ETV Bharat / state

ಲಾಕ್​ಡೌನ್​ ಬೈಕ್​ ಜಪ್ತಿ.. 1 ಸಾವಿರ ರೂ. ಲಂಚಕ್ಕೆ ಕೈಚಾಚಿ ಕೆಲಸ ಕಳೆದುಕೊಂಡ ಕಾನ್​ಸ್ಟೇಬಲ್​!

author img

By

Published : May 25, 2021, 7:47 PM IST

ನ್ಯಾಯಾಲಯದ ಮಾರ್ಗಸೂಚಿ ಅನ್ವಯ ₹500 ದಂಡ ವಿಧಿಸಿ ರಸೀದಿ ನೀಡಬೇಕು. ಹೀಗಿದ್ದರೂ ಹಣ ಪಡೆದು ಅಕ್ರಮವಾಗಿ ಬೈಕ್ ಬಿಟ್ಟು ಕಳುಹಿಸುವ ಅಶಿಸ್ತು ಮೆರೆದಿದ್ದರು..

constable-suspended-by-dcp-c-k-baba-in-bengalore
ಕಾನ್‌ಸ್ಟೇಬಲ್​ ಸಸ್ಪೆಂಡ್

ಬೆಂಗಳೂರು : ಕೊರೊನಾ ನಿಯಮ‌ ಉಲ್ಲಂಘನೆ ಹಿನ್ನೆಲೆ ಜಪ್ತಿ ಮಾಡಿಕೊಂಡಿದ್ದ ಬೈಕ್​ನ ಸವಾರನ ಬಳಿ ಹಣ ಪಡೆದು ಬಿಟ್ಟು ಕಳುಹಿಸಿದ್ದ ಆರೋಪದಡಿ ಕಾನ್‌ಸ್ಟೇಬಲ್​ವೊಬ್ಬರನ್ನು ಅಮಾನತು ಮಾಡಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಆದೇಶ ಹೊರಡಿಸಿದ್ದಾರೆ‌.

ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಬೂಬಕರ್ ಅಮಾನತುಗೊಂಡವರು. ಲಾಕ್​ಡೌನ್​ ಹಿನ್ನೆಲೆ ವಾಹನ ತಪಾಸಣೆಗಾಗಿ ಒಳಪಡಿಸಲು ಮೇ 23 ರಂದು ಹೆಗಡೆ ನಗರ ಸರ್ಕಲ್ ಬಳಿ ಮೇಲಾಧಿಕಾರಿಗಳು ಅವರನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರು.

ಈ ವೇಳೆ ಅನಗತ್ಯ ಸಂಚಾರ ನಡೆಸುತ್ತಿದ್ದ ಇಮ್ರಾನ್ ಪಾಷಾ ಎಂಬುವರ ಸುಜುಕಿ ಬೈಕ್ ತಡೆದು‌ ಮುಟ್ಟುಗೋಲು ಹಾಕಿಕೊಂಡಿದ್ದರು.

ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಬೈಕ್ ಮಾಲೀಕ ಇಮ್ರಾನ್ ಪಾಷಾರಿಂದ ₹1 ಸಾವಿರ ಹಣ ಪಡೆದು ಬೈಕ್ ಕೊಟ್ಟು ಕಳುಹಿಸಿದ್ದರು.

ನ್ಯಾಯಾಲಯದ ಮಾರ್ಗಸೂಚಿ ಅನ್ವಯ ₹500 ದಂಡ ವಿಧಿಸಿ ರಸೀದಿ ನೀಡಬೇಕು. ಹೀಗಿದ್ದರೂ ಹಣ ಪಡೆದು ಅಕ್ರಮವಾಗಿ ಬೈಕ್ ಬಿಟ್ಟು ಕಳುಹಿಸುವ ಅಶಿಸ್ತು ಮೆರೆದಿದ್ದರು. ಈ ಹಿನ್ನೆಲೆ ಕಾನ್ಸ್ಟೇಬಲ್​ನ ಅಮಾನತುಗೊಳಿಸಿ ಡಿಸಿಪಿ ಆದೇಶಿಸಿದ್ದಾರೆ.

ಓದಿ: ನಿವಾಸದಲ್ಲಿ ಅಂತರ... ಪ್ರವಾಸದಲ್ಲಿ ಹರೋಹರ: ರೂಲರ್​ಗಳಿಗೆ ಯಾಕಿಲ್ಲ ರೂಲ್ಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.