ ನಿಗಾ ಸಹ ಇಟ್ಟಿದೆ.

Cricket betting: Five accused arrested in Bengaluru
ಸಾಂದರ್ಭಿಕ ಚಿತ್ರ
author img

By

Published : Apr 20, 2021, 6:14 PM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ರಂಗೇರುತ್ತಿದ್ದು, ಇದರ ಜೊತೆಗೆ ನಗರದಲ್ಲಿ ಬೆಟ್ಟಿಂಗ್ ಮಾಫಿಯಾ ಸಹ ಹೆಚ್ಚಾಗಿದೆ. ಆ್ಯಪ್​​​ಗಳ ಮುಖಾಂತರ ಬೆಟ್ಟಿಂಗ್ ಆಡಿ ಹಣ ಸಂಪಾದನೆ ಮಾಡುತ್ತಿದ್ದ ಬುಕ್ಕಿಯನ್ನು ಬಾಣಸವಾಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಜೋಸೆಫ್ ಯುನೀಸ್ ಬಂಧಿತ ಆರೋಪಿ. ನಿನ್ನೆ ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ನಡೆದ ಪಂದ್ಯದ ಸೋಲು-ಗೆಲುವಿನ ಬಗ್ಗೆ ಮೊಬೈಲ್ ಆ್ಯಪ್​ಗಳ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡಿದ್ದರು. ಜುಜುಕೋರರಿಗೆ ಆ್ಯಪ್ ಮೂಲಕ ಜೊಸೆಫ್ ಮಾಹಿತಿ ನೀಡುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬುಕ್ಕಿಯನ್ನು ಬಂಧಿಸಿ ಆತನಿಂದ 86 ಸಾವಿರ ರೂ‌. ನಗದು ಮತ್ತು ಮೊಬೈಲ್​​ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಭರ್ಜರಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಈ ಬಗ್ಗೆ ವಿಶೇಷ ನಿಗಾ ಇಟ್ಟಿದೆ. ಇನ್ನು ಈಗಾಗಲೇ ಒಟ್ಟು 5 ಬೆಟ್ಟಿಂಗ್ ಪ್ರತ್ಯೇಕ ಪ್ರಕರಣಗಳು ದಾಖಲಿಸಿಕೊಂಡಿರುವ ಪೊಲೀಸರು, ಐವರು ಬುಕ್ಕಿಗಳನ್ನು ಅರೆಸ್ಟ್ ಮಾಡಿ 15 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.