ಬೆಂಗಳೂರು: ನಗರದ ಕೋವಿಡ್ ಪ್ರಕರಣದ ಪ್ರಮಾಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, 8,696 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೊಮ್ಮನಹಳ್ಳಿ- 935, ಬೆಂಗಳೂರು ಪೂರ್ವ- 1,131, ಮಹಾದೇವಪುರ- 1,298, ಬೆಂಗಳೂರು ದಕ್ಷಿಣ- 858, ಬೆಂಗಳೂರು ಪಶ್ಚಿಮ- 724, ಆರ್‌ಆರ್ ನಗರ- 534 , ದಾಸರಹಳ್ಳಿ- 376 , ಯಲಹಂಕ- 658 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 1,388 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಿನ್ನೆ ನಗರದಲ್ಲಿ 13,338 ಪ್ರಕರಣಗಳು ಪತ್ತೆಯಾಗಿತ್ತು. 239 ಮಂದಿ ಮೃತಪಟ್ಟಿದ್ದರು. ಸದ್ಯ 3,64,382 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಮೇ. 16ರಂದು 27,943 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 35.56%ರಷ್ಟಿದೆ.
ಇದನ್ನೂ ಓದಿ: ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಕೊರೊನಾ: ಗರ್ಭಿಣಿಯರಲ್ಲಿ ಆತಂಕ